V Somanna : ಭವ್ಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ಎನ್.ಡಿ.ಎ ಪಕ್ಷಕ್ಕೆ ಮತ ನೀಡಿ -ವಿ ಸೋಮಣ್ಣ

janataa24 NEWS DESK

V Somanna : ಭವ್ಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ಎನ್.ಡಿ.ಎ ಪಕ್ಷಕ್ಕೆ ಮತ ನೀಡಿ ವಿ ಸೋಮಣ್ಣ

ಗುಬ್ಬಿ : ದೇಶದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷ ಮತ್ತು ಬಿಜೆಪಿ ಪಕ್ಷವು ಸಮ್ಮಿಶ್ರವಾಗಿದೆ. ದೇಶದ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಶ್ರೀಯುತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ತುಮಕೂರು NDA ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸೋಮಣ್ಣ ಹೊರಗಿನಿಂದ ಬಂದವನು ಎಂದು ಕಾಂಗ್ರೆಸ್ ಪಕ್ಷದವರು ಪದೇ-ಪದೇ ಮನಸ್ಸಿಗೆ ನೋವನ್ನುಂಟು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರಿಗೆ ಇನ್ನು ತಿಳಿದಿಲ್ಲ ತುಮಕೂರಿಗೂ ನನಗೂ ಅವಿನವಭಾವ ಸಂಬಂಧವಿದೆ.

ತುಮಕೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ನಿರ್ವಹಿಸಿದ್ದೇನೆ. ತುಮಕೂರಿನ ಜನತೆಯ ಪ್ರತಿಯೊಬ್ಬರ ಪರಿಚಯವೂ ಸಹ ನನಗೆ ಇದೆ. ತುಮಕೂರಿನ ಜನತೆಯ ನಾಡಿಮಿಡಿತ ನನಗೆ ತಿಳಿದಿದೆ. ತುಮಕೂರಿನಲ್ಲಿಯೇ ನಾನು ನೆಲೆಸುತ್ತೇನೆ. ತುಮಕೂರಿನ ಜನತೆ ಆಶೀರ್ವಾದ ದೊರೆತರೆ ನೀರಾವರಿ ಸೌಲಭ್ಯಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡುತ್ತೇನೆ.

ಜಿಲ್ಲೆಯಲ್ಲಿ ಸುಸಜ್ಜಿತವಾದ ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಒತ್ತು ನೀಡುತ್ತೇನೆ. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡುತ್ತೇನೆ. ರಸ್ತೆ ಸಾರಿಗೆ ಕುಡಿಯುವ ನೀರಿಗೆ ಒತ್ತು ನೀಡುತ್ತೇನೆ. ಯುವಕ ಮತ್ತು ಯುವತಿಯರಿಗೆ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡುತ್ತೇನೆ. ಹಾಗೂ ಗುಬ್ಬಿ ನಗರವನ್ನು ಸ್ಮಾರ್ಟ್ ಸಿಟಿಯಾಗೆ ನಿರ್ಮಾಣ ಮಾಡುತ್ತೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಂದಾಗಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಸುರೇಶ ಗೌಡ (Suresh Gowda)ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದ ಹನುಮಗೌಡರನ್ನು ಕಾಂಗ್ರೆಸ್ ಪಕ್ಷದವರು ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಬಹಿರಂಗವಾಗಿ ಕಾಂಗ್ರೆಸ್ ಭವಿಷ್ಯ ನುಡಿದಿದ್ದಾರೆ.

ತುಮಕೂರು ಆರು ತಾಲೂಕುಗಳಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಮತಗಳನ್ನು ಕಡಿಮೆ ತೆಗೆದುಕೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಮುಂದೆ ಬಹು ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಡಾ. ಜಿ ಪರಮೇಶ್ವರ್ ಅವರಿಗೆ ಮುದ್ದ ಹನುಮೇಗೌಡರನ್ನು ಗೆಲ್ಲಿಸುವ ಮನೋಭಾವವಿಲ್ಲ.

ಇಂತಹ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷವು ಹಾಲು ಜೇನಿನಂತೆ ಒಂದಾಗಿದೆ. ತುಮಕೂರಿಂದ ರಾಮನಗರಕ್ಕೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ರಕ್ತ ಕೊಡುತ್ತೇವೆ ಹೊರತು ನೀರನ್ನು ಕೊಡುವುದಿಲ್ಲ. ಡಿಕೆ ಶಿವಕುಮಾರ್ ಗೆ ದಮ್ ಇದ್ದರೆ ಹೇಮಾವತಿ ನೀರನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗಲಿ ಎಂದು ಸವಾಲು ಹಾಕಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವಿ. ಸೋಮಣ್ಣ ಗೆಲುವು ಖಚಿತ ಎಂದು ತಿಳಿಸಿದರು.

ಬಿಜೆಪಿ ಮುಖಂಡ SD ದಿಲೀಪ್ ಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷದ 70 ವರ್ಷದ ಆಡಳಿತ ಅವಧಿಯಲ್ಲಿ ಭಾರತ ದೇಶವು ಬಡತನ ಬೇಗೆಯಲ್ಲಿ ಬಣಗುಡುತ್ತಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ನರೇಂದ್ರ ಮೋದಿಜಿ ಅವರ ನೇತೃತ್ವದ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಭಾರತ ಆರ್ಥಿಕಪರಿಸ್ಥಿತಿ ಸುಧಾರಣೆಯಾಗಿದೆ. ತುಮಕೂರು ಕ್ಷೇತ್ರದ ಮತದಾರರು ಲೋಕಸಭಾ ಅಭ್ಯರ್ಥಿ ವಿ ಸೋಮಣ್ಣಗೆ ಅತಿ ಹೆಚ್ಚು ಮತ ನೀಡುವ ಮೂಲಕ ಭವ್ಯ ಭಾರತದ ಮುಂದಿನ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಬಿಎಸ್ ನಾಗರಾಜು ಮಾತನಾಡಿ ಜೆಡಿಎಸ್ ವರಿಷ್ಠ ನಾಯಕರಾದ ಶ್ರೀಯುತ ಮಾಜಿ ಪ್ರಧಾನಿ ದೇವೇಗೌಡರು, ಹಾಗೂ ಶ್ರೀಯುತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಷ್ಟ್ರಮಟ್ಟದಲ್ಲಿ ಭವ್ಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ಶ್ರೀಯುತ ನರೇಂದ್ರ ಮೋದಿಜಿ (Narendra Modi)ಅವರಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ಸಮ್ಮಿಶ್ರಗೊಳಿಸಿದ್ದಾರೆ.

ಹಾಗಾಗಿ ಜೆಡಿಎಸ್ ಹಾಗೂ ಬಿಜೆಪಿ ವರಿಷ್ಠ ನಾಯಕರ ನಿರ್ಧಾರದಂತೆ ದೇಶ ಭವ್ಯ ಭಾರತದ ಉಳಿವಿಗಾಗಿ ತುಮಕೂರು ಲೋಕಸಭಾ ಅಭ್ಯರ್ಥಿ ವಿ ಸೋಮಣ್ಣ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಮತ್ತೊಮ್ಮೆ ಧೀಮಂತ ನಾಯಕ ನರೇಂದ್ರ ಮೋದಿಜಿ ಅವರನ್ನು ಭಾರತ ದೇಶದ ಪ್ರಧಾನಮಂತ್ರಿ ಯನ್ನಾಗಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ. ಸಂಸದ ಜಿಎಸ್ ಬಸವರಾಜು, ವೈ.ಎಚ್. ಹುಚ್ಚಯ್ಯ, ಚಿದಾನಂದ ಮೂರ್ತಿ, ಸಾಗರನಳ್ಳಿ ವಿಜಯಕುಮಾರ್, ಕಡಬ ಸಿದ್ದಗಂಗಮ್ಮ, ಹೊನ್ನಗಿರಿ ಗೌಡ, ಎಚ್ ಡಿ ಭೈರಪ್ಪ, ಪಂಚಾಕ್ಷರಿ, ಚಿಕ್ಕಿರಯ್ಯ, ಲೋಕೇಶ್ ಬಾಬು, ಯೋಗಾನಂದ ಕುಮಾರ್, ಕಳ್ಳಿಪಾಳ್ಯ ಲೋಕೇಶ್, ಜಿಎನ್ ಬೆಟ್ಟಸ್ವಾಮಿ, ಅಣ್ಣಪ್ಪ ಸ್ವಾಮಿ, ನವ್ಯ ಬಾಬು, ಹಿತೇಶ್, ಹಾರ್ನಳ್ಳಿ ಪ್ರಬಣ್ಣ, ಇತರರು ಹಾಜರಿದ್ದರು.

ವರದಿ: ಶ್ರೀಕಾಂತ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Chitradurga: ದಾಖಲೆಯಿಲ್ಲದೆ ಸಂಗ್ರಹಿಸಿದ್ದ 5.25 ಕೆಜಿ ಚಿನ್ನಾಭರಣ ಪೋಲಿಸರ ವಶಕ್ಕೆ

Leave a Reply

Your email address will not be published. Required fields are marked *