Janataa24 NEWS DESK
Turuvekere: ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೀದಿ ದೀಪವಿಲ್ಲದೆ ಬರಿ ಕತ್ತಲು, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕಣ್ಣಮುಚ್ಚಾಲೆ.
ತುರುವೇಕೆರೆ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಯ ಕಚೇರಿ ಸ್ಥಳದಿಂದ ಬಾಣಸಂದ್ರ ರಸ್ತೆಯ ಪಶು ಆಸ್ಪತ್ರೆಯ ವರೆಗೆ ಬೀದಿ ದೀಪಗಳಿಲ್ಲದೆ ಸಾರ್ವಜನಿಕರು ಪಾದಚಾರಿಗಳು ಸಂಚರಿಸಲು ಸಾಧ್ಯವಾಗದೆ ಪಟ್ಟಣ ಪಂಚಾಯಿತಿಯ ಕಾರ್ಯವೈಖರಿ ಕತ್ತಲಲ್ಲಿ ಮುಳುಗಿರುವುದು ಎದ್ದು ಕಾಣುತ್ತಿದೆ ದಿನನಿತ್ಯ ಸಾವಿರಾರು ವಾಹನಗಳು ಸಾರ್ವಜನಿಕರು ಸಂಚರಿಸಲು ಈ ರೀತಿ ಬೀದಿ ದೀಪಗಳಿಲ್ಲದೆ ಪರಿತಪಿಸುವಂತಾಗಿದೆ ಜೊತೆಗೆ ಕಳ್ಳ ಕಾಕರಿಗೆ ಅವರ ಕೈಚಳಕ ತೋರಿಸಲು ಪಟ್ಟಣ ಪಂಚಾಯತಿಯೇ ದಾರಿ ಮಾಡಿಕೊಟ್ಟಂತಾಗಿದೆ.
ಈಗಾಗಲೇ ಇದೇ ರಸ್ತೆಯಲ್ಲಿ ಇರುವ ಅಂಗಡಿಯಲ್ಲಿ ಕೆಲ ತಿಂಗಳು ಹಿಂದೆ ಕಳ್ಳತನ ಕೂಡ ಆಗಿದ್ದು ಅದು ಮಾಸುವ ಮೊದಲೇ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿರುವುದು ಎಷ್ಟರಮಟ್ಟಿಗೆ ಸರಿ ಹೇಳಿ,ಇದಲ್ಲದೆ ಮುಖ್ಯವಾಗಿ ಪಟ್ಟಣ ಪಂಚಾಯಿತಿಯ ಕಚೇರಿಯು ಕೂಡ ಇದೇ ರಸ್ತೆಯಲ್ಲಿದ್ದು ಕೂಡಲೇ ಪಟ್ಟಣ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಿ ಪಟ್ಟಣವಾಸಿಗಳಿಗೆ ವಾಹನ ಸವಾರರಿಗೆ ಪಾದಚಾರಿಗಳಿಗೆ ಒಟ್ಟಾರೆ ಸಾರ್ವಜನಿಕರನ್ನು ಕತ್ತಲಿನಿಂದ ಮುಕ್ತಿ ಕೊಟ್ಟು ಕತ್ತಲಿನಿಂದ ಬೆಳಕಿನೆಡೆಗೆ ಕರೆ ತನ್ನಿ. ಒಟ್ಟಾರೆ ಕತ್ತಲೆಯ ಈ ರಸ್ತೆಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿದರೆ ಪಟ್ಟಣ ಪಂಚಾಯತಿಯೇ ನೇರ ಹೊಣೆ ಎಂದರು ಆಶ್ಚರ್ಯವೇನಿಲ್ಲ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.