Janataa24 NEWS DESK

ಕಿಡಿಗೇಡಿಗಳಿಂದ ಕುರಿಗಳಿಗೆ ವಿಷ ಅಹಾರ ಹಾಕಿ ಆರು ಕುರಿಗಳು ಸಾವಿಗೀಡಾದ ಘಟನೆ ಪಾವಗಡ ತಾಲೂಕಿನ ಎರ್ರಪಾಳ್ಯ ಗ್ರಾಮದಲ್ಲಿ ಗುರುವಾರ ನಡೆದಿದೆ.
ಪಾವಗಡ: ತಾಲೂಕಿನ ಎರ್ರಪಾಳ್ಯ ಗ್ರಾಮದ ವಾಸಿ ಶ್ರುತಿ ಹಾಗೂ ರಮೇಶ್ ದಂಪತಿಗಳು ಏಕ ಏಕಿ ರಾತ್ರಿ ಇಂದಲು ಕುರಿಗಳು ಹೊಟ್ಟೆಹೂತ ಬಂದು ಆರು ಕುರಿಗಳು ಸಾವನ್ನಪ್ಪಿವೆ. ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸಾಲ ಮಾಡಿ ಜೀವನ ನಡೆಸಲು ಕುರಿಗಳ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಅಂತಹದರಲ್ಲಿ ಯಾರೋ ಸಹಿಸಲಾರದೆ ಕಿಡಿಗೇಡಿಗಳು ಕುರಿಗಳಿಗೆ ವಿಷ ಹಾಕಿ ಸಾಯಿಸಿದ್ದಾರೆ. ಸುಮಾರು ಹತ್ತು ಸಾವಿರ ಬೆಲೆ ಬಾಳುವ ಒಂದು ಕುರಿ. ಒಟ್ಟು ಆರು ಕುರಿಗಳು ಸಾವನ್ನಪ್ಪಿವೆ.ಇದರ ಬಗ್ಗೆ ಪೋಲಿಸ್ ಠಾಣೆಗೆ ದೂರು ಸಲ್ಲಿಸಲಾಗುವುದು ಎಂದು ಕುರಿ ಮಾಲಿಕ ರಮೇಶ್ ತಿಳಿಸಿದ್ದಾರೆ.
ಸ್ಥಳಕ್ಕೆ ಪಶು ಇಲಾಖೆ ವೈದ್ಯರು ಭೇಟಿ ನೀಡಿ ಸಾವನಪ್ಪಿದ ಕುರಿಗಳಿಗೆ ಪರಿಶೀಲನೆ ಮಾಡಿದ್ದಾರೆ.
ವರದಿ
ಪಾವಗಡ: ಇಮ್ರಾನ್ ಉಲ್ಲಾ