Turuvekere: ಅಮಿತ್ ಷಾ ವಿರುದ್ಧ ಬೃಹತ್ ಪ್ರತಿಭಟನೆ.

Janataa24 NEWS DESK 

 

Turuvekere: ಅಮಿತ್ ಷಾ ವಿರುದ್ಧ ಬೃಹತ್ ಪ್ರತಿಭಟನೆ.

Turuvekere: ಅಮಿತ್ ಷಾ ವಿರುದ್ಧ ಬೃಹತ್ ಪ್ರತಿಭಟನೆ.

 

ತುರುವೇಕೆರೆ: ಗೃಹ ಸಚಿವ ಅಮಿತ್ ಷಾ ಅಂಬೇಡ್ಕರ್, ಅಂಬೇಡ್ಕರ್ ಅಂಬೇಡ್ಕರ್ ಎಂಬ ಸ್ಮರಣೆ ನಿಮಗೆಲ್ಲ ಹತ್ತಿದೆ ಇದರ ಬದಲಿಗೆ ದೇವರ ನೆನೆಪು ಮಾಡಿಕೊಳ್ಳಿ ಎಂದು ಹೇಳಿಕೆ ನೀಡಿರುವುದು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ಇದನ್ನು ಖಂಡಿಸಿ ಪಟ್ಟಣದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಡಿಎಸ್ಎಸ್ ಸಂಚಾಲಕರಾದ ಕುಮಾರ್ ದಂಡಿನ ಶಿವರ ನೇತೃತ್ವದಲ್ಲಿ ಪಟ್ಟಣದಲ್ಲಿ ಇಂದು ಪ್ರತಿಭಟನೆ ಮಾಡಲಾಯಿತು.

ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಕಾಲ್ನಡಿಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ ಅಂಬೇಡ್ಕರ್ ಭಾವಚಿತ್ರ ಹಿಡಿದು ತಮಟೆ ವಾದ್ಯದೊಂದಿಗೆ ತಾಲೂಕು ಕಚೇರಿ ಎದುರು ಇರುವ ಅಂಬೇಡ್ಕರ್ ರಸ್ತೆ ವೃತ್ತದಲ್ಲಿ ಅಮಿತ್ ಶಾ ಅವರ ಪ್ರತಿಕೃತಿ ಇಟ್ಟು ಅವರ ವಿರುದ್ಧ ಘೋಷಣೆ ಕೂಗುತ್ತಾ ದಹನ ಮಾಡಿದರು. ಇದೆ ವೇಳೆ ದಂಡಿನ ಶಿವರ ಕುಮಾರ್ ಮಾತನಾಡಿ ಅಮಿತ್ ಶಾ ಅವರೇ ತಾವು ಇಂದು ಸದನದಲ್ಲಿ ನಿಂತು ಮಾತನಾಡುತ್ತಿದ್ದೀರಾ ಎಂದರೆ ಅದಕ್ಕೆ ಕಾರಣವೇ ಅಂಬೇಡ್ಕರ್ ಅವರು ನೀವು ಕೊಟ್ಟಿರುವಂತಹ ಹೇಳಿಕೆ ಅಂಬೇಡ್ಕರ್ ರವರಿಗೆ ಮಾಡಿರುವಂತಹ ದೊಡ್ಡ ಅವಮಾನ ಭಾರತದ ಸಂವಿಧಾನವನ್ನು ಬರೆದಿರುವಂತಹ ಈ ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿರುವಂತಹ ಇವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ನಿಮಗೆ ಇಲ್ಲ ನೀವು ಕ್ಷಮೆ ಯಾಚಿಸಿದರು ಸಹ ನಾವು ಬೃಹತ್ ಪ್ರತಿಭಟನೆಯನ್ನು ದೇಶದಾದ್ಯಂತ ಮಾಡೇ ಮಾಡುತ್ತೇವೆ ಎಂದು ತಿಳಿಸಿದರು.

 

ಸಿಐಟಿಯು ಸತೀಶ್ ಮಾತನಾಡಿ ಅಂಬೇಡ್ಕರ್ ಬದಲಿಗೆ ದೇವರನ್ನು ನೆನಪಿಸಿಕೊಳ್ಳಿ ಎಂದು ಹೇಳಿಕೆ ನೀವು ನೀಡಿದ್ದೀರಾ ಸಂವಿಧಾನವೇ ನಮಗೆ ದೇವರು, ಅಂಬೇಡ್ಕರ್ ಅವರು ನಮಗೆ ದೆವರು. ಸಂವಿಧಾನದಲ್ಲಿರುವ

ಪ್ರತಿಯೊಂದು ವಸ್ತು ವಿಷಯವು ಸಹ ಈ ದೇಶದ ತಳಹದಿಯಾಗಿದೆ ಎಂಬುದನ್ನು ಮರೆಯಬೇಡಿ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮಿತ್ ಷಾ ಅವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

 

ನಿವೃತ್ತ ಶಿಕ್ಷಕ ಬೋರಪ್ಪ ಮಾತನಾಡಿ ಅಂಬೇಡ್ಕರ್ ಅವರ ವಿರುದ್ದ ನೀವು ಎಷ್ಟೇ ಮಾತನಾಡಿದರು ಸಹ ನಾವು ಅವರನ್ನು ದೊಡ್ಡ ಮಟ್ಟದಲ್ಲಿಯೇ ನೋಡುತ್ತೇವೆ. ನೋಡಿಯೂ ಇದ್ದೇವೆ ಅಂಬೇಡ್ಕರ್ ಅವರ ಪ್ರತಿಯೊಂದು ವಿಚಾರಧಾರೆಗಳು ಸಹ ಈ ದೇಶಕ್ಕೆ ಪೂರಕವಾಗಿದ್ದು ಸಮಾನತೆಯ ಹರಿಕಾರರಾಗಿದ್ದಾರೆ. ಮೊದಲು ದೇಶ ಬಿಟ್ಟು ತೊಲಗಿ ಎಂದರು.

 

ಪ್ರತಿಭಟನೆಯಲ್ಲಿ ದಲಿತ ಮುಖಂಡರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರುಗಳಾದ ಹೆಗ್ಗೆರೆ ರಾಮು, ಮಹಾಲಿಂಗಯ್ಯ, ಲಕ್ಷ್ಮೀಶ, ಗೋವಿಂದರಾಜು ಜಾಬಿರ್ ಹುಸೇನ್ ಸಾಬಿರ್ ಹುಸೇನ್, ಅಬ್ಜಲ್, ತಮ್ಮಯ್ಯ, ಹರೀಶ್, ಗಿರೀಶ್ ,ಶಿವಣ್ಣ, ಜಯಮ್ಮ, ನಂಜಪ್ಪ, ಶಿವನಂಜಪ್ಪ, ಭಾಗ್ಯಮ್ಮ, ಸಂಧ್ಯಾ, ಕೇಶವ ಕೊಳಘಟ್ಟ, ಇನ್ನು ಅನೇಕರು ಹಾಜರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *