Janataa24 NEWS DESK
Turuvekere: ಶಾಸಕ ಎಂ ಟಿ ಕೃಷ್ಣಪ್ಪ ನೇತೃತ್ವದಲ್ಲಿ ಬೆಲೆ ಏರಿಕೆ ಖಂಡಿಸಿ 21ರಂದು ಬೃಹತ್ ಪ್ರತಿಭಟನೆ.

ತುರುವೇಕೆರೆ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎನ್ ಡಿ ಎ ಮೈತ್ರಿಕೂಟದಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ರಣಕಹಳೆ ಮೊಳಗಿಸಲು ಮೈತ್ರಿಕೂಟದಿಂದ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಶಾಸಕರಾದ ಎಂ ಟಿ ಕೃಷ್ಣಪ್ಪ ಮಾತನಾಡಿ
ಇದೇ ತಿಂಗಳು 21ನೇ ತಾರೀಕು,
ತುರುವೇಕೆರೆ ತಾಲೂಕು ಎನ್ ಡಿ ಎ ಮೈತ್ರಿಕೂಟ ಪ್ರತಿಭಟನೆಗೆ ದಿನಾಂಕ ನಿಗದಿ ಜೊತೆಗೆ ಇದೊಂದು ಭ್ರಷ್ಟ ಸರ್ಕಾರ ಅನಿಷ್ಟ ದಟ್ಟ ದರಿದ್ರ ಸರ್ಕಾರ, ಎಲ್ಲಾ ವಸ್ತುಗಳ ಮೇಲು ಟ್ಯಾಕ್ಸ್ ಹಾಕಿದ್ದು ಸಗಣಿ ಮೇಲೂ ಟ್ಯಾಕ್ಸ್ ಹಾಕುವುದನ್ನು ಮಾತ್ರ ಬಾಕಿ ಬಿಟ್ಟಿದ್ದಾರೆ ಅಷ್ಟೇ, ನಮ್ಮ ತೆರಿಗೆ ಹಣದಲ್ಲಿ, ಕಾಂಗ್ರೆಸ್ ಗ್ಯಾರಂಟಿ ಅಧ್ಯಕ್ಷರುಗಳಿಗೆ ಸಂಬಳವಾಗಿ ನೀಡುತ್ತಿದ್ದಾರೆ ಜೊತೆಗೆ ಈ ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ 25,000 ಕೋಟಿ ಹಣ ಬರುತ್ತಿದೆ ಆದರೆ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ, ಜೊತೆಗೆ ಈಗಾಗಲೇ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಷ್ಟೇ ಗ್ಯಾರೆಂಟಿಗಳನ್ನು ನೀಡಿದರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೇವಲ 40 ಸೀಟುಗಳಷ್ಟೇ ಸಿಗುವುದಂತೂ ಗ್ಯಾರಂಟಿ, ಇಂತಹ ಅನಿಷ್ಟ ಕಾಂಗ್ರೆಸ್ ಸರ್ಕಾರ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಪರಿತಪಿಸುವಂತೆ ಮಾಡಿದೆ ಇದಕ್ಕೆ ತಕ್ಕ ಶಾಸ್ತಿ ಮುಂದಿನ ಚುನಾವಣೆಯಲ್ಲಿ ಉತ್ತರ ಸಿಗಲಿದೆ, ಇದಲ್ಲದೆ ನಮ್ಮ ತಾಲೂಕಿನಿಂದಲೇ ಮೊದಲ ಬಾರಿಗೆ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭವಾಗಲಿದ್ದು ಈ ಪ್ರತಿಭಟನೆಯಲ್ಲಿ ಎನ್ ಡಿ ಎ ಮೈತ್ರಿಕೂಟದ ರಾಜ್ಯದ ನಾಯಕರುಗಳು ಆಗಮಿಸಲಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲೂಕು, ಜಿಲ್ಲೆಗಳಲ್ಲಿ ಈ ಪ್ರತಿಭಟನೆಯನ್ನು ಮುಂದುವರಿಸಲಾಗುವುದು
ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ದಿನಾಂಕ ನಿಗದಿಗಾಗಿ ಇಂದು ಈ ಪೂರ್ವಭಾವಿ ಸಭೆ ನಡೆಸುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿಯ ನೂರಾರು ಕಾರ್ಯಕರ್ತರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಎನ್ ಡಿ ಎ ಮೈತ್ರಿಕೂಟದ ಪ್ರತಿಯೊಬ್ಬ ಪದಾಧಿಕಾರಿಗಳು ಇದರ ಜೊತೆಗೆ ತಾಲೂಕಿನ ಜನತೆ ಇನ್ನೂ ಹೆಚ್ಚಾಗಿ ಭಾಗವಹಿಸಿ ಯಾವುದೇ ಪಕ್ಷವಾಗಿರಲಿ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಇದು ಕೇವಲ ನನ್ನ ಒಬ್ಬನ ಸಮಸ್ಯೆಯಲ್ಲ ಪ್ರತಿಯೊಂದು ರೈತಾಪಿ ವರ್ಗದ ಜನಸಾಮಾನ್ಯ ವರ್ಗದ ಹೋರಾಟವಾಗಿದ್ದು ಪ್ರತಿಯೊಬ್ಬರೂ ಭಾಗವಹಿಸಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಬಿಜೆಪಿ ಮುಖಂಡ ಪ್ರಕಾಶ್, ಜೆಡಿಎಸ್ ಮುಖಂಡರಾದ ರಮೇಶ್ ಗೌಡ, ವೆಂಕಟಪುರ ಯೋಗೀಶ್, ಶಂಕರೇಗೌಡ, ಸಂಪಿಗೆ ಶ್ರೀನಿವಾಸ್, ಮಾಚೇನಹಳ್ಳಿ ರಾಮಣ್ಣ, ಹೆಡಗಿಹಳ್ಳಿ ವಿಶ್ವನಾಥ್, ಸೋಮಶೇಖರ್, ಸೋಮೇನಹಳ್ಳಿ ಜಗದೀಶ್, ಅನಿತಾ, ಬಸವರಾಜು, ವಕೀಲ ಧನಪಾಲ್, ದುಂಡ ಸುರೇಶ್, ಲಕ್ಷ್ಮಣ್ ಗೌಡ, ಸಿದ್ದಗಂಗಣ್ಣ, ರಂಗನಾಥ್ ಇನ್ನು ನೂರಾರು ಕಾರ್ಯಕರ್ತರು ಇದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.