Turuvekere: ದ್ವಿಚಕ್ರ ವಾಹನ ಕಳ್ಳರ ಬಂಧನ- 8 ಬೈಕ್ ಗಳನ್ನು ವಶಪಡಿಸಿಕೊಂಡ ಪೊಲೀಸರು

Janataa24 NEWS DESK

Turuvekere: ದ್ವಿಚಕ್ರ ವಾಹನ ಕಳ್ಳರ ಬಂಧನ- 8 ಬೈಕ್ ಗಳನ್ನು ವಶಪಡಿಸಿಕೊಂಡ ಪೊಲೀಸರು

Turuvekere DYSP Ramesh

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ತುರುವೇಕೆರೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ,ಗುರುಮೂರ್ತಿ ಮತ್ತು ವಗ್ಗೇರಿ ರಾಜಕುಮಾರ್ ಈ ಇಬ್ಬರು ಸಿಬ್ಬಂದಿಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತುರುವೇಕೆರೆಯ ಬಸ್ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿರುವ ವೇಳೆ, ದಬ್ಬೆಘಟ್ಟ ಕಡೆಯಿಂದ ಪ್ಯಾಶನ್ ಪ್ರೊ ಎಂಬ ದ್ವಿಚಕ್ರ ವಾಹನದಲ್ಲಿ 20 ವರ್ಷದ ಪುನೀತ್ ಗೌಡ ಹಾಗೂ ರಾಜಶೇಖರ್ ಎಂಬ ಇಬ್ಬರು ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ನೋಡಿದ್ದಾರೆ.

ಇದೇ ವೇಳೆ ಅವರನ್ನು ಬೆನ್ನಟ್ಟಿದ ಪೊಲೀಸ್ ಸಿಬ್ಬಂದಿ ಗುರುಮೂರ್ತಿ (ಎಚ್ ಸಿ 425) ದ್ವಿಚಕ್ರ ವಾಹನ ಸವಾರರನ್ನು ಹಿಡಿದು ಪೊಲೀಸ್ ಠಾಣೆಗೆ ಹಾಜರುಪಡಿಸಿ ವಿಚಾರಣೆ ಮಾಡಲಾಗಿ, ಇವರಿಬ್ಬರೂ ದ್ವಿಚಕ್ರ ಕಳ್ಳರು ಎಂದು ಖಚಿತಪಡಿಸಿ, ಕಲಂ-41(ಡಿ) ರೆ/ವಿ 102 ಸಿ ಆರ್ ಪಿ ಸಿ ಮತ್ತು 379 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ತನಿಖೆಗಾಗಿ ಕುಣಿಗಲ್ ಉಪ ವಿಭಾಗ ಡಿ ವೈ ಎಸ್ ಪಿ ರಮೇಶ್(DYSP Ramesh) ಮತ್ತು ತುರುವೇಕೆರೆ ಸಿ ಪಿ ಐ ಲೋಹಿತ್ ಇವರ ಮಾರ್ಗದರ್ಶನದಲ್ಲಿ, ಪಿಎಸ್ಐ ಸಂಗಮೇಶ್ ಮೇಟಿ ಸಿಬ್ಬಂದಿಗಳಾದ ಗುರುಮೂರ್ತಿ, ಡ್ರೈವರ್ ರವಿಕುಮಾರ್ , ರಾಜಕುಮಾರ (ವಗ್ಗೇರಿ), ಅನಿಲ್ ಎಚ್ ಸಿ 312, ಇವರುಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಸುಮಾರು ನಾಲ್ಕು ಲಕ್ಷ ಕ್ಕೂ ಹೆಚ್ಚು ಬೆಲೆ ಬಾಳುವ 8 ದ್ವಿಚಕ್ರ ವಾಹನವನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿಯಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಮೇಟಿ, ಸಿಬ್ಬಂದಿಗಳಾದ ಸಿ ಗುರುಮೂರ್ತಿ, ರಾಜಕುಮಾರ್, ಡ್ರೈವರ್ ರವಿಕುಮಾರ್, ಅನಿಲ್ (ಎಚ್ ಸಿ 312), ಹಾಗೂ ತಾಂತ್ರಿಕ ವಿಭಾಗದ ಕೃಷ್ಣ, ಶಂಭುಲಿಂಗೇಶ್, ಮಂಜುನಾಥ್ ಇವರುಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಹಾಗೂ ಹೆಚ್ಚುವರಿ ಅಧೀಕ್ಷಕರು ಮರಿಯಪ್ಪ ವಿ ,ಅವರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ : ಮಂಜುನಾಥ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Bagalakote: ಬಾಗಲಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಹಾಗುಂಡಪ್ಪ. ಕೆ. ಗಾಣಿಗೇರ ಕಣಕ್ಕೆ

Leave a Reply

Your email address will not be published. Required fields are marked *