Janataa24 NEWS DESK
Turuvekere: ಮಾಚೇನಹಳ್ಳಿ ಗ್ರಾಮದಲ್ಲಿ ಡಿಎಸ್ಎಸ್ ಗ್ರಾಮ ಶಾಖೆಗೆ ನಾಗತಿಹಳ್ಳಿ ಕೃಷ್ಣಮೂರ್ತಿ ಚಾಲನೆ.


ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಗೆ ಬರುವ ಮಾಚೇನಹಳ್ಳಿ ಗ್ರಾಮದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ 47/74/75(ರಿ) ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯನ್ನು ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಸಂಚಾಲಕ ತಿಮ್ಮೇಶ್ ರವರ ನೇತೃತ್ವದಲ್ಲಿ ಗ್ರಾಮ ಶಾಖೆಯನ್ನು ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಹಾಗೂ ಗ್ರಾಮ ಶಾಖೆಯ ನಾಮಫಲಕವನ್ನು ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವರ ಕುಮಾರ್ ಉದ್ಘಾಟಿಸಿದರು.
ಇದೆ ವೇಳೆ ಗ್ರಾಮ ಶಾಖೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಗಿ ತಾಲೂಕು ಸಂಘಟನಾ ಸಂಚಾಲಕರಾಗಿ ಪ್ರಸಾದ್, ಗ್ರಾಮ ಸಂಚಾಲಕರಾಗಿ ನಾರಾಯಣ, ಗ್ರಾಮ ಶಾಖೆಯ ಸಂಘಟನಾ ಸಂಚಾಲಕರುಗಳಾಗಿ ಗಂಗಾಧರ್, ರಾಮಚಂದ್ರಯ್ಯ, ನಾಗೇಂದ್ರ, ಅಶೋಕ್, ನರಸಿಂಹಮೂರ್ತಿ,
ಹಾಗೂ ಮಹಿಳಾ ಸಂಚಾಲಕರಾಗಿ ಗೌರಮ್ಮ ಗಿರೀಶ್, ಮಹಿಳಾ ಸಂಘಟನಾ ಸಂಚಾಲಕರಾಗಿ ಭೂಮಿಕಾ, ಗೌರಮ್ಮ ಕೃಷ್ಣಮೂರ್ತಿ ಇವರುಗಳನ್ನು ಆಯ್ಕೆ ಮಾಡಲಾಯಿತು, ಇದೆ ವೇಳೆ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ದಲಿತ ಸಂಘರ್ಷ ಸಮಿತಿಯು ಪ್ರೊ ಬಿ ಕೃಷ್ಣಪ್ಪನವರ ಚಿಂತನೆ, ಆದರ್ಶ ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದು, ಹಲವು ವರ್ಷಗಳಿಂದ ದಲಿತರಿಗೆ, ಶೋಷಿತರಿಗೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ನಾವುಗಳು ಸಹ ಅವರು ನಡೆದು ಬಂದ ದಾರಿಯನ್ನು ಅನುಸರಿಸಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು, ನಂತರ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವರ ಕುಮಾರ್ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ರವರು ಭಾರತೀಯ ಸಂವಿಧಾನದ ಪ್ರಮುಖ ವಾಸ್ತುಶಿಲ್ಪಿ, ಸಾಮಾಜಿಕ ನ್ಯಾಯದ ಪ್ರತಿಪಾದಕ, ಮತ್ತು ದಲಿತರ ಹಾಗೂ ಮಹಿಳೆಯರ ಹಕ್ಕುಗಳ ಹೋರಾಟಗಾರರಾಗಿದ್ಧರು.
ಭಾರತದ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಮೂಲಭೂತ ಹಕ್ಕುಗಳ ರಕ್ಷಣೆ, ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆ ಮತ್ತು ಮಹಿಳೆಯರ ಹಕ್ಕುಗಳಿಗೆ ಅವರು ನೀಡಿದ ಕೊಡುಗೆಗಳು ಭಾರತೀಯ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದ್ದು ಒಂದು ಕಾಲದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಜಾತಿ ವಿನಾಶ, ಅಸ್ಪೃಶ್ಯತೆ ವಿನಾಶ, ಸರ್ವರಿಗೂ ಶಿಕ್ಷಣ, ಮೌಡ್ಯ, ಕಂದಾಚಾರ ವಿನಾಶ, ಭೂ ರಹಿತರಿಗೆ ಭೂಮಿ ಹಂಚಿಕೆ ಹೀಗೆ ಹತ್ತು ಹಲವು ವಿಷಯ ಇಟ್ಟುಕೊಂಡು ದಲಿತ ಸಂಘರ್ಷ ಸಮಿತಿ ಹೋರಾಟ ಮಾಡುತ್ತಿದ್ದು,
ಈಗಲೂ ಸಹ ನಾವುಗಳು ಹಚ್ಚಿದ ಹಣತೆಯನ್ನು ಹಾರಿಸದೆ ನೋಡಿಕೊಳ್ಳುವಂತಹ ತಾಳ್ಮೆ ಬೆಳೆಸಿಕೊಂಡು ಸಾಮಾಜಿಕವಾಗಿ ಹೋರಾಟವನ್ನು ಮುನ್ನಡೆಸಲು ಇನ್ನೂ ಸಹ ನಾವು ಪುಟಿದೇಳಬೇಕು, ಜಾತಿ ವಿನಾಶ ವೇದಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಪ್ರೊ ಬಿ ಕೃಷ್ಣಪ್ಪ ಅವರು ಶೋಷಿತರಿಗೆ ಪ್ರತ್ಯೇಕ ಸಂಘಟನೆಯ ಅಗತ್ಯತೆ ಇದೆ ಎಂಬುದನ್ನರಿತು ದಲಿತ ಸಂಘರ್ಷ ಸಮಿತಿ ಹುಟ್ಟುಹಾಕಿದ್ದು ,
ಈ ಸಂಘಟನೆ ಇಂದಿಗೂ ಬಹು ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ತನ್ನ ಹೋರಾಟವನ್ನು ಮುಂದುವರಿಸಿದೆ ಆದರೆ ಕೆಲವರು ಬಡವರ ಕಣ್ಣೀರು ಒರೆಸುವ ಬದಲಾಗಿ ರಕ್ತ ಬರುವಂತೆ ಮಾಡುತ್ತಿದ್ದಾರೆ ಅನ್ಯಾಯಕ್ಕೇ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ನಾವುಗಳು ಮಾಡಬೇಕು ಅಲ್ಲದೆ ದಲಿತರ ಶ್ರೇಯೋಭಿವೃದ್ಧಿಗಾಗಿ ಸರಕಾರ ಹತ್ತು ಹಲವು ಯೋಜನೆ ರೂಪಿಸಿದ್ದರು ಮಾಹಿತಿ ಕೊರತೆಯಿಂದಾಗಿ ದಲಿತರ ಸ್ಥಿತಿಗತಿ ಇನ್ನೂ ಕೂಡ ಸುಧಾರಿಸಿಲ್ಲ ಇನ್ನು ಮುಂದಾದರು ಯೋಜನೆಗಳ ಬಗ್ಗೆ ಸಮಗ್ರವಾದ ಮಾಹಿತಿ ಪಡೆದು ನ್ಯಾಯದ ಪರವಾಗಿ ಹೋರಾಟ ಮಾಡಿ ಉತ್ತಮ ಜೀವನವನ್ನು ಈ ಸಮಾಜದಲ್ಲಿ ನಾವುಗಳು ಕಂಡುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನರಸಿಂಹಮೂರ್ತಿ ಆಗಸರಹಳ್ಳಿ, ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕರಾದ ಲಾವಣ್ಯ, ಗುಬ್ಬಿ ತಾಲೂಕು ಸಂಘಟನಾ ಸಂಚಾಲಕಿ ಸಂಧ್ಯಾ, ತುರುವೇಕೆರೆ ತಾಲೂಕು ಸಂಘಟನಾ ಸಂಚಾಲಕರುಗಳಾದ ಬೋರಪ್ಪ, ಗೋವಿಂದ್ ರಾಜ್, ಲಕ್ಷ್ಮೀಶ್, ಡಿ ಆರ್. ರಾಮಚಂದ್ರ, ಮಧು ಸಿದ್ದಾಪುರ, ಕೆಂಪಯ್ಯ, ಶಿವಣ್ಣ ಮುತ್ತುಗದಹಳ್ಳಿ, ವಿನಯ್ ,ಸಂತೋಷ್, ಹುಲ್ಲೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ, ಚಿಕ್ಕನಾಯಕನಹಳ್ಳಿ ಸಂಚಾಲಕರಾದ ಲಿಂಗರಾಜು, ಸಂಘಟನಾ ಸಂಚಾಲಕರಾದ ಗೋಪಾಲ್, ಅಲ್ಪಸಂಖ್ಯಾತರ ತುರುವೇಕೆರೆ ಘಟಕದ ತಾಲೂಕು ಸಂಚಾಲಕರಾದ ಅಬ್ಜಲ್, ಹೊನ್ನೇನಹಳ್ಳಿ ಕೃಷ್ಣಪ್ಪ, ತಿಪಟೂರು ಸಂಚಾಲಕರಾದ ಅರಚನಹಳ್ಳಿ ಮಂಜುನಾಥ್, ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.