ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ

ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ಚಲನಚಿತ್ರ ವಿರಾಟಪುರ ವಿರಾಗಿ ಚಲನಚಿತ್ರದ ಪ್ರಚಾರಕ್ಕೆ ಚಾಲನೆ
ಬಾದಾಮಿಯ ಶ್ರೀಗುರುದೇವ ಸೇವಾಸಂಸ್ಥೆ(ಸಮಾಧಾನ)
ಅರ್ಪಿಸುವ, ಈ ನೆಲದ ಮಹಾನ್ ಸಂತ, ಕಾರಣಿಕ ಯುಗಪುರುಷ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ಚಲನಚಿತ್ರ “ವಿರಾಟಪುರ ವಿರಾಗಿ” ಚಿತ್ರದ ಪ್ರಚಾರಾರ್ಥವಾಗಿ, ಹಾಗೂ ಶ್ರೀ ಕುಮಾರೇಶ್ವರ ರಥಯಾತ್ರೆಯು ಡಿ.೨೯ ರಂದು ಗುರುವಾರ ಸಂಜೆ ೪ ಗಂಟೆಗೆ ಬಾದಾಮಿಗೆ ಆಗಮಿಸಲಿದ್ದು,ಅದ್ದೂರಿಯಾಗಿ ಸ್ವಾಗತಿಸಲು ಭಕ್ತ ಸಮೂಹ ಸಜ್ಜುಗೊಂಡಿದೆ ಎಂದು ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ ಚೇರಮನ್ ಎ.ಸಿ.ಪಟ್ಟಣದ ತಿಳಿಸಿದರು.
ಸೋಮವಾರ ಬಾದಾಮಿ ನಗರದ ಶ್ರೀ ಅಕ್ಕಮಹಾದೇವಿ ಅನುಭಾವ ಮಂಟಪದ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ವೀರ ಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಎ.ಸಿ. ಪಟ್ಟಣದ ಈ ವಿಷಯವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಶಿವಯೋಗ ಮಂದಿರ ಧರ್ಮದರ್ಶಿ ಎಂ.ಬಿ.ಹoಗರಗಿ, ಜೆ.ಡಿ.ಎಸ್.ನ ಜಿಲ್ಲಾಧ್ಯಕ್ಷ
ಹನಮಂತ ಮಾವಿನಮರದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಮಾಜಿ ಜಿ.ಪಂ.ಉಪಾಧ್ಯಕ್ಷರಾದ ಪಿ.ಆರ್.ಗೌಡರ, ಮುಖಂಡರಾದ ಶಿವುಕುಮಾರ ಹಿರೇಮಠ, ಆರ್.ಬಿ.ಸಂಕದಾಳ, ಈಶ್ವರಯ್ಯ ಫಳಾರಿ, ಬಿ.ವಿ.ಭಂಡಾರಿ, ಮಧು ಯಡ್ರಾಮಿ, ಮುತ್ತು ಚಿನಿವಾಲರ, ಕುಮಾರ ರೋಣದ, ಸಿದ್ದಯ್ಯ ಹಿರೇಮಠ, ಇಷ್ಟಲಿಂಗ ಶಿರಶಿ ಹಾಜರಿದ್ದರು.