Janataa24 NEWS DESK
Turuvekere: ಮಾ.18ಕ್ಕೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ತಹಶೀಲ್ದಾರ್ ಕುo, ಇ,ಅಹಮದ್.
ತುರುವೇಕೆರೆ: ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂಳೆಕೆರೆ ಗ್ರಾಮದಲ್ಲಿ ಪ್ರತಿವರ್ಷದಂತೆ ನಡೆಯುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಇಂದು ತಹಶೀಲ್ದಾರ್ ಅಹಮದ್ ಇವರ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗುಡಿ ಗೌಡರ ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಫೆಬ್ರವರಿ 18ರಂದು ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆಚರಣೆಗೆ ದಿನಾಂಕ ನಿಗದಿ ಮಾಡಿದ್ದು ಪೂರ್ವಭಾವಿ ಸಭೆಯ ಎಲ್ಲರ ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಂತೆ ಜಾತ್ರಾ ಮಹೋತ್ಸವವನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜರಾಯಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಮತ್ತು ಪೊಲೀಸ್ ಇಲಾಖೆಯ ಉಪಸ್ಥಿತಿಯಲ್ಲಿ ನಡೆಸಲಾಗುವುದು ಇನ್ನು ಜಾತ್ರಾ ಮಹೋತ್ಸವ ನಡೆಯುವ ಗ್ರಾಮದಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರ ಎರಡು ಬಣಗಳ ಜಿದ್ದಾಜಿದ್ದಿನ ವೈ ಮನಸನ್ನು ದೂರ ಮಾಡಿ ಎಲ್ಲರೂ ಒಟ್ಟುಗೂಡಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂದರು.

ಇದೇ ವೇಳೆ ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿ ಊರ ಹಬ್ಬ ಏನು ಆಚರಣೆ ಮಾಡುತ್ತೇವೆ ಆ ಹಬ್ಬಕ್ಕೆ ಒಂದು ಅರ್ಥಪೂರ್ಣವಿರುತ್ತೆ ತಮ್ಮ ತಮ್ಮ ಮನೆಯ ಹೆಣ್ಣು ಮಕ್ಕಳು ಮತ್ತು ದೂರದ ಊರಿನಲ್ಲಿ, ಹೊರ ರಾಜ್ಯದಲ್ಲಿ ಗಂಡು ಮಕ್ಕಳು ಕಾರ್ಯಾ ನಿರ್ವಹಿಸಿಕೊಂಡು ಅವರ ಕುಟುಂಬದ ಸದಸ್ಯರೊಂದಿಗೆ ಇದ್ದು ಪುರುಷಕೊಮ್ಮೆ ನಡೆಯುವ ಇಂತಹ ಅರ್ಥಪೂರ್ಣವಾದ ಜಾತ್ರಾ ಮಹೋತ್ಸವಕ್ಕೆ ಹೆಣ್ಣು ಮಕ್ಕಳು ತಮ್ಮ ತವರು ಮನೆಗಳಿಗೆ ಗಂಡು ಮಕ್ಕಳು ತಮ್ಮ ಸ್ವಂತ ಊರಿಗೆ ಬಂದು ಒಟ್ಟಾಗಿ ಸೇರಿ ಬಹಳ ಖುಷಿಯಿಂದ ಆಚರಿಸುವ ಹಬ್ಬ ಆಗಿರುತ್ತೆ, ಇಂತಹ ಹಬ್ಬಗಳು ಇರುವಂತಹ ಸಂದರ್ಭದಲ್ಲಿ ಗ್ರಾಮಗಳಲ್ಲಿ ವಾಸಿಸುವ ಕೆಲ ಗ್ರಾಮಸ್ಥರು ಕೆಲವು ಸಂದರ್ಭದಲ್ಲಿ ತಮ್ಮ ತಮ್ಮ ವೈಯಕ್ತಿಕ ವಿಷಯಗಳನ್ನ ಮುಂದಿಟ್ಟುಕೊಂಡು ಯಾವುದೇ ದ್ವೇಷ, ಅಸೂಹೆ, ಇದರ ಜೊತೆಗೆ ಅಹಿತಕರ ಘಟನೆಗಳು ಬಾರದ ರೀತಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಹೋಗಬೇಕು ಜೊತೆಗೆ ಇಂತಹ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರಾ ಮಹೋತ್ಸವ ನಡೆಯುವ ವೇಳೆ ಪೊಲೀಸರೊಂದಿಗೆ ಕೈಜೋಡಿಸಿ ಯಾವುದೇ ರೀತಿಯ ಅಡೆತಡೆಗಳಾಗದಂತೆ ಒಗ್ಗಟ್ಟಿನಲ್ಲಿ ಊರ ಹಬ್ಬಗಳನ್ನು ಆಚರಿಸಬೇಕೆಂದು ಹೇಳಿದರು.
ಇದೆ ವೇಳೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನ ಯಾರ ಮುಂದಾಳತ್ವದಲ್ಲಿ ನಡೆಸಬೇಕು ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 20 ಹೆಸರನ್ನು ಒಂದು ಡಬ್ಬಿಯಲ್ಲಿ ಹಾಕಿ ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಯಿತು ಈ ಆಯ್ಕೆ ಪ್ರಕ್ರಿಯೆಯಲ್ಲಿ ಸೂಳೆಕೆರೆ ಗ್ರಾಮದ ಹಿರಿಯ ಸಮಾಜಸೇವಕ ಗ್ರಾಮದ ಹಿತಚಿಂತಕ ಎಂದೆ ಖ್ಯಾತಿ ಪಡೆದಿರುವ ಸೂಳೆಕೆರೆ ಗ್ರಾಮದ ವಾಸಿ ಶಂಕರೇಗೌಡ ಇವರ ಹೆಸರು ಬಂದಿದ್ದು ಅವರ ಮೇಲ್ವಿಚಾರಣೆಯಲ್ಲಿ ವಿಜೃಂಭಣೆಯಿಂದ ನಡೆಯುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದ್ದು ಅದರಂತೆ ಈ ವರ್ಷದ ಅದ್ದೂರಿ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುವುದು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
Janataa24 ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.