ಚುನಾವಣೆ ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದರು ಅಧಿಕಾರಿ

IMG 20230524 WA0033

ಪಾವಗಡ: 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ತಾಲ್ಲೂಕು ಚುನಾವಣಾಧಿಕಾರಿ ಅತೀಕ್ ಪಾಷಾ ಕೃತಞತೆಗಳು ಸಲ್ಲಿಸಿದರು.


ಬುಧವಾರ ಪಟ್ಟಣದ ನೂತನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪಾವಗಡ ತಾಲ್ಲೂಕು ತುಂಬಾ ಶಾಂತಿಪ್ರಿಯ, ಮುಗ್ಧ ಮನಸ್ಸಿನ ಜನತೆ ಚುನಾವಣೆಯಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಅಧಿಕಾರಿಗಳಿಗೆ ಕೊಡದೆ ಸಹಕರಿಸಿದ್ದಾರೆ. ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವುದೇ ರೀತಿಯ ಕರ್ತವ್ಯ ಲೋಪಗಳಿಗೆ ಅವಕಾಶ ಕಲ್ಪಿಸದೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.


ತಹಶೀಲ್ದಾರ್ ಹಾಗೂ ಸಹ ಚುನಾವಣಾಧಿಕಾರಿ ಕೆ.ಎನ್.ಸುಜಾತ ಮಾತನಾಡಿ, ನಾನು ಇದೇ ಮೊದಲನೇ ಬಾರಿ ಸಹ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ಸಂತಸ ತಂದಿದೆ. ನಾನು ಪಾವಗಡಕ್ಕೆ ಬರುವಾಗ ಭಯದ ವಾತಾವರಣದಿಂದಲೇ ಬಂದಿದ್ದು ಆದರೆ, ಇಲ್ಲಿನ ಜನಸಾಮಾನ್ಯರ ಸ್ನೇಹ ಮತ್ತು ವಿಶ್ವಾಸ ಪೂರಕ ಮನಸ್ಥಿತಿಯನ್ನು ಅರಿತು ಚುನಾವಣಾ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಸುಗಮವಾಯಿತು ಎಂದರು.


ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಬಿ.ಸಿ.ಸುಮತಿ, ಶಿರಸ್ತೇದಾರ್ ನರಸಿಂಹಮೂರ್ತಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಶಂಕರ್ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ, ಸಿಡಿಪಿಒ ನಾರಾಯಣ್, ತಾ.ಪಂ.sಸಹಾಯಕ ನಿರ್ದೇಶಕ ರಂಗನಾಥ್, ಯೋಜನಾಧಿಕಾರಿ ಮಲ್ಲಿಕಾರ್ಜುನ, ಇವಿಎಂ ನೋಡಲ್ ಅಧಿಕಾರಿ ರಕೀಬ್ ಉಲ್ಲಾ, ಕಂದಾಯ ನೀರಿಕ್ಷಕರಾದ ರಾಜ್ ಗೋಪಾಲ್, ಕಿರಣ್ ಕುಮಾರ್, ಎಡಿಎಲ್‌ಆರ್ ರುದ್ರೇಶ್ ಹಾಗೂ ತಾಲ್ಲೂಕು ಆಡಳಿತ ಸಿಬ್ಬಂದಿ ಹಾಜರಿದ್ದರು.

ವರದಿ

ಪಾವಗಡ: ಇಮ್ರಾನ್ ಉಲ್ಲಾ

Leave a Reply

Your email address will not be published. Required fields are marked *