ಪಾವಗಡ: ಇಮ್ರಾನ್ ಉಲ್ಲಾ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಂದ ಕೆಲವೇ ಗಂಟೆಗಳಲ್ಲಿ ಮಹಿಳೆಯರ ಸಮಸ್ಯೆ ಹೋಗಲಾಡಿಸಲೆಂದು ಐನೂರು ಹಣ ಗ್ಯಾಸ್ ಸಬ್ಸಿಡಿ ರೀತಿಯಲ್ಲಿ ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ಹೆಚ್.ವಿ ವೆಂಕಟೇಶ್ ಮಹಿಳಾ ಮತದಾರರ ಬಳಿ ಮತ ಕೇಳಿದರು.

ಪಾವಗಡ ತಾಲ್ಲೂಕಿನ ಸಿದ್ಧಾಪುರ ಗ್ರಾ ಪಂ ವ್ಯಾಪ್ತಿಯ ಯಲ್ಲಪ್ಪನಾಯಕನಹಳ್ಳಿ (YN ಹಳ್ಳಿ) ಗ್ರಾಮದ ಶ್ರೀ *ಈರ ಮಾಸನ್ನ ದೇವಸ್ಥಾನಕ್ಕೆ* *ಹೆಚ್ ವಿ ವೆಂಕಟೇಶ್* ಅವರು ಈ ದಿನ ಭೇಟಿ ನೀಡಿ ಪೂಜೆ ಸಲ್ಲಿಸಿ ಆ ಗ್ರಾಮದ ಗೃಹಿಣಿಯರಿಗೆ ಕಾಂಗ್ರೆಸ್ ಪಕ್ಷದ ಗೃಹಲಕ್ಷ್ಮಿ,ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ *ಕಾಂಗ್ರೆಸ್ ಗ್ಯಾರಂಟಿ ಕಾರ್ಡ್* ಗಳನ್ನು ವಿತರಿಸುವ ಮೂಲಕ ಮನೆ ಮನೆ ಪ್ರಚಾರ ಕೈಗೊಂಡಿದರು.
ಬಡವರ ಸಮಸ್ಯೆಗೆ ಸದಾ ಸ್ಪಂದಿಸುವಂತ ವ್ಯಕ್ತಿತ್ವ ನನ್ನದು 2013ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರೆ ತಾಲೂಕಿನ ಅಭಿವೃದ್ಧಿಗೆ 2000 ಕೋಟಿ ಹಣ ದಷ್ಟು ಹಣ ತಂದು ತಾಲೂಕು ಅಭಿವೃದ್ಧಿಗೊಳಿಸುತ್ತಿದ್ದೆ ಆದರೆ ದುರಾದೃಷ್ಟಕರವಾಗಿ ಕೆಲವೇ ಅಂತರದಲ್ಲಿ ಸೋತಿದ್ದೆ ಹಾಗಾಗಿ ಮತ್ತೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ ಈ ಬಾರಿ ನಿಮ್ಮ ಮನೆ ಮಗನೇಂದು ತಿಳಿದು ಮತ ನೀಡುವ ಮೂಲಕ ಗೆಲ್ಲಿಸಬೇಕು.
ಈ ಭಾಗದಲ್ಲಿ ಜೆಡಿಎಸ್ ತಾಲೂಕಿನಲ್ಲಿ ಸತ್ತಿರುವ ಪಕ್ಷ. ಈ ಹಿಂದೆ ಕೋವಿಡ್ ನಲ್ಲಿ ಎರಡುವರೆ ಕೋಟಿ ಅಷ್ಟು ಹಣ ಬಡವರಿಗೆ ಎಂದು ಖರ್ಚು ಮಾಡಿದ್ದೇನೆ. ಕೋವಿಡ್ ವೇಳೆಯಲ್ಲಿ ಪ್ರತಿದಿನ ಸಾವಿರಾರು ಜನಕ್ಕೆ ಊಟ ಹಾಕುವ ಮೂಲಕ ಬಡಜನರ ಸೇವೆ ಮಾಡಿದ್ದೇನೆ. ತಾಲೂಕ್ ಆದ್ಯಂತ ಸ್ವತಹ ಆಂಬುಲೆನ್ಸ್. ಜೆಸಿಬಿ. ಗಳನ್ನು ಇಟ್ಟು ಬಡವರಿಗೆ ಹಾಗೂ ನಿರ್ಗತಿಯರಿಗೆ ಸಹಾಯ ಮಾಡಿದ್ದೇನೆ. ಪ್ರತಿದಿನ 2 ಲಕ್ಷದಷ್ಟು ಹಣ ಕೋವಿಡ್ ವೇಳೆಯಲ್ಲಿ ಖರ್ಚು ಮಾಡಿದ್ದೇನೆ. ಹಣ ಮಾಡಲು ನಾನು ನಾನು ರಾಜಕೀಯಕ್ಕೆ ಬರುತ್ತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸಲು ನಿಮ್ಮ ಬಳಿ ಬರುತ್ತಿದ್ದೇನೆ. ನಾನು ಶಾಸಕನಾಗಿ ಗೆದ್ದು ಹಣ ಮಾಡಲು ನಿಮ್ಮ ಬಳಿ ಬರುತ್ತಿಲ್ಲ. ಪ್ರತಿದಿನ ನಮ್ಮ ಮನೆ ಬಾಗಿಲಿಗೆ ಬಹಳಷ್ಟು ಜನ ತಮ್ಮ ಕಷ್ಟಗಳು ಹೇಳಿಕೊಂಡು ಬರುವಂತಹ ಜನರಿಗೆ ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಿದ್ದೇನೆ ಎಂದರು.
ಈ ಭಾಗದಲ್ಲಿ ಅಪಾರ ಮಹಿಳಾ ಕಾರ್ಯಕರ್ತರು ಕಾಂಗ್ರೇಸ್ ಅಭ್ಯರ್ಥಿ ಎಚ್. ವಿ.ವೆಂಕಟೇಶ್ ಹೂವಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಈ ವೇಳೆ ಆ ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು..