ಕಾಲೋನಿಗಳ ಅಂಗನವಾಡಿಗಳಿಗೆ ಬೇಟಿ ಪರಿಶೀಲನೆ ಮಾಡಿದ ತಹಶಿಲ್ದಾರ್ ನಾಗಮಣಿ.

Janataa24 NEWS DESK

IMG 20230601 WA0033




ಪಾವಗಡ ಬಹಳ ದಿನಗಳ ಬಳಿಕ ತಹಶಿಲ್ದಾರ್ ಓರ್ವರು ಖುದ್ದು ವಿವಿಧ ಇಲಾಖೆಗಳಿಗೆ ಹೋಗಿ ಸಮಸ್ಯೆಗಳನ್ನು ಅಲಿಸುತ್ತಿರುವ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವೆಕ್ತಪಡಿಸಿದ್ದಾರೆ.



ಪಾವಗಡ: ಗುರುವಾರ ಪಟ್ಟಣದ ಆದರ್ಶ ನಗರದ. ಕಾಲೋನಿ.ಎ.ಕೆ.ಕಾಲೋನಿ.ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ಬಾಣಂತಿಯರಿಗೆ ಸರ್ಕಾರದ ಯೋಜನೆಗಳು ತಲಪುತ್ತಿದ್ದವೆಯೇ ಇಲ್ಲವೂ ಎಂಬುದಾಗಿ ಖುದ್ದು ಪರಿಶೀಲನೆ ಮಾಡಿ ನಂತರ ಅಪ್ ಬಂಡೆ ಮೇಲಿರುವ ಹೆಣ್ಣುಮಕ್ಕಳ ವಸತಿ ನಿಲಯ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ತಹಶಿಲ್ದಾರ್ ನಾಗಮಣಿ, ಮಾತನಾಡಿ ರಜೆ ಮುಗಿದು ಈಗ ತಾನೇ ಮಕ್ಕಳು ವಸತಿ ನಿಲಯಗಳಿಗೆ ಬರುವುದು ವಾಡಿಕೆ

ಅಂತಹ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯ ಮತ್ತು ಮೂಲಭೂತ ಸೌಕರ್ಯಗಳ ನೀಡುವುದು ಆದ್ಯ ಕರ್ತವ್ಯ ಸರ್ಕಾರದ್ದು ಇಂತಹ ವೇಳೆಯಲ್ಲಿ ಯಾವುದೇ ತರಹದ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಇಲ್ಲಿನ ಅಧಿಕಾರಿಗಳದ್ದು ಹಾಗೂ ನಮ್ಮದು ಸಹ ಇರುತ್ತದೆ ಹಾಗಾಗಿ ಕೆಲವೊಂದು ಹೆಣ್ಣು ಮಕ್ಕಳು ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸೌಕರ್ಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದರು. ಹಾಗೆಯೇ ಆದರ್ಶ ನಗರದ ಕಾಲೋನಿ ಹಾಗು ಏಕೆ ಕಾಲೋನಿ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ ಪರಿಶೀ ಪರಿಶೀಲನೆ ಮಾಡಿ ಮಕ್ಕಳ ಹಾಜರಾತಿ ಗೆ ಮನಸ್ಸಿದ್ದೇನೆ ಮತ್ತು ಅಂಗನವಾಡಿ ವ್ಯಾಪ್ತಿಯಿಂದ ಬಾಳಂತರಿಗೆ ನೀಡುವಂತಹ ಆಹಾರದ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಹಾಗೆ ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತರಲ್ಲಿ ಯಾವುದೇ ತೊಂದರೆ ಆದ ರೀತಿಯಲ್ಲಿ ಮಕ್ಕಳಿಗೆ ನೋಡಿಕೊಳ್ಳಬೇಕು ಎಂಬುದಾಗಿ ಸೂಚನೆ ನೀಡಿದ್ದೇನೆ. ಆದರ್ಶ ಕಾಲೋನಿ ಅಂಗನವಾಡಿಯಲ್ಲಿ ಶೌಚಾಲಯದ ಸಮಸ್ಯೆ ಕಂಡು ಬಂದಿದೆ ಸಿಡಿ ಪವರ್ ಗಮನಕ್ಕೆ ತಂದಿದ್ದೇನೆ ತಕ್ಷಣವೇ ಸರಿಪಡಿಸುವುದಾಗಿ ಸೂಚಿಸಿದ್ದಾರೆ.



ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೀಗೆ ಪ್ರತಿದಿನ ಕೆಲವೊಂದು ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವುದು ಏಕೆ ಎಂಬುದಾಗಿ ಕೇಳಿದಾಗ.



ಪಾವಗಡ ಪಟ್ಟಣದ ಮಕ್ಕಳ ವಸತಿ ನಿಲಯ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವುದು ಏಕೆಂದರೆ ಪ್ರತಿ ಇಲಾಖೆಗಳಲ್ಲಿ ಸಮಸ್ಯೆಗಳು ಇರುವುದು ಸಹಜ ಆದರೆ ಕೆಲವೊಂದು ವೇಳೆಯಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಹೋಗಿ ಪರಿಶೀಲಿಸಿದಾಗ ಅದನ್ನು ತಕ್ಷಣ ಸರಿಪಡಿಸಿಕೊಳ್ಳುತ್ತಾರೆ ಎಂಬ ಒಂದು ಉದ್ದೇಶದಿಂದ ಇಂತಹ ಸಾಮಾನ್ಯ ಭೇಟಿ ಮಾಡುತ್ತಿದ್ದೇನೆ ಎಂದರು.



ವರದಿ

ಪಾವಗಡ: ಇಮ್ರಾನ್ ಉಲ್ಲಾ.

Leave a Reply

Your email address will not be published. Required fields are marked *