Janataa24 NEWS DESK
ಈ ಬಾರಿ ಬಿಜೆಪಿ ಪಕ್ಷಕ್ಕೆ ನಮ್ಮ ಬೆಂಬಲವೂ ಕೂಡ ಇದೆ/ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ತಾಲೂಕು ಅಧ್ಯಕ್ಷ ಮಾಯಸಂದ್ರ ರಹಮತ್.

ತುರುವೇಕೆರೆ: ಪಟ್ಟಣದಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ, ಇಂದು ತಾಲೂಕು ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪತ್ರಿಕಾ ಮಾಧ್ಯಮಗೋಷ್ಠಿಯನ್ನು ಕರೆಯಲಾಯಿತು.
ಇದೇ ವೇಳೆ ಮಾತನಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ತಾಲೂಕು ಅಧ್ಯಕ್ಷರಾದ ರಹಮತ್
ನಮ್ಮ ತಾಲೂಕಿನಲ್ಲಿ ಹಾಲಿ ಶಾಸಕರಾಗಿದ್ದಂತಹ ಬಿ ಜೆ ಪಿ ಅಭ್ಯರ್ಥಿ ಮಸಾಲಾ ಜಯರಾಮ್ ಅವರು.
ಯಾವುದೇ ಜಾತಿ ತಾರತಮ್ಯವಿಲ್ಲದೆ ನಮ್ಮ ಅಲ್ಪಸಂಖ್ಯಾತರ ದರ್ಗಾ, ಮಸೀದಿ, ಈದ್ಗಾ, ಕಬ್ರ್ ಸ್ಥಾನ. ಅನೇಕ ನಮ್ಮ ಸಮುದಾಯಕ್ಕೆ ಸಂಬಂಧಿಸಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ,
ತಾಲೂಕಿನಲ್ಲಿ ಅಲ್ಪಸಂಖ್ಯಾತರು ಕೂಡ ಬಿಜೆಪಿ ಅಭ್ಯರ್ಥಿಯ ಪರ ಮತಯಾಚನೆ ಮಾಡಿ, ನಮ್ಮ ಸಮುದಾಯದಿಂದ ಅತಿಹೆಚ್ಚಿನ ಮತಗಳನ್ನು ಹಾಕಿಸುವುದರ ಮೂಲಕ ಬಿಜೆಪಿ ಪಕ್ಷವನ್ನು ಗೆಲುವಿನತ ಕೊಂಡೊಯ್ಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ತುರುವೇಕೆರೆ ನಗರ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಯೂಸೆಫ್ ಸೇಟ್, ಮಾಯಸಂದ್ರ ಹೋಬಳಿ ಅಲ್ಪಸಂಖ್ಯಾತರ ಅಧ್ಯಕ್ಷ ಜಾಬೀರ್, ದಂಡಿನ ಶಿವರ ಹೋಬಳಿ ಅಧ್ಯಕ್ಷ ಮಾರತಮ್ಮನಹಳ್ಳಿ ಕಲೀಮ್, ಹಿರಿಯ ಮುಖಂಡರಾದ ರಫೀಕ್, ಹೊನವರ್ ಸಾಬ್, ಸಿದ್ದೀಕ್, ಮೊಹಮ್ಮದಅಲಿ, ಬುಡನ್ ಸಾಬ್, ಇನ್ನು ಜೊತೆಗೆ ಲೋಕಮ್ಮನಹಳ್ಳಿ ರಮೇಶ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್