Janataa24 NEWS DESK
Turuvekere: ಶಿಸ್ತು ಸಂಯಮಕ್ಕೆ ಹೆಸರಾದ, ಎಸ್ ಎಸ್ ವಿ ಕಾಲೇಜಿನ, ದ್ವಿತೀಯ ಪಿಯುಸಿ ಫಲಿತಾಂಶ ಶೇಕಡ 96%.
ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿ(SSV PU College)ನ, 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಈ ಬಾರಿ ಶೇಕಡಾ 96%, ಫಲಿತಾಂಶ ಬಂದಿದ್ದು ಕಾಲೇಜಿನ ಕೀರ್ತಿ ತಾಲೂಕಿನಾದ್ಯಂತ ಪಸರಿಸಿದೆ.
ಇನ್ನು ಈ ಕಾಲೇಜಿನಲ್ಲಿ ಈ ಬಾರಿ ಕಾಲೇಜಿನ ಟಾಪರ್ಸ್ ಆಗಿ,

ವಾಣಿಜ್ಯ ವಿಭಾಗದಲ್ಲಿ, ಛಾಯಾ 585 ಅಂಕ,
ವಿಜ್ಞಾನ ವಿಭಾಗದಲ್ಲಿ ಹರ್ಷಿತ ಎ 553 ಅಂಕ,
ಕಲಾ ವಿಭಾಗದಲ್ಲಿ ಜೀವನ್ 538 ಅಂಕ ಪಡೆದು ,ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ, ಒಟ್ಟಾರೆ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಮೂರು ವಿಭಾಗಗಳಿಂದ ಒಟ್ಟು 357 ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿ ಯು ಸಿ ಪರೀಕ್ಷೆಗೆ ಹಾಜರಾಗಿದ್ದು, 341 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತೇರ್ಗಡೆಯಾದ ವಿದ್ಯಾರ್ಥಿಗಳ ಪಟ್ಟಿ ಹೀಗಿದೆ.
ಅತ್ಯುನ್ನತ ಶ್ರೇಣಿ 55 ವಿದ್ಯಾರ್ಥಿಗಳು
ಪ್ರಥಮ ಶ್ರೇಣಿ 239 ವಿದ್ಯಾರ್ಥಿಗಳು
ದ್ವಿತೀಯ ಶ್ರೇಣಿ 39 ವಿದ್ಯಾರ್ಥಿಗಳು
ತೃತೀಯ ಶ್ರೇಣಿ ಎಂಟು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಜೊತೆಗೆ ಇದೆ ಕಾಲೇಜಿನ ವಿದ್ಯಾರ್ಥಿಗಳಾದ ಕನ್ನಡದ ಭಾಷಾ ವಿಷಯದಲ್ಲಿ ಇನ್ನೂ ಇಬ್ಬರು ವಿದ್ಯಾರ್ಥಿಗಳಾದ, ಶರತ್ ಕುಮಾರ್ ಬಿ ಸಿ, ಕೀರ್ತನ, ಹಾಗೂ ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಎನ್ ಡಿ ಎಂಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.
ಇದೆ ವೇಳೆ ಫಲಿತಾಂಶವನ್ನು ಕುರಿತು ಮಾತನಾಡಿದ ಪ್ರಾಂಶುಪಾಲರಾದ ಕಾಂತರಾಜು, ಕನ್ನಡ ವಿಭಾಗದ ಶಿಕ್ಷಕರಾದ ಚಂದ್ರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ(PUC Result) ಶೇಕಡ 96%, ಬಂದಿದ್ದು, ನಮಗೂ ಸಂತಸದ ವಿಷಯ, ನಾವುಗಳು ಇನ್ನೂ ಹೆಚ್ಚಿನ ಶೇಕಡವಾರು ನಿರೀಕ್ಷೆಯಲ್ಲಿದ್ದೆವು ನಮ್ಮ ನಿರೀಕ್ಷೆಯಂತೆ ಹತ್ತಿರದಲ್ಲೇ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ನಮಗೂ ಮತ್ತು ನಮ್ಮ ಕಾಲೇಜಿನ ಎಲ್ಲಾ ಶಿಕ್ಷಕ ವರ್ಗದವರಿಗೂ ಬಹಳ ಖುಷಿಯ ವಿಚಾರ,
ನಮ್ಮ ಕಾಲೇಜು, ಶಿಸ್ತು, ಸಂಯಮಕ್ಕೆ ಅತಿ ಹೆಚ್ಚು ಹೊತ್ತುಕೊಟ್ಟು, ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳಿಗೆ, ಅವರೊಂದಿಗೆ ನಾವು ಕೂಡ ವಿದ್ಯಾರ್ಥಿಗಳಾಗಿ ಅವರಿಗೆ ಶಿಕ್ಷಣವನ್ನು ಕೊಡುವಂತ ಕೆಲಸ ಮಾಡಿಕೊಂಡು ಬಂದಿದ್ದು, ಅದೇ ರೀತಿ ವಿದ್ಯಾರ್ಥಿಗಳು ನಮ್ಮೊಂದಿಗೆ ಪ್ರೀತಿಯಿಂದ ಆತ್ಮವಿಶ್ವಾಸದಿಂದ ನಾವು ಹೇಳಿಕೊಡುವ ಪಾಠವನ್ನು ಬಹಳ ಜಾಗರೂಕತೆಯಿಂದ ಗಮನವಿಟ್ಟು ಕೇಳಿರುವ ಹಿನ್ನೆಲೆಯಿಂದ ,ಈ ಬಾರಿ ನಮ್ಮ ಕಾಲೇಜಿನಲ್ಲಿ 96%, ಫಲಿತಾಂಶ ಬಂದಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫಲಿತಾಂಶವನ್ನು ನಾವು ನಮ್ಮ ಕಾಲೇಜಿನಿಂದ ಕೊಟ್ಟೆ ಕೊಡುತ್ತೇವೆ ಎಂದರು.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/turuvekere-leopard-sighting-in-kerevaragerahalli/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv