Janataa24 NEWS DESK
Turuvekere: ಪಿಡಿಒ ದರ್ಪಕ್ಕೆ ರೋಸಿಹೋದ ಸದಸ್ಯರು,ಅಧಿಕಾರಿಯ ಅವ್ಯವಹಾರ ಬಯಲಿಗೆಳೆಯಲು ವಕೀಲ ನಾಗರಾಜ್ ಎಂಟ್ರಿ.
ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಮ್ಮರದೇವನಹಳ್ಳಿ, ದಾಸೀಹಳ್ಳಿ, ನಿಂಬೆಹಳ್ಳಿ,ಕೋ,ಗೊಲ್ಲರಹಟ್ಟಿ, ಗ್ರಾಮಗಳಲ್ಲಿ ಸತತವಾಗಿ 15 ದಿನಗಳಿಂದಲೂ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಕಂಗಾಲಾಗಿದ್ದು ಈ ಸಮಸ್ಯೆಯ ಬಗ್ಗೆ ಕೆಲ ಪಂಚಾಯಿತಿ ಸದಸ್ಯರು ಗ್ರಾಮದ ಮುಖಂಡರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರನ್ನು ಸಹ ಸಲ್ಲಿಸಿದ್ದು,
ಇದುವರೆಗೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಇದರಿಂದ ಬೇಸತ್ತ ಮೇಲ್ಕಂಡ ಗ್ರಾಮಗಳ ಗ್ರಾಮಸ್ಥರು ಕೆಲ ಪಂಚಾಯ್ತಿ ಸದಸ್ಯರು ಗ್ರಾಮ ಪಂಚಾಯಿತಿಯ ಮುಂಬಾಗ ವಕೀಲರಾದ ನಾಗರಾಜು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಯ ಮುಂದೆ ಹೋರಾಟಕ್ಕೆ ಮುಂದಾಗಿದ್ದು, ಇದೇ ವೇಳೆ ವಕೀಲರಾದ ನಾಗರಾಜು ಮಾತನಾಡಿ ಸತತ 15 ದಿನಗಳಿಂದಲೂ ಮೇಲ್ಕಂಡ ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ ವಿದ್ಯುತ್ ಕಂಬದಲ್ಲಿ ಬಲ್ಬುಗಳಿಲ್ಲ,
ಗ್ರಾಮಸ್ಥರಾದ ನಾವುಗಳು ಹಲವು ಬಾರಿ ಪಿ ಡಿ ಓ ಗೆ ಕರೆ ಮಾಡಿದರೆ ನಾನು ಪಂಚಾಯಿತಿಯಲ್ಲಿಲ್ಲ ಹೊರಗಡೆ ಇದ್ದೀನಿ ಎಂಬ ತಾತ್ಸಾರ ಮಾತನಾಡಿ ವಿದ್ಯುತ್ ಕಂಬಗಳಲ್ಲಿ ಬಲ್ಪ್ ಇಲ್ಲ ಎಂದರೆ ಹಣ ತೆಗೆದುಕೊಂಡು ಬಾ ಹಾಕಿಸಿಕೊಡುತ್ತೇನೆ ಎಂದು ನಮಗೆ ಉತ್ತರ ನೀಡುತ್ತಾರೆ.
ನೀವು ಯಾರಿಗೆ ದೂರು ನೀಡುತ್ತೀರಾ ನೀಡಿ ಪಾವಗಡದಲ್ಲಿದ್ದಾಗ ನಾನು ಮತ್ತು ಇ ಓ ಇಬ್ಬರ ಸಂಬಂಧ ಚೆನ್ನಾಗಿದೆ ಏನು ಮಾಡುತ್ತಿರೋ ಮಾಡಿಕೊಳ್ಳಿ ಈಗಾಗಲೇ ಎರಡು ಬಾರಿ ಅಮಾನತ್ತು ಆಗಿರೋನು ನಾನು, ಬೇಕಾದರೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ಕೊಟ್ಟಿಕೊಳ್ಳಿ ಎನ್ನುತ್ತಾರೆ, ಜನಸಾಮಾನ್ಯರು ಪಂಚಾಯಿತಿ ಬಳಿ ಅಭಿವೃದ್ಧಿ ಅಧಿಕಾರಿಯನ್ನು ಪ್ರತಿನಿತ್ಯ ಹುಡುಕಿಕೊಂಡು ಬಂದರೆ ಜನಸಾಮಾನ್ಯರಿಗೆ ಈತ ಸಿಗುವುದೇ ಇಲ್ಲ.
ನಾವುಗಳೇ ಅವರನ್ನು ಇರುವ ಜಾಗಕ್ಕೆ ಹುಡುಕಿಕೊಂಡು ಹೋಗಿ ಕೇಳಿದ್ದಷ್ಟು ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂದೊದಗಿದೆ, ಆದರೆ ಸರಿಯಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಂದ್ರ ಸ್ಥಾನದಲ್ಲಿ ಇಲ್ಲ ಅವರು ದಿನನಿತ್ಯ ನೆಲಮಂಗಲದಿಂದ ಸಂಚರಿಸಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪಂಚಾಯತ್ ಆಕ್ಟ್ ಪ್ರಕಾರ ಕೇಂದ್ರ ಸ್ಥಾನದಿಂದ ಒಬ್ಬ ಅಧಿಕಾರಿ 7 ಕಿ.ಮೀ ವ್ಯಾಪ್ತಿಯಲ್ಲಿ ವಾಸವಿರಬೇಕು ಆದರೆ ಅವರು ಇಲ್ಲಿ ವಾಸವಿಲ್ಲ ಸರಿಯಾಗಿ ಪಂಚಾಯಿತಿಯಲ್ಲಿ ಇರುವುದಿಲ್ಲ.
ನಾವುಗಳು ಏನಾದರೂ ದೂರವಾಣಿ ಮೂಲಕ ಕರೆ ಮಾಡಿ ಕೇಳಿದರೆ ತುರುವೇಕೆರೆ ಈ ಓ,ಕಚೇರಿಯಲ್ಲಿ ಮೀಟಿಂಗ್ ನಲ್ಲಿದ್ದೇನೆ ಎಂದು ಹೇಳುತ್ತಾರೆ ನಾವು ಸಹ ಅದೇ ಸಂದರ್ಭದಲ್ಲಿ, ಇ ಓ ,ಗೆ ಕರೆ ಮಾಡಿ ಕೇಳಿದ್ದು ಅವರು ಪಿಡಿಓ ಇಲ್ಲಿಗೆ ಬಂದೇ ಇಲ್ಲ ಎಂದು ಹೇಳುತ್ತಾರೆ ಹಾಗಾದರೆ ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದೇ ತಿಳಿಯುತ್ತಿಲ್ಲ ಜೊತೆಗೆ ಈ ಪಿ ಡಿ ಓ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಪಂಚಾಯತ್ ರಾಜ್ ಇಲಾಖೆಗೆ ಬಂದಿದ್ದು ಈ ಪಂಚಾಯಿತಿಯಲ್ಲಿಯೂ ಪೋಲಿಸ್ ಇಲಾಖೆಯ ಕಾರ್ಯ ವೈಖರಿ ರೀತಿ ನಿರ್ವಹಿಸಿ ದುರ್ವರ್ತನೆ, ದರ್ಪ, ತೋರುತ್ತಾರೆ ಎಂಬುದು ಮೇಲ್ನೋಟಕ್ಕೆ ಆತನ ಮಾತಿನಿಂದಲೇ ತಿಳಿಯುತ್ತದೆ, ಪ್ರತಿ ಬಾರಿಯೂ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಬಗ್ಗೆ ಗಮನಹರಿಸುವುದಿಲ್ಲ.
ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಕರೆ ಮಾಡಿದರೆ ಏನಪ್ಪಾ, ಏನೋ, ಇನ್ನು ಹಲವು ಶಬ್ದಗಳಿಂದ ಏಕವಚನದಲ್ಲಿ ಮಾತನಾಡುತ್ತಾರೆ, ಈ ಖಾತೆ ಮಾಡಲು ಅರ್ಜಿ ಹಾಕಿದರೆ ವೈಯಕ್ತಿಕವಾಗಿ ಆತ ಕರೆದ ಜಾಗಕ್ಕೆ ಹೋಗಿ ಹಣ ನೀಡಿ ಕೆಲಸ ಮಾಡಿಕೊಳ್ಳಬೇಕಾಗಿದೆ, ಇದಲ್ಲದೆ ಪಂಚಾಯಿತಿಯಲ್ಲಿ ಇಲ್ಲಿಯವರೆಗೂ ಮೂವ್ಮೆಂಟ್ ರಿಜಿಸ್ಟರ್ ಬುಕ್ ಇಲ್ಲವೇ ಇಲ್ಲ, ಇದಲ್ಲದೆ ಸೊರವನಹಳ್ಳಿ ವ್ಯಾಪ್ತಿಗೆ ಬರುವ ಒಂದು ಕರಾಬು ಜಾಗವನ್ನು ಈ ಆಸ್ತಿ ದಾಖಲೆ ಮಾಡಲು ಲಕ್ಷ ಲಕ್ಷ ಹಣ ಪಡೆದು ಮಾಡಿದ್ದು ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಇದರ ಬಗ್ಗೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಆನ್ಲೈನ್ ಮೂಲಕ ದೂರನ್ನು ಸಹ ನಾನು ನೀಡಿದ್ದು,
ಪಂಚಾಯಿತಿಯಲ್ಲಿ ಇಲ್ಲಿಯವರೆಗೂ ಸರಿಯಾಗಿ ಸಾಮಾನ್ಯ ಸಭೆಯಾಗಲಿ ಗ್ರಾಮ ಸಭೆಯಾಗಲಿ ಜೊತೆಗೆ ಯಾವುದೇ ತಾಂತ್ರಿಕ ಸಭೆ ಕೂಡ ನಡೆಯದಿರುವುದು ನಮಗೆ ಕೆಲವು ಮೂಲಗಳಿಂದ ತಿಳಿದಿದೆ ಈ ಗ್ರಾಮಪಂಚಾಯಿತಿಯಲ್ಲಿ ಇನ್ನು ಅನೇಕ ಅವ್ಯವಹಾರ, ಕರ್ತವ್ಯ ಲೋಪವೆಸಗಿದ್ದಾರೆ ಎಂದು ಮಾಧ್ಯಮದ ಮುಂದೆ ನೇರವಾಗಿ ಆರೋಪ ಮಾಡಿದ್ದರು. ಹಾಗಾದರೆ ಈ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗುವರ ಎಂಬುದನ್ನ ಕಾದು ನೋಡೋಣ.
ಇದೇ ಸಂದರ್ಭದಲ್ಲಿ ಹಾಲಿ ಸದಸ್ಯರಾದ ಸದಸ್ಯರಾದ ಗೋವಿಂದಯ್ಯ, ಬಾಲಾಜಿ, ಸುರೇಶ್, ಇಬ್ಬರು ಮಹಿಳಾ ಸದಸ್ಯರ ಪತಿಗಳಾದ ಖಾಲಿದ್, ಅರುಣ್ ಕುಮಾರ್, ಮಾಜಿ ಸದಸ್ಯರಾದ ಸೋಮಶೇಖರ್, ಮಹೇಶ್, ಗ್ರಾಮಸ್ಥರುಗಳಾದ ಕೆ ರೇವಣ್ಣ, ರವಿ, ಗಿರಿಯಣ್ಣ, ಗೌಡಯ್ಯ, ಸಣ್ಣಪ್ಪ, ಗೋವಿಂದರಾಜು, ಜಿತೇಂದ್ರಕುಮಾರ್, ಹಲವರು ಇದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.