ಡಬ್ಬಲ್ ಇಂಜಿನ್ ಸರ್ಕಾರವು ದೀನ ದಲಿತ ಪರ ಸರ್ಕಾರವಾಗಿದೆ:CM Bommai

Janataa24 NEWS DESK

IMG 20230423 WA0034

ಡಬ್ಬಲ್ ಇಂಜಿನ್ ಸರ್ಕಾರವು ದೀನ ದಲಿತ ಪರ ಸರ್ಕಾರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಗುಬ್ಬಿ: ತಾಲೂಕಿಗೆ ಬಿಜೆಪಿ ಅಭ್ಯರ್ಥಿ ಎಸ್‌ ಡಿ ದಿಲೀಪ್ ಕುಮಾರ್ ಪರವಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದವರು ಬಿಜೆಪಿ ಸರ್ಕಾರವು ಜನಪರ ಸರ್ಕಾರವಾಗಿದೆ. ಗುಬ್ಬಿ ಕ್ಷೇತ್ರದ 40 ಸಾವಿರ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸಹಕಾರ ನೀಡಿದ್ದೇವೆ. ಮುಖ್ಯಮಂತ್ರಿ ರೈತ ವಿದ್ಯಾರ್ಥಿನಿಧಿ ಯೋಜನೆ ಅಡಿ ಯಲ್ಲಿ 7,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದೇವೆ. ಆಯುಷ್ಮಾನ್ ಆರೋಗ್ಯ ನಿದಿ ಯೋಜನೆ,
ಹೀಗೆ ಅನೇಕ ಜನಪರ ಯೋಜನೆಗಳನ್ನು ಕೈಗೊಂಡಿದ್ದೇವೆ.



ಅನೇಕ ವರ್ಷಗಳ ಎಸ್ ಸಿ ಎಸ್ ಟಿ ಒಳಮೀಸಲಾತಿಯನ್ನು ಯಾವುದೇ ಭಾರತ ಸರ್ಕಾರವು ಮಾಡಿರಲಿಲ್ಲ ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾಡಿದೆ.
ಎಲ್ಲ ಸಮುದಾಯದವರೆಗೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿ ಕೊಡುವಂತಹ ಕೆಲಸ ಮಾಡಿದ್ದೇವೆ ಹಿಂದುಳಿದ ವರ್ಗದವರಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಯಕ್ಕೆ 2% ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ.
ಆದರೆ ಕಾಂಗ್ರೆಸ್ ಪಕ್ಷದವರು ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎಂದು ಕಿಡಿ ಕಾರುತ್ತಾರೆ.



ಇಂಥ ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ ಎಸ್ಟಿ ಮತದಾರರು ಮತ ನೀಡಬಾರದು. ಡಬಲ್ ಇಂಜಿನ್ ಸರ್ಕಾರವು ದಲಿತರ ಒಳ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ ಬಿಜೆಪಿ ಸರ್ಕಾರ ದಲಿತರ ಪರ ಸರ್ಕಾರ ಹಾಗಾಗಿ ಈ ಬಾರಿ ನಮ್ಮ ಗುಬ್ಬಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌ ಡಿ ದಿಲೀಪ್ ಕುಮಾರ್ ಅವರು ಎಲ್ಲ ಸಮುದಾಯದ ಮತದಾರರ ಹೃದಯವನ್ನು ಗೆದ್ದಿದ್ದಾರೆ ಹಾಗಾಗಿ ಈ ಬಾರಿ ಅವರನ್ನು ಜಯಶೀಲರನ್ನಾಗಿ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Leave a Reply

Your email address will not be published. Required fields are marked *