JANATAA24 NEWS DESK
Turuvekere: ಶಾಸಕರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ–ಡಿಪೋ ಮ್ಯಾನೇಜರ್ ವಿರುದ್ಧ ಹರಿಹಾಯ್ದ ಹೃತ್ವಿಕ್ ಗೌಡ.

ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ತುಮಕೂರು ಘಟಕದ ತುರುವೇಕೆರೆ ವಿಭಾಗದ ಕರ್ನಾಟಕ ಸಾರಿಗೆ ಸಂಸ್ಥೆಯ ಡಿಪೋ ಮ್ಯಾನೇಜರ್ ಗೆ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ನೀಡುವಂತೆ ಮನವಿಯನ್ನು ನೀಡಲಾಯಿತು.
ಇದೇ ವೇಳೆ ಜೆಡಿಎಸ್ ವಿದ್ಯಾರ್ಥಿ ಘಟಕದ ಮುಖಂಡ ಹೃತ್ವೀಕ್ ಗೌಡ ಮಾಧ್ಯಮದ ಮುಂದೆ ಮಾತನಾಡಿ ತಾಲೂಕಿನ ಗ್ರಾಮಗಳಾದ ಗೊರಗಟ್ಟ, ಕಲ್ಲೂರು ಕ್ರಾಸ್, ಕಲ್ಲೂರು ಮಾರ್ಗದ ವಿದ್ಯಾರ್ಥಿಗಳಿಗೆ ಕಲ್ಲೂರು ಮಾರ್ಗದಿಂದ ಗೊರಗಟ್ಟ ಮಾರ್ಗದಲ್ಲಿ ಪ್ರತಿನಿತ್ಯ 8:15 ಕ್ಕೆ ಈಗಾಗಲೇ ಬಸ್ ಸೌಲಭ್ಯ ಒದಗಿಸಿದ್ದೀರಿ ಆದರೆ ಈ ಮಾರ್ಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರಯಾಣಿಸುವಾಗ ಬಸ್ಗಳಲ್ಲಿ ಜಾಗ ಇಲ್ಲದೆ ಪರದಾಡುವಂತೆ ಸ್ಥಿತಿ ಜೊತೆಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ತಲುಪಲು ಆಗುತ್ತಿಲ್ಲ ಇದರಿಂದಾಗಿ 8:35ಕ್ಕೇ ಇನ್ನೊಂದು ಬಸ್ಸನ್ನು ಈ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಿ ಎಂದು ಈಗಾಗಲೇ ಸುಮಾರು ಮೂರು ಬಾರಿ ದೂರು ನೀಡಿದರು ನೀವು ಇದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.
ಜೊತೆಗೆ ಶಾಸಕರು ಹೇಳಿದರು ಸಹ ಕೇವಲ ಶಾಸಕರು ಹೇಳಿದ ಒಂದೆರಡು ದಿನಗಳು ಮಾತ್ರ ಬಸ್ ವ್ಯವಸ್ಥೆ ಕಲ್ಪಿಸಿದ್ದು ಎರಡು ಮೂರು ದಿನಗಳ ನಂತರ ಮತ್ತೆ ಬಸ್ ವ್ಯವಸ್ಥೆ ಕಲ್ಪಿಸದೆ ಮೀನಾ ಮೇಷ ಎಣಿಸುತ್ತಿದ್ದಾರೆ ಶಾಸಕರ ಮಾತಿಗೂ ತಲೆಕೆಡಿಸಿಕೊಳ್ಳದೆ ಬಸ್ ಡಿಪೋ ಮ್ಯಾನೇಜರ್ ಹಾರಿಕೆ ಉತ್ತರ ನೀಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಹೀಗೆ ಆದರೆ ತುರುವೇಕೆರೆ ತಾಲೂಕಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ನಮ್ಮ ಮಾಧ್ಯಮದ ಮುಖೇಎಚ್ಚರಿಕೆಕೆ ಸಂದೇಶ ರವಾನಿಸಿದ್ದು ಇದು ಕೊನೆ ಬಾರಿ ನೀಡುತ್ತಿರುವ ಮನವಿ ಎಂದರು.
ಇದೇ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.