Janataa24 NEWS DESK

ತುಮಕೂರು: ಹೆಲಿಕ್ಯಾಪ್ಟರ್(helicopter)ರಿಹರ್ಸಲ್ ವೇಳೆ ಗಾಳಿಯ ರಭಸಕ್ಕೆ ಹಾರಿಬಂದ ಗೇಟ್ ತಲೆಯ ಮೇಲೆ ಬಿದ್ದು ತುಮಕೂರು ನಗರ ಡಿವೈಎಸ್‌ಪಿ ಶ್ರೀನಿವಾಸ್(DYSP Srinivas) ಗಾಯಗೊಂಡಿರುವ ಘಟನೆ ನಡೆದಿದೆ.
ಮೇ.5ರಂದು ಪ್ರಧಾನಿ ನರೇಂದ್ರಮೋದಿ(Narendra modi) ಅವರು ತುಮಕೂರಿನಲ್ಲಿ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಿಹರ್ಸಲ್ ನಡೆಸುತ್ತಿದ್ದು ಅನಾಹುತ ಸಂಭವಿಸಿದ್ದು ಕೂಡಲೇ ಶ್ರೀನಿವಾಸ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ನಿಂತಿದ್ದ ಡಿವೈಎಸ್‌ಪಿ ಗೆ ಗೇಟ್ ಹಾರಿಬಿದ್ದಿದೆ. ಪ್ರಾಥಮಿಕ ಚಿಕಿತ್ಸೆ ಪಡೆದ ಶ್ರೀನಿವಾಸ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ವರದಿ
ತುಮಕೂರು:ಮಂಜುನಾಥ್