Turuvekere: ನಾಗರೀಕನಿಗೆ ಆಯ್ಕೆ ಎಂಬುದೇ ವಿರೋಧವಾಯ್ತೆ.? 

Janataa24 NEWS DESK 

 

Turuvekere: ನಾಗರೀಕನಿಗೆ ಆಯ್ಕೆ ಎಂಬುದೇ ವಿರೋಧವಾಯ್ತೆ.?
Tueuvekere: ನಾಗರೀಕನಿಗೆ ಆಯ್ಕೆ ಎಂಬುದೇ ವಿರೋಧವಾಯ್ತೆ.? 
ತುರುವೇಕೆರೆ: ರಾಜ್ಯಾದ್ಯಂತ ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಗರ ಪಟ್ಟಣ ಗ್ರಾಮಾಂತರ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ದೊರಕಬೇಕಾದ ಮೂಲಭೂತ ಸೌಕರ್ಯ ದೊರೆಯುತ್ತಿದೆಯೇ ಅಥವಾ ಮರೀಚಿಕೆಯಾಗಿದೆಯೇ ಒಂದು ರೀತಿ ಮರೀಚಿಕೆ ಅಂದುಕೊಳ್ಳಬಹುದು.

ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಾಂತರ ಭಾಗದಲ್ಲಿ ಅದೆಷ್ಟೋ ಬಡ ರೈತ ಕುಟುಂಬಗಳು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿವೆ ಇಂಥ ನಾಗರಿಕರಿಗೆ ಎಷ್ಟರಮಟ್ಟಿಗೆ ಮೂಲಭೂತದ ಸೌಕರ್ಯದ ಸವಲತ್ತುಗಳು ಸರಿಯಾಗಿ ಸಿಗದಂತಾಗಿ ಸುಮ್ಮನೆ ಮೇಲ್ನೋಟಕ್ಕೆ ಜೀವನ ನಡೆಸುವಂತಾಗಿದೆ.

 

ಕೂಲಿಕಾರನು ತನ್ನ ಕೂಲಿಯಿಂದ ಜೀವಿಸಲು ಕಷ್ಟಪಡುತ್ತಿದ್ದು ಕೆಲವು ಸಂದರ್ಭದಲ್ಲಿ ಕೂಲಿಕಾರನಿಗೆ ಸಿಗುವ ಬಿಡಿಗಾಸಿನ ಹಣವು ತನ್ನ ಕುಟುಂಬವನ್ನು ಸಾಕಲು ಮುಖ್ಯವಾಗಿರುತ್ತದೆ.

 

ಆದರೆ ಈಗಿನ ಆರ್ಥಿಕ ಸ್ಥಿತಿಯಂತೂ ಆರ್ಥಿಕವಾಗಿ ಸದೃಢವಾಗಿರುವವರ ಪಾಲಾಗಿರುವುದು ಸತ್ಯವೇ ಸರಿ.! ಪ್ರತಿಯೊಂದು ಸಮಯದಲ್ಲಿ ಬಡ ರೈತ ಕುಟುಂಬಗಳು ಸಾಧಾರಣವಾಗಿ ಬದುಕು ಕಟ್ಟಿಕೊಳ್ಳಲು ಸಹ ಹರಸಾಹಸ ಪಡುತ್ತಿರುವುದಂತೂ ಸತ್ಯವಾಗಿದೆ.

 

 

ದಿನನಿತ್ಯ ಬಳಸುವ ಆಹಾರಗಳ ಬೆಲೆಯಂತೂ ಗಗನಕ್ಕೆ ಜಿಗಿದಿದೆ ದಿನಕ್ಕೆ ಒಬ್ಬ ಕೂಲಿ ಮಾಡುವ ವ್ಯಕ್ತಿ 500 ದುಡಿದರೆ ಅದರಲ್ಲಿ ಜೀವನ ನಡೆಸಲು ಬೆಲೆ ಕಟ್ಟಲಾಗದ ಮನಸ್ಸಿನಿಂದ ತನ್ನ ಕುಟುಂಬವನ್ನು ಏನು ಸರಿಸುಮಾರು ಬದುಕಬೇಕಲ್ಲವೇ ಎಂಬ ದೃಢ ಮನಸ್ಸಿನಿಂದ ಜೀವನ ಸಾಗಿಸುತ್ತಿದ್ದಾನೆ.

ಅದರಲ್ಲೂ ಗ್ರಾಮಾಂತರ ಭಾಗಗಳಲ್ಲಿ ದಿನನಿತ್ಯ ತನ್ನ ದುಡಿಮೆಯ ಹಣದಲ್ಲಿ ಸ್ವಲ್ಪವಾದರೂ ಉಳಿಸಲು ಹೋದರೆ ಕೆಟ್ಟ ಅನೇಕ ದುಶ್ಚಟ ಸಹವಾಸಕ್ಕೆ ಬಿದ್ದು ಕೂಲಿ ಮಾಡಿದ ಹಣವನ್ನು ತನ್ನ ಚಟಕ್ಕೆ ಬಳಸಿಕೊಂಡು ಅದರ ಅಭ್ಯಾಸದಿಂದ ಅವರ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತೆ ಆಗಿದೆ, ಜೊತೆಗೆ ಆರೋಗ್ಯದ ವಿಚಾರಕ್ಕೆ ಬಂದರೆ ತನ್ನ ಕುಟುಂಬದ ಸದಸ್ಯರಿಗಾಗಲಿ ಆತನಿಗಾಗಲಿ ಆರೋಗ್ಯ ಸಮಸ್ಯೆ ಬಂದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲದ ರೀತಿ ಬದುಕಬೇಕಾಗುತ್ತದೆ ಅದರಲ್ಲೂ ಈಗಿನ ಚಿಕಿತ್ಸೆಗಳಂತೂ ಬಹಳ ದುಬಾರಿಯಾಗಿವೆ ಕೇವಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋಣವೆಂದರೆ ಈಗ ಬರುವ ಕಾಯಿಲೆಗಳಿಗೆ ಅದೆಷ್ಟೋ ಸರ್ಕಾರಿ ಆಸ್ಪತ್ರೆಯಲ್ಲಿ ದೊಡ್ಡ ದೊಡ್ಡ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಲಭಿಸದೆ ತನ್ನಲ್ಲಿರುವ ಅಲ್ಪಸ್ವಲ್ಪ ಜಾಗವನ್ನು ಮಾರಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳನ್ನು ಸಹ ನೋಡುವವರಿದ್ದಾರೆ ,ಇಷ್ಟೆಲ್ಲಾ ಕಷ್ಟಗಳ ನಡುವೆ ಬದುಕುತ್ತಿರುವ ಮನುಷ್ಯ ಜೀವಿ ಯಾವ ಯಾವ ಸೌಕರ್ಯಗಳು ಮನುಷ್ಯನಿಗೆ ವೇಗವಾಗಿ ಬದುಕಲು ಉಪಯುಕ್ತವಾಗಿವೆ ಎಂಬುದು ಸಹ ಪ್ರಶ್ನೆಯಾಗಿದೆ?

 

ಇದ್ದರೂ ಸಹ ಸರಿಯಾದ ಸಮಯಕ್ಕೆ ಸಿಗುತ್ತವೆಯೇ, ಇದಲ್ಲದೆ ಒಂದು ದೇಶ, ರಾಜ್ಯ, ಜಿಲ್ಲೆ ,ತಾಲೂಕು, ಹೋಬಳಿ, ಪಂಚಾಯಿತಿ, ಒಟ್ಟಾರೆ ಕಟ್ಟಕಡೆಯ ಗ್ರಾಮದಲ್ಲಿ ವಾಸ ಮಾಡುವ ನಾಗರಿಕರಿಗೂ ಯಾವುದೇ ಅಡೆತಡೆ ಇಲ್ಲದೆ ದೊರಕಬೇಕಾದ ಮೂಲಭೂತ ಸೌಕರ್ಯಗಳಾಗಲಿ ಗ್ರಾಮಾಂತರ ಭಾಗದಲ್ಲಿ ದುಡಿಯುತ್ತಿರುವವರ ಪಾಲಿಗೆ ಆರ್ಥಿಕತೆಯಾಗಲಿ ಎಷ್ಟರಮಟ್ಟಿಗೆ ಸಿಗುತ್ತದೆ ಎನ್ನುವುದು ಸಹ ಒಂದು ಗೋಜಲು, ಆಕಸ್ಮಾತ್ ಅಲ್ಪಸ್ವಲ್ಪ ಸೌಕರ್ಯ ಅಥವಾ ಆರ್ಥಿಕತೆಯ ಸ್ಥಾನಮಾನ ಎಲ್ಲರಿಗೂ ಕೈಗೆಟಿಕುವ ರೀತಿಯಲ್ಲಿ ಸಿಕ್ಕರೆ ಅದಕ್ಕೂ ಸಹ ಯಾವುದಾದರೂ ರೂಪದಲ್ಲಿ ಕಷ್ಟ ಕಾರ್ಪಣ್ಯಗಳು ಬಂದು ಅಡೆ ತಡೆಗಳು ಬಂದು “ಸಿಕ್ಕಿದ್ ಅಷ್ಟೇ ಸೀರುಂಡೆ” ಎನ್ನುವ ರೀತಿ ಜೀವನವನ್ನು ಸಾಗಿಸಬೇಕಾಗುತ್ತದೆ ಒಮ್ಮೆ ಯೋಚಿಸುತ್ತಾ ಹೋದರೆ ಯಾವುದೇ ಸೌಕರ್ಯವಾಗಲಿ ಆರ್ಥಿಕತೆಗೆ ಸಂಬಂಧಿಸಿದಂತಾಗಲಿ ಕೇವಲ ತನ್ನ ಸ್ವಾರ್ಥಕ್ಕಾಗಿ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದು ಉಳ್ಳವರ ಪಾಲಾಗುತ್ತದೆ ಎಂದುಕೊಳ್ಳಬಹುದು.

 

ಜನರಿಂದ ಜನರಿಗೋಸ್ಕರ ಅನೇಕ ಚುನಾವಣೆಗಳನ್ನು ಎದುರಿಸಿ ಜನಪ್ರತಿನಿಧಿಗಳಾಗಿ ಹೊರಹೊಮ್ಮಿದ ಪ್ರತಿಯೊಬ್ಬ ಪ್ರಜೆಯು ಇದರ ಬಗ್ಗೆ ಗಮನ ಕೊಡುತ್ತಾರ?

ಅಥವಾ ಅವರಿಗೂ ಸಹ ಮೇಲ್ಕಂಡಂತೆ ಎಲ್ಲಾ ಮೂಲಭೂತ, ಆರ್ಥಿಕತೆಯಾಗಲಿ ಎದುರಿಸುವಂತಹ ಸಂದರ್ಭವೂ ಇದೆಯೇ? ಇದರೆಲ್ಲದರ ನಡುವೆ ಮನುಷ್ಯ ಎಂಬ ಈ ಜೀವರಾಶಿಗಳು ತಮ್ಮ ಪಾಲಿಗೆ ಎಷ್ಟು ಸಿಗುತ್ತದೆಯೋ ಅಷ್ಟಕ್ಕೇ ತೃಪ್ತಿ ಪಡಬೇಕಾ ಅಥವಾ ರಾಜಕೀಯ ಎಂಬುದು ಮನುಷ್ಯನ ಚಾರಿತ್ರೆಯನ್ನೇ ಬದಲಿಸುತ್ತಾ ಇವೆಲ್ಲವಕ್ಕೂ ಎಂದಾದರೂ ಕೊನೆ ಇದೆಯೇ ಅಥವಾ ಈಗಿನಿಂದಲೇ ಪ್ರಾರಂಭವೇ, ಒಟ್ಟಾರೆ ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಬದಲಾವಣೆಗಳಿಂದ ನಾಗರೀಕರ ಬುಡವೇ ಅಲುಗಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ.

 

 

 

ವರದಿ:   ಮಂಜುನಾಥ್   ತುರುವೇಕೆರೆ.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *