Janataa24 NEWS DESK
Turuvekere: ದೇಶಾಭಿಮಾನಿಗಳಾಗಿ ಸತ್ ಪ್ರಜೆಗಳಾಗಬೇಕು, ಪ್ರಾಚಾರ್ಯರಾದ ಎಸ್ಎಂ ಕಾಂತರಾಜು ಬಣ್ಣನೆ.

ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಾಂಶುಪಾಲರಾದ ಎಸ್ಎಂ ಕಾಂತರಾಜು ಧ್ವಜಾರೋಹಣ ಮಾಡಿ ,ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೆ ವೇಳೆ ಮಾತನಾಡಿದ ಪ್ರಾಂಶುಪಾಲ ಕಾಂತರಾಜು ಅವರು ತ್ರಿವರ್ಣ ಧ್ವಜ ನಮ್ಮ ದೇಶದ ಹೆಮ್ಮೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅನೇಕರು ತ್ಯಾಗ, ಬಲಿದಾನವನ್ನು ಮಹಾನ್ ನಾಯಕರು ಮಾಡಿದ್ದಾರೆ ,ಬ್ರಿಟಿಷರ ಸರ್ವಾಧಿಕಾರ ಧೋರಣೆ ವಿರುದ್ಧ ನಮ್ಮ ದೇಶದ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ.
ಜೊತೆಗೆ ಗೋಪಾಲಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ, ಬಿಪಿನ್ ಚಂದ್ರ ಪಾಲ್, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧೀಜಿ ಹೀಗೆ ಅನೇಕ ನಾಯಕರು, ಅಸಹಕಾರ ಚಳುವಳಿ, ಅಹಿಂಸಾ ಚಳುವಳಿ, ದಂಡಿನ ಸತ್ಯಾಗ್ರಹ, ದುಂಡು ಮೇಜಿನ ಪರಿಷತ್, ಮುಂತಾದ ಚಳುವಳಿಗಳ ಮೂಲಕ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಇದೆ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಎಂ ಎನ್ ಮಹಾದೇವ, ಗ್ರಂಥ ಪಾಲಕಿ ವಿಮಲಾ, ಹಾಗೂ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.