Turuvekere: ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ಅಸ್ತು, ವ್ಯವಸಾಯ ಮಾಡುವ ರೈತರಿಗೆ ಅನ್ಯಾಯ..!

Janataa24 NEWS DESK 

 

Turuvekere: ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ಅಸ್ತು, ವ್ಯವಸಾಯ ಮಾಡುವ ರೈತರಿಗೆ ಅನ್ಯಾಯ..!

ತುರುವೇಕೆರೆ: ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ವಿವಾದಕ್ಕೆ ಸಿಲುಕಿದ್ದ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಆರಂಭಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದ್ದು, ಸರ್ವೇ ನಂಬರ್ 65 ರ 3 ಎಕರೆಯಲ್ಲಿ ಕಲ್ಲುಪುಡಿ ಮಾಡುವ ಘಟಕಕ್ಕೆ ಅನುಮತಿ ನೀಡಿ, ಜಿಲ್ಲಾಧಿಕಾರಿ ಮತ್ತು ತಹಸಿಲ್ದಾರ್ ಅವರಿಗೆ, ಕಲ್ಲು ಗಣಿಗಾರಿಕೆ ಮಾಡುವುದಕ್ಕೆ ಸೂಕ್ತ ರಕ್ಷಣೆಯನ್ನು ಪೋಲಿಸ್ ಬಂದೋಬಸ್ತ್ ನೀಡಬೇಕೆಂದು ಸೂಚನೆ ಕೂಡ ನೀಡಿದೆ.

 

ಆದರೆ ರೈತರು ಮಾತ್ರ ನಮ್ಮ ಜಮೀನಿನಲ್ಲಿ ನೆಟ್ಟಿದ್ದ ತೆಂಗಿನ ಸಸಿಗಳನ್ನು ಕುದ್ದು ತಹಶೀಲ್ದಾರ್ ಅವರೇ ಮುಂದೆ ನಿಂತು ಕಿತ್ತುಹಾಕಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ, ಜೊತೆಗೆ ಗುರುವಾರ ಬೆಳಿಗ್ಗೆ ಗ್ರಾಮದ ರೈತರು ತೆಂಗಿನ ಸಸಿಗಳನ್ನು ತಾಲೂಕು ಆಡಳಿತ ಕಚೇರಿ ಮುಂಭಾಗ ಇಟ್ಟು ಧರಣಿ ಸಹ ನಡೆಸುತ್ತಿದ್ದಾರೆ .

 

ಇದೆ ವೇಳೆ ರೈತ ಮಹಾಲಿಂಗಪ್ಪ ಎಂಬುವರು ಮಾತನಾಡಿ ಸರ್ವೆ ನಂಬರ್ 65 ರ 3 ಎಕರೆ ಜಮೀನಿನಲ್ಲಿ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಲಾಗಿದೆ, ಆದರೆ ಕ್ರಶರ್ ಪಕ್ಕದ ಜಮೀನಿನ 55ರ ಸರ್ವೆ ನಂಬರ್ ನಲ್ಲಿ ನಾವುಗಳು ತೆಂಗಿನ ಸಸಿಗಳನ್ನು ಬೆಳೆಸಿ ವ್ಯವಸಾಯ ಮಾಡುತಿದ್ದೇವೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ಸಹ ನಮ್ಮ ನಮ್ಮ ಹೆಸರಿಗೆ ಬರುತ್ತಿದ್ದು.

 

ಕ್ರಶರ್ ಮಾಲೀಕರು ರಸ್ತೆ ಬಿಡುವಂತೆ ಒತ್ತಾಯ ಕೂಡ ಈ ಹಿಂದೆ ಮಾಡಿದ್ದರು, ಆದರೆ ನಾವುಗಳು ರಸ್ತೆ ಮಾಡಲು ಒಪ್ಪಿರಲಿಲ್ಲ, ಆದರೆ ಇದಕ್ಕಿದ್ದ ಹಾಗೆ ಇಂದು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಇದು ಗೋಮಾಳ ಜಮೀನು ಎಂದು ಹೇಳುತ್ತಿದ್ದಾರೆ ರೈತರಾದ ನಮಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ,

 

ಇಷ್ಟು ವರ್ಷದಿಂದ ನಾವುಗಳು ಇಲ್ಲಿ ವ್ಯವಸಾಯ ಮಾಡುತ್ತಿದ್ದೇವೆ, ನಮ್ಮ ಗತಿ ಏನು ಎಂದು ತಮ್ಮ ಅಳಲನ್ನು ತೋಡಿಕೊಂಡರು, ಒಟ್ಟಾರೆ ಇಲ್ಲಿ ಎಲ್ಲಾ ಬರಿ ಪ್ರಶ್ನೆಯಾಗಿ ಉಳಿದಿದೆ ಸುಮಾರು ವರ್ಷದಿಂದ ವ್ಯವಸಾಯ ಮಾಡುತ್ತಿರುವ ರೈತರದ್ದೇ ತಪ್ಪಾ? ಹೈಕೋರ್ಟ್ ಆದೇಶವನ್ನು ಪಾಲಿಸುತ್ತಿರುವ ಜಿಲ್ಲಾಡಳಿತದ ತಪ್ಪಾ? ಅಥವಾ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಶೀಲ್ದಾರ್ ಕಾರ್ಯ ನಿರ್ವಹಿಸುತ್ತಿರುವುದು ತಪ್ಪಾ? ಇದು ಯಾವ ಕೋರ್ಟ್ ನಲ್ಲಿ ತೀರ್ಮಾನವಾಗುತ್ತೆ ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಒಟ್ಟಾರೆ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತರಂತೂ ಕಂಗಾಲಾಗಿ ಹೋಗಿದ್ದಾರೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Leave a Reply

Your email address will not be published. Required fields are marked *