JANATAA24 NEWS DESK
Turuvekere: ಗ್ಯಾಸ್ ಸಿಲಿಂಡರ್ ದಿನಸಿ ಪದಾರ್ಥಗಳ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ.

ತುರುವೇಕೆರೆ: ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿಯ ಅಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆ ಅಕ್ಷರ ದಾಸೋಹ ಕೊಠಡಿಯ ಬೀಗ ಮುರಿದು ಎರಡು ಗ್ಯಾಸ್ ಸಿಲಿಂಡರ್ ಹಾಗೂ ಇತರೆ ಬಿಸಿಊಟ ದಿನಸಿ ಪದಾರ್ಥಗಳನ್ನು ಕಳ್ಳತನ ಆಗಿರುವ ಕುರಿತು ಜನವರಿ 5ನೇ 2026 ರಂದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗೋಪಾಲ್ ಮತ್ತು ಪುರುಷೋತ್ತಮ್ ರವರ ನೇತೃತ್ವದಲ್ಲಿ ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಓಂ ಪ್ರಕಾಶ್ ರವರ ಮಾರ್ಗಸೂಚಿಯಂತೆ ತಂಡ ರಚನೆ ಮಾಡಿ ಕೊನೆಗೂ ಕಳ್ಳರನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್, ಪಿಎಸ್ಐ ಮೂರ್ತಿ ಟಿ, ಹಾಗೂ ಸಿಬ್ಬಂದಿಗಳಾದ ರಾಜಕುಮಾರ್ ವಗ್ಗೆರಿ, ನವೀನ್ ಕುಮಾರ್, ಒಳಗೊಂಡಂತೆ ಅಪರಾಧ ಪತ್ತೆ ತಂಡದಿಂದ ಕಳ್ಳರನ್ನು ಬಂಧಿಸಲಾಗಿದೆ, ಕಳ್ಳತನ ವ್ಯಸಗಿದ ಆಸಾಮಿಗಳಾದ ಗಂಗಾಧರ್ ಬಿನ್ ಪುಟ್ಟರಾಜು, ಅಫ್ಜಲ್ ಪಾಷಾ ಬಿನ್ ಸಲಿಂ ಪಾಷ, ಶಮಿಲ್ ಪಾಶಾ ಬಿನ್ ಅಬ್ದುಲ್ ರೆಹಮಾನ್ ಎಂಬ ಮೂವರು ಕಳ್ಳರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ, ಇನ್ನು ಕಳ್ಳರನ್ನು ಬಂಧಿಸಿ ಮಾಲನ್ನು ವಶ ಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಪತ್ತೆ ತಂಡವನ್ನು ಪೊಲೀಸ್ ಅಧೀಕ್ಷಕರಾದ ಕೆ ವಿ ಅಶೋಕ್ ಪ್ರಶಂಶಿಸಿದ್ದಾರೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.