Janataa24 NEWS DESK
Turuvekere: ಕೆರೆವರಗೆರಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆವರಗೆರಹಳ್ಳಿ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ಸರಿಸುಮಾರು 3:00 ಗಂಟೆಯ ವೇಳೆ ಗ್ರಾಮಸ್ಥನಾದ ಹರೀಶ್ ಎಂಬುವರು ಹಸು ಮೇಯಿಸುತ್ತಿದ್ದ ವೇಳೆ ತೋಟದ ತೆಂಗಿನ ಮರ ಒಂದರಿಂದ ಚಿರತೆ(Cheetah) ಕೆಳಗೆ ಇಳಿಯುತಿದ್ದು ಅದನ್ನು ಗಮನಿಸಿದ ಗ್ರಾಮಸ್ಥನಾದ ಹರೀಶ್ ಗ್ರಾಮಸ್ಥರುಗಳಿಗೆ ವಿಷಯ ಮುಟ್ಟಿಸಿದ್ದಾರೆ,
ಕೂಡಲೇ ಸ್ಥಳಕ್ಕೆ ಜನ ಜಮಾವಣೆಗೊಂಡದನ್ನು ಕಂಡು ಚಿರತೆ ಅಡ್ಡಾದಿಡ್ಡಿ ಒಡಲಾರಂಭಿಸಿದೆ, ಅಲ್ಲೇ ಜಮಾವಣೆಗೊಂಡಿದ್ದ ಗ್ರಾಮಸ್ಥರು ಚಿರತೆಯ(Cheetah) ಹಿಂದೆ ತೋಟ ತುಡಿಕೆಗಳ ನಡುವೆ ಹಿಂಬಾಲಿಸಿದ್ದಾರೆ, ತಕ್ಷಣ ಚಿರತೆ ಮತ್ತೊಂದು 60 ರಿಂದ 70 ಅಡಿ ಎತ್ತರದ ತೆಂಗಿನ ಮರವನ್ನು ಏರಿ ಕುಳಿತಿದ್ದು,
ಕೂಡಲೇ ಗ್ರಾಮಸ್ಥರು ಒಬ್ಬರು ಅರಣ್ಯ ಇಲಾಖೆಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ, ವಿಷಯ ಮುಟ್ಟಿಸಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಚಿರತೆ ಇರುವ ಬಗ್ಗೆ ಈಗಾಗಲೇ ವಿಷಯ ಮುಟ್ಟಿಸಿದ್ದು,
ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಏನು ತೆಗೆದುಕೊಳ್ಳುತ್ತಾರೆಂದು ಕಾದುನೋಡಬೇಕು. ಒಟ್ಟಾರೆ ಈ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದನ್ನು ಕಂಡು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/kolar-attack-on-dalit-literature-and-thinker-kot/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv