Janataa24 NEWS DESK
Turuvekere: ಪಾರ್ಕಿಂಗ್ ದಂಧೆಗೆ ಇಳಿದೇ ಬಿಡ್ತಾ ಸೊರವನಹಳ್ಳಿ.ಗ್ರಾ.ಪಂ.? ಡಿಜಿಟಲ್ ಗ್ರಂಥಾಲಯದ ಮುಂಭಾಗ ಅವ್ಯವಸ್ಥೆ ಯಾಕೆ?

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಗೆ ಸೇರುವ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಪಕ್ಕದಲ್ಲಿಯೇ ಇರುವ ಡಿಜಿಟಲ್ ಗ್ರಂಥಾಲಯದ ಮುಂಭಾಗ ಮಳೆ ಬಂದರೆ ನೀರು ನಿಂತು ಗ್ರಂಥಾಲಯಕ್ಕೆ ಯಾರು ಸಹ ಬಾರದ ರೀತಿ ಕೆರೆಯಂತಾಗುತ್ತದೆ ಜೊತೆಗೆ ಈ ಗ್ರಂಥಾಲಯಕ್ಕೆ ಪ್ರತಿನಿತ್ಯ ಪುಟ್ಟ ಮಕ್ಕಳಿನಿಂದ ಹಿಡಿದು ಹಿರಿಯರು ಸೇರಿದಂತೆ ಆಗಮಿಸುತ್ತಾರೆ ಒಟ್ಟಾರೆ ಗ್ರಂಥಾಲಯದ ಒಳಗೆ ಡಿಜಿಟಲ್ ಗ್ರಂಥಾಲಯ ಎಂಬುದಕ್ಕೆ ಸ್ವಲ್ಪಮಟ್ಟಿಗೆ ಅಂದುಕೊಳ್ಳಬಹುದು ಆದರೆ ಗ್ರಂಥ ಪಾಲಕರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಂಥಾಲಯದ ಮುಂಭಾಗ ಆಗುವ ಅವ್ಯವಸ್ಥೆಯನ್ನು ಹೇಳಿದ್ದಾರೋ ಅಥವಾ ಹೇಳಿದ್ದರೂ ಇದಕ್ಕೆ ತಲೆಕೆಡಿಸಿಕೊಳ್ಳದೆ ಅಧಿಕಾರಿ ಮೌನವಾಗಿರುವುದೇಕೆ?
ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಗ್ರಂಥಾಲಯವನ್ನೇ ಮರೆತುಬಿಟ್ಟರಾ ಅಭಿವೃದ್ಧಿ ಅಧಿಕಾರಿ, ಇದರ ಜೊತೆಗೆ ಗ್ರಾಮ ಪಂಚಾಯಿತಿಯ ಮುಂಭಾಗ ಮತ್ತು ಪಕ್ಕದಲ್ಲಿಯೇ ನೂರಾರು ದ್ವಿಚಕ್ರ ವಾಹನಗಳು ಶಿಸ್ತುಬದ್ಧವಾಗಿ ನಿಂತಿದ್ದು ಈ ಗ್ರಾಮ ಪಂಚಾಯಿತಿ ಪಾರ್ಕಿಂಗ್ ದಂಧೆಗೆನಾದರೂ ಮುಂದಾಗಿದಿಯಾ ಎಂಬುದು ಸಾರ್ವಜನಿಕರಲ್ಲಿ ಗೊಂದಲದ ಗೂಡಾಗಿದೆ ಮೇಲ್ನೋಟಕ್ಕೆ ನೋಡುವುದಾದರೆ ಪಕ್ಕದಲ್ಲಿರುವ ಗ್ರಂಥಾಲಯದ ಮುಂಭಾಗ ಅವ್ಯವಸ್ಥೆ ಕಂಡಿದ್ದರು ಕಾಣದ ರೀತಿ ಕೈ ಚೆಲ್ಲಿ ಕುಳಿತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದ್ವಿಚಕ್ರ ವಾಹನಗಳು ಶಿಸ್ತುಬದ್ಧವಾಗಿ ನಿಂತಿರುವುದು ಕಂಡರೆ ಅವ್ಯವಸ್ಥೆಗೆ ತಲೆಕೆಡಿಸಿಕೊಳ್ಳದೆ ಪಾರ್ಕಿಂಗ್ ದಂದೆಗೆ ಮುಂದಾಗಿದ್ದಾರೆಯೆ ಎಂಬ ಯಕ್ಷಪ್ರಶ್ನೆ ಎಲ್ಲರಿಗೂ ಮೂಡತೊಡಗಿದೆ.
ಇದಕ್ಕೆ ಪೂರಕ ಒಂದೇ ಸ್ಥಳದಲ್ಲಿ ಗ್ರಂಥಾಲಯದ ಆವರಣ ಗ್ರಾಮ ಪಂಚಾಯಿತಿ ಆವರಣ ಇದ್ದು ಪಾರ್ಕಿಂಗ್ ವ್ಯವಸ್ಥೆ ಶಿಸ್ತುಬದ್ಧವಾಗಿದೆ ಆದರೆ ಗ್ರಂಥಾಲಯದ ಮುಂಭಾಗ ವ್ಯವಸ್ಥಿತವಾಗಿ ಯಾಕಿಲ್ಲ ಕಲಿಯಲು ಪುಟ್ಟ ಮಕ್ಕಳು ಹಿರಿಯರು ಸೇರಿದಂತೆ ಅನೇಕರು ಈ ಗ್ರಂಥಾಲಯಕ್ಕೆ ಆಗಮಿಸುವುದು ಅದರ ಉಪಯೋಗ ಪಡೆದುಕೊಳ್ಳುವುದರಿಂದ ಪಂಚಾಯಿತಿಗೆ ಏನಾದರೂ ಹಫ್ತಾ ಕೊಡಬೇಕಾ ಎಂಬುದೇ ಒಂದು ನಿಗೂಢ.
ಏನೇ ಆಗಲಿ ಪಂಚಾಯಿತಿಯ ಜನಪ್ರತಿನಿಧಿಗಳು ಇದರ ಬಗ್ಗೆ ಕಿಂಚಿತ್ತಾದರೂ ಗಮನಹರಿಸಿ ಪಂಚಾಯಿತಿಯ ಮುಂಭಾಗ, ಪಂಚಾಯಿತಿಯ ಪಕ್ಕದಲ್ಲಿ ಗ್ರಂಥಾಲಯದ ಮುಂಭಾಗ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಅಭಿವೃದ್ಧಿ ಅಧಿಕಾರಿಗೆ ಮನದಟ್ಟು ಮಾಡಲಿ. ಪಂಚಾಯಿತಿಯ ಮುಂಭಾಗನೇ ಈ ರೀತಿ ಆದರೆ ಈ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಮೂಲಭೂತ ಸೌಕರ್ಯಗಳ ಗತಿಯೇನು, ಇಂತಹ ಅಭಿವೃದ್ಧಿಗಳಿಗೆ ಜಿಲ್ಲಾ ಪಂಚಾಯಿತಿ ಸಿ ಇ ಓ, ಅಥವಾ ಪಂಚಾಯತ್ ರಾಜ್ ಮಂತ್ರಿಗಳೇ ಬರಬೇಕೇ ಎಂಬುದೇ ಒಂದು ರೀತಿ ಗೋಜಲುಮಯವಾಗಿದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.