ಪಾವಗಡ: ಇಮ್ರಾನ್ ಉಲ್ಲಾ.
ಪಾವಗಡ ಮಂಡಲದ ತಿಮ್ಮಮ್ಮನಹಳ್ಳಿ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಮಂಡಲ ಅಧ್ಯಕ್ಷರಾದ ರವಿಶಂಕರ್ ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ತಿಮ್ಮಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಪಾವಗಡ ತಾಲೂಕು ಮಂಡಲ ಅಧ್ಯಕ್ಷರಾದ ರವಿಶಂಕರ್ ನಾಯ್ಕ್ ಮಾತನಾಡಿ ವಿಜಯ ಸಂಕಲ್ಪ ಅಭಿಯಾನ ಎಂದರೇನು? ಮೋದಿ ಅವರ ಕಾರ್ಯವೈಕರಿಗಳು ಮತ್ತು ಅಭಿವೃದ್ಧಿ ಕೆಲಸಗಳ ಮಾಡಿರುವ ಬಗ್ಗೆ ತಿಳಿಸಲು ಮತ್ತು ನಾವುಗಳು ನಿಮ್ಮಲ್ಲಿ ವೋಟು ಕೇಳಲು ನಿಮ್ಮ ಬಳಿ ಬಂದಿಲ್ಲ. ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ ಕ್ರಮಗಳ ಬಗ್ಗೆ ತಮ್ಮಲ್ಲಿ ಅರಿವು ಮೂಡಿಸಿ ತದನಂತರ ಈ ಭಾಗದಲ್ಲಿ ಸ್ಥಳೀಯ ಬಿಜೆಪಿ ಶಾಸಕರು ಇದ್ದಿದ್ದರೆ ಇನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿ ವಾಗುತ್ತಿತ್ತು ಎಂಬುದರ ಬಗ್ಗೆ ತಮ್ಮಲ್ಲಿ ಅರಿವು ಮೂಡಿಸಲು ಬಂದಿದ್ದೇವೆ ಎಂದರು.

ನಂತರ ಬಿಜೆಪಿ ಹಿರಿಯ ಮುಖಂಡ ಡಾ. ವೆಂಕಟರಾಮಯ್ಯ ಅವರು ಮಾತನಾಡಿ ಇತ್ತೀಚೆಗೆ ಕೋಟಿಗಳು ವೆಚ್ಚ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗುದ್ದಲಿ ಪೂಜೆಗಳು ಮಾಡಿಕೊಂಡ ಓಡಾಡುತ್ತಿರುವ ಈ ಭಾಗದ ಶಾಸಕರು ಅದು ಕೇವಲ ಪೇಪರ್ಗಳಲ್ಲಿ ಮಾತ್ರ ಸೀಮಿತ ಗೊಂಡಿದೆ ಹೊರತು ಯಾವುದೇ ಅಭಿವೃದ್ಧಿಯ ಕಂಡುಬಂದಿಲ್ಲ. ನಾಗಲಮಟ್ಗೆ ತಿಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸುಮಾರು 20 30 ವರ್ಷಗಳಿಂದ ಅದೇ ಗುಂಡಿಗಳಿಂದ ಕೂಡಿರೋದು ನಾವು ಈಗಲೂ ಕಾಣಬಹುದಾಗಿದೆ. ಸ್ಥಳೀಯ ಜನರು ಅಭಿವೃದ್ಧಿಯ ಬಗ್ಗೆ ಕೇಳಿದರೆ ಸ್ಥಳೀಯ ಶಾಸಕರು ಕಪಾಳಮೋಕ್ಷ ಸಹ ಮಾಡಿರುವ ನಿದರ್ಶನಗಳು ನಾವು ಕಾಣಬಹುದಾಗಿದೆ. ಇಂತಹ ಶಾಸಕರು ನಮಗೆ ಬೇಕೆ. ಹಾಗಾಗಿ ಪ್ರತಿಯೊಬ್ಬರಲ್ಲಿ ಹೊಸಬರನ್ನು ಕಾಣಬೇಕು ಈ ಭಾಗದಲ್ಲಿ ಎಂಬುದಾಗಿ ನಿಶ್ಚಯಿಸಿದ್ದಾರೆ ಹಾಗಾಗಿ ಬದಲಾವಣೆ ತನ್ನಿ. ಕಾಂಗ್ರೆಸ್ ನಲ್ಲಿಯೇ ಇತ್ತೀಚೆ ಗುಂಪುಗಾರಿಕೆ ಹೆಚ್ಚಾಗಿ ನಡೆಯುತ್ತಿದ್ದಾರೆ ಆ ಗುಂಪುಗಾರಿಕೆ ಮಾಡುತ್ತಿರುವರು ಪ್ರತಿಯೊಬ್ಬರು ಹೈಕಮಾಂಡ್ ನತ್ತ ಮುಖ ಮಾಡಿ ಓಡಾಡುತ್ತಿರುವುದು ಕಾಣಬಹುದಾಗಿದೆ. ಬಿಜೆಪಿಯಲ್ಲಿ ಯುವಕರ ಹೆಚ್ಚಾಗಿ ಆಸಕ್ತಿ ವಹಿಸುತ್ತಿರುವುದು ಕಾಣಬಹುದು ಎಂದರು.
ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಮಮ್ಮನಹಳ್ಳಿ ಗ್ರಾಮದ ಬೂತ್ ಮಟ್ಟದಲ್ಲಿ ಬಿಜೆಪಿ ಪ್ರಬಲ ಆಕಾಂಕ್ಷಿಯಾದ ಕೊತ್ತೂರು ಹನಮಂತರಾಯಪ್ಪ
#ವಿಜಯಸಂಕಲ್ಪಅಭಿಯಾನ ಅಂಗವಾಗಿ ಮನೆ ಮನೆಗೆ ಕರಪತ್ರ ಹಾಗೂ ಕ್ಯಾಲೆಂಡರ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಮೂಲಕ ವಿಜಯ ಸಂಕಲ್ಪ ಅಭಿಯಾನದಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಈ ಭಾಗದಲ್ಲಿ 30.40 ವರ್ಷಗಳಿಂದ ಕಾಂಗ್ರೆಸ್ ಜೆಡಿಎಸ್ ಆಡಳಿತ ನಡೆಸಿದ್ದಾರೆ ಆದರೆ ಯಾವುದೇ ಶಾಶ್ವತ ಅಭಿವೃದ್ಧಿ ಮಾತ್ರ ಕಂಡಿಲ್ಲ ಅವರಿಬ್ಬರಿಗೆ ಮುಂದಿನ ದಿನಗಳಲ್ಲಿ ಮತದಾರರಲ್ಲಿ ಮತ ಕೇಳುವ ನೈತಿಕತೆ ಅವರಿಗೆ ಇಲ್ಲ. ನಮ್ಮ ಬಿಜೆಪಿ ಸರ್ಕಾರ ಬಡವರ ಪರ ದೀನ ದಲಿತರ ಪರ ಜನಸಾಮಾನ್ಯರ ಪರ ಶೋಷಿತ ವರ್ಗದವರ ಪರವಾಗಿ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿ ಯಾರೇ ಇರಬಹುದು ಆದರೆ ಈ ಭಾಗದಲ್ಲಿ ಬಿಜೆಪಿ ಶಾಸಕರ ಕಾಣಬೇಕು ಎಂಬುದು ನಿಮ್ಮೆಲ್ಲರ ಆಸೆಯಂತೆ ಜನರಿಗೆ ಬಿಜೆಪಿ ಶಾಸಕರ ಈ ಭಾಗದಲ್ಲಿ ತಮ್ಮೆಲ್ಲರ ಆಶೀರ್ವಾದದಿಂದ ತರಬೇಕಾಗಿದೆ ಎಂದರು.
ಇದೇ ವೇಳೆ ಪಾವಗಡ ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಆಕಾಂಕ್ಷೆ ಅಭ್ಯರ್ಥಿಯಾದ ವಕೀಲ ಕೃಷ್ಣನಾಯ್ಕ್ ಮಾತನಾಡಿ ತಿಮ್ಮನಹಳ್ಳಿ ಗ್ರಾಮ ನನಗೆ ತವರೂರು ಇದ್ದಹಾಗೆ ಈ ಹಿಂದೆಯೂ ಸಹ ಹಲವು ಬಾರಿ ಈ ಭಾಗಕ್ಕೆ ಬಂದು ಹೋಗಿದ್ದೇನೆ ಆದರೆ ಈ ಸ್ಥಳೀಯರ ಯುವಕರಲ್ಲಿ ಬಹಳಷ್ಟು ಆತ್ಮೀಯತೆ ಇದ್ದು ಮೊದಲ ಬಾರಿಗೆ ಗ್ರಾಮಕ್ಕೆ ಬಂದಂತಹ ವೇಳೆಯಲ್ಲಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ಕೊಳವೆ ಬೋರಿನ ವ್ಯವಸ್ಥೆ ಮಾಡಿದೆ. ನಂತರ ಈ ಭಾಗ ಸ್ಥಳೀಯ ಹಿರಿಯರ ಮಾತಿನಂತೆ ಆಂಜನೇಯ ದೇವಸ್ಥಾನ ಅಭಿವೃದ್ಧಿಗಾಗಿ ಕೇಳಿದ ಹಿನ್ನೆಲೆಯಲ್ಲಿ 50,000 ನಗದು ಹಣ ನೀಡಿದ ಹಿನ್ನೆಲೆಯಲ್ಲಿ ಇಂದು ಬೃಹತ್ ಮಟ್ಟದ ದೇವಸ್ಥಾನ ನಿರ್ಮಾಣಗೊಂಡಿದೆ ಎಂದರು.
ಈ ವೇಳೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ರವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್,ಶಿವಕುಮಾರ್ ಸಾಖೆಲಾ. ಹನುಮಂತರಾಯಪ್ಪ, ತಿಮ್ಮನಹಳ್ಳಿಯ ಓಬಳೇಶಪ್ಪ.ಬಾಬನ್ನ. ಅಕ್ಲಪ್ಪ ಪರಮಾನಂದಪ್ಪ. ಮಂಡಲ ಕಾರ್ಯದರ್ಶಿ ಶೇಖರ್ ಬಾಬು,, ಅಭಿಯಾನದ ಮಂಡಲ ಪ್ರಮುಖ್ ಶ್ರೀ ಪುರುಷೋತ್ತಮ್, ಒ.ಬಿ.ಸಿ ಮೋರ್ಚಾ ಅಧ್ಯಕ್ಷರು ಹನುಮಂತರೆಡ್ಡಿ,ಮಧು.ನವಿನ್. ಗ್ರಾಮದ ಮುಖಂಡರಾದ ವಿವೇಕ್, ವಿವಿಧ ಬೂತ್ ಅಧ್ಯಕ್ಷರು, ಮುಖಂಡರು, ಗ್ರಾಮಸ್ಥರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.