Turuvekere: 10 ಕೋಟಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ ಟಿ ಕೃಷ್ಣಪ್ಪ. 

Janataa24 NEWS DESK 

 

Turuvekere: 10 ಕೋಟಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ ಟಿ ಕೃಷ್ಣಪ್ಪ.

 

ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತಾಲೂಕಿನ ಟಿ ಬಿ ಕ್ರಾಸ್ ಚೆಕ್ ಪೋಸ್ಟ್ ನಿಂದ ದಾಸಿಹಳ್ಳಿ ಗೇಟ್ ವರೆಗೂ ಸುಮಾರು 10 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಜಡೆಯ ಗ್ರಾಮದ ಗೇಟ್ ಬಳಿ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು, ಸುಮಾರು ವರುಷಗಳಿಂದ ಈ ರಸ್ತೆ ನೆನೆಗುದಿಗೆ ಬಿದ್ದಿದ್ದು ವಾಹನ ಸವಾರರು ಮಾಯಸಂದ್ರದಿಂದ ಯಡಿಯೂರು ವರೆಗೆ ಸಂಚರಿಸಲು ಹರ ಸಾಹಸ ಪಡಬೇಕಾಗುವ ಪರಿಸ್ಥಿತಿ ಅಂತೂ ಇಲ್ಲಿಯವರೆಗೂ ನಿರ್ಮಾಣವಾಗಿತ್ತು, ಇದನ್ನೇ ಗಮನದಲ್ಲಿಟ್ಟುಕೊಂಡ ಶಾಸಕ ಎಂ ಟಿ ಕೃಷ್ಣಪ್ಪ ಅವರು ತುರುವೇಕೆರೆ ಪಿಡಬ್ಲ್ಯೂಡಿ ಲೆಕ್ಕ ಶೀರ್ಷಿಕೆ: 5054 ಎಸ್ ಎಚ್ ಡಿ ಪಿ ಯೋಜನೆ ಅಡಿ ಅಂದಾಜು 10 ಸಾವಿರ ಲಕ್ಷಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು, ಇದರಿಂದಾಗಿ ವಾಹನ ಸವಾರರ ಮೊಗದಲ್ಲಿ ಇನ್ನು ಮುಂದಾದರು ಈ ರಸ್ತೆಯಲ್ಲಿ ಸುಗಮವಾಗಿ ಚಲಿಸಬಹುದು ಎಂಬ ನಿಟ್ಟುಸಿರು ಬಿಟ್ಟಿರುವುದಂತೂ ನಿಜ.

 

ಇನ್ನೇನು ಕೆಲವೇ ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು ಮಾಯಸಂದ್ರ ದಿಂದ ಯಡಿಯೂರು ವರೆಗೆ ಸಂಚಾರ ಮಾಡುವುದರಲ್ಲಿ ಅದೃಷ್ಟವೇ ಸರಿ ಎನ್ನಿಸುತ್ತದೆ ಯಾಕೆಂದರೆ ಇಷ್ಟು ವರ್ಷಗಳ ಕಾಲ ಈ ರಸ್ತೆಯಲ್ಲಿ ಸಂಚಾರಿಸಲು ಪಡಬಾರದ ಕಷ್ಟಪಟ್ಟಿದ್ದಾರೆ ವಾಹನ ಸವಾರರು ಮತ್ತು ಸಾರ್ವಜನಿಕರು, ಈ ಕಾಮಗಾರಿಗೆ ಚಾಲನೆ ದೊರೆತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಮಂದಹಾಸ ಮೂಡಿದೆ.

 

ಇದೇ ವೇಳೆ ತುರುವೇಕೆರೆ ಲೋಕೋಪಯೋಗಿ ಇಲಾಖೆಯ ಎ ಇ ಇ, ಪ್ರಭಾಕರ್, ಕಣ್ಮಣಿ, ಇಮ್ರಾನ್, ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕಿನ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Pavagada: ಬೆಸ್ಕಾಂ ಇಲಾಖೆಯಲ್ಲಿಯೇ TC ಕಳ್ಳರಿದ್ದಾರೆ..!

 

Leave a Reply

Your email address will not be published. Required fields are marked *