Janataa24 NEWS DESK
ರೊಚ್ಚಿಗೆದ್ದ ಗ್ರಾಮಸ್ಥರು ಮದ್ಯದಂಗಡಿ ಬೇಡವೇ ಬೇಡ ಎಂದು ಪಟ್ಟು.

ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ಬಾರ್ & ರೆಸ್ಟೋರೆಂಟ್ ತೆರೆಯಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ವೆಂಕಟಮ್ಮನಹಳ್ಳಿ ಗ್ರಾಮಸ್ಥರು.
ಪ್ರತಿಭಟನೆ ಎಲ್ಲಿ ಭಾಗವಹಿಸಿ ಮಾತನಾಡಿ ಮಹಿಳೆ ಮದ್ಯದಂಗಡಿ ಆರಂಭವಾಗುವುದನ್ನು ತಡೆಯಲು ಹೋರಾಟ ನಡೆಸುತ್ತಿದ್ದು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು 15ವರ್ಷಗಳ ಹಿಂದೆ ನಕ್ಸಲ್ ಪೀಡಿತದಿಂದ ನಾವು ನರಕ ನೋಡಿದ್ದೆವೆ.
ನಮ್ಮ ಜೀವನಾ ಹಾಳಾಗಿ ಹೋಗಿದೆ. ನಮ್ಮ ಮಕ್ಕಳ ಭವಿಷ್ಯ ಹಾಳು ಮಾಡಲು ಬಾರ್ & ರೆಸ್ಟೋರೆಂಟ್ ಗಳಿಗೆ ಪರವಾನಗಿ ಕೋಟ್ಟು ಮತ್ತೆ ನಮ್ಮನ್ನು ಕತ್ತಲೆಗೆ ತಳುತ್ತಿದ್ದಿರಾ.
ಬಾರ್ ರೆಸ್ಟೋರೆಂಟ್ ತೆರೆಯುವ ಬದಲು ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕಾರ್ಖಾನೆಗಳನ್ನು ತಗೆದು ಉದ್ಯೋಗ ಕೊಟ್ಟು ಸುತ್ತಮುತ್ತಲಿನ ಗ್ರಾಮದ ಬಡ ಕುಟುಂಬಗಳು ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಅಂಗಲಾಚಿದ್ದಾರೆ.
ಒಂದು ವೇಳೆ ಮದ್ಯದಂಗಡಿ ತೆರುವುಗೂಳಿಸದೆ ಇದ್ದಲ್ಲಿ ಮತ್ತೆ ನಡೆಯುವ ಎಲ್ಲಾ ಅನಾಹುತಗಳಿಗೂ ತಾಲ್ಲೂಕು ಮತ್ತು ಜಿಲ್ಲಾಡಳಿತವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ