Janataa24 NEWS DESK
Turuvekere: ಗೊಂದಲಕ್ಕೀಡಾದ ಮಾಯಸಂದ್ರ ಸರ್ಕಾರಿ ಬಸ್ ನಿಲುಗಡೆ–ಪ್ರಯಾಣಿಕರ ಪರದಾಟ.
ತುರುವೇಕೆರೆ: ಮಾಯಸಂದ್ರ ಗ್ರಾಮದಲ್ಲಿ ಕಳೆದೆರಡು ತಿಂಗಳುಗಳಿಂದ “ಸರ್ಕಾರಿ ಬಸ್ ನಿಲುಗಡೆ ಗೊಂದಲದ ಗೂಡಾಗಿದೆ”, ಪ್ರಯಾಣಿಕರ ಪರದಾಟ ಹೇಳತೀರದಾಗಿದೆ ಎಂದು ಗ್ರಾಮಸ್ಥರಾದ ಹೆಚ್.ರವಿ ಹೇಳಿದರು.
ರವಿ ಮಾಯಸಂದ್ರ.
KSRTC ಬಸ್ ನಿಲುಗಡೆಯ ಸಂಬಂಧ ಮಾತನಾಡಿದ ಮಾಯಸಂದ್ರ ಗ್ರಾಮಸ್ಥ ರವಿ ಅವರು ಹಲವಾರು ವರ್ಷಗಳಿಂದ ಮಾಯಸಂದ್ರ ಗ್ರಾಮದ “ಸರ್ಕಾರಿ ಬಸ್ ನಿಲುಗಡೆಯು” ಯಾವುದೇ ಅಡಚಣೆಗಳಿಲ್ಲದಂತೆ ಸಾಗುತ್ತಿತ್ತು, ಆದರೆ ಈಗ ಕಳೆದೆರಡು ತಿಂಗಳುಗಳಿಂದ ಬೆಂಗಳೂರಿನಿಂದ ಬಂದಂತಹ ತುರುವೇಕೆರೆ ಮಾರ್ಗಕ್ಕೆ ಚಲಿಸುವ “ಸರ್ಕಾರಿ ಬಸ್ ನಿಲುಗಡೆ” ಎಲ್ಲಿ ಎಂಬುದು ದೊಡ್ಡ ಪ್ರಶ್ನೆಯಾಗಿದೆ? ಗೊಂದಲಕ್ಕೆ ಕಾರಣವಾಗಿದೆ ಎಂದರು.
ಮುಂಜಾನೆಯಿಂದ- ಮುಸ್ಸಂಜೆಯವರೆಗೂ, ನೂರಾರು ಮಂದಿ ವಿದ್ಯಾರ್ಥಿಗಳು, ವಯಸ್ಸಾದ ಹಿರಿಯ ನಾಗರಿಕರು, ಸರ್ಕಾರಿ ನೌಕರರು, ಮಹಿಳೆಯರು, ತುರುವೇಕೆರೆ ಪ್ರಯಾಣಕ್ಕೆ ಅವಲಂಬಿತರಾಗಿದ್ದಾರೆ. ಇತ್ತ ಮೈಸೂರಿನಿಂದ ಬಂದಂತಹ ತಿಪಟೂರು, ರಾಯಚೂರು, ಶಿವಮೊಗ್ಗ. ಮಾರ್ಗಕ್ಕೆ ಚಲಿಸುವ ಎಲ್ಲಾ ಸರ್ಕಾರಿ ಬಸ್ಸುಗಳು ಗ್ರಾಮ ಪಂಚಾಯಿತಿಯ ಮುಂಭಾಗ ನಿಲ್ಲಿಸುತ್ತಿದ್ದಾರೆ. ಆದರೆ ಬೆಂಗಳೂರಿನಿಂದ ಬಂದಂತಹ ಕೆಲ ಸರ್ಕಾರಿ ಬಸ್ ಗಳು ಸನ್ಮಾನ ಹೋಟೆಲ್ ಮುಂಭಾಗ, ಬಸ್ ಸ್ಟ್ಯಾಂಡ್ ತಿರುವಿನಲ್ಲಿ, ಪಂಚಾಯತ್ ಮುಂಭಾಗ, ಹೀಗೆ ನಿರ್ದಿಷ್ಟವಾದ ನಿಲುಗಡೆ ಇಲ್ಲದಂತೆ ಚಲಿಸುತ್ತಿರುವುದು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಸದ್ಯ ಪ್ರಯಾಣಿಕರು ಬಸ್ಸಿಗಾಗಿ ಎಲ್ಲಿ ನಿಂತು ಕಾಯಬೇಕೆಂಬುದು ಯಕ್ಷಪ್ರಶ್ನೆಯಾಗಿದೆ?
ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗುತ್ತಿರುವ ಕಾರಣ ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಚಾರವು ದಟ್ಟಣೆಯಿಂದ ಕೂಡಿದೆ, ಇತ್ತ ಹಿರಿಯ ಜೀವಗಳು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಎಲ್ಲೆಂದರಲ್ಲಿ ನಿಲ್ಲಿಸುವ ಬಸ್ ಗಳಿಗಾಗಿ, ರಸ್ತೆಗಳಲ್ಲಿ ಹಿಂದೆ -ಮುಂದೆ ನೋಡದೆ ಬಸ್ ಹತ್ತಲು ಓಡೋಡಿ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಏನಾದರೂ ಅಪಘಾತಗಳಂತಹ ಅಹಿತಕರದಂತಹ ಘಟನೆಗಳು ನಡೆದರೆ ಯಾರು ಹೊಣೆ? ಜೀವಗಳ ಜೊತೆ ಚೆಲ್ಲಾಟದ ಆಡುತ್ತಿರುವ, ಸಾರಿಗೆ ಸಂಸ್ಥೆಯು ನಿರ್ದಿಷ್ಟವಾದ ನಿಲುಗಡೆ ಜಾಗವನ್ನು ನಿಖರವಾಗಿ ಪ್ರಯಾಣಿಕರಿಗೆ ತಿಳಿಸಬೇಕು. ಎಲ್ಲೆಂದರಲ್ಲಿ ಬಸ್ ನಿಲುಗಡೆಯನ್ನು ತಪ್ಪಿಸಬೇಕು ಪ್ರಯಾಣಿಕರಿಗೆ ತೊಂದರೆ ನೀಡಬೇಡಿ ಎಂದ ಅವರು,
ತುರ್ತಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಆಡಳಿತವು, ಸರ್ಕಾರಿ ಬಸ್ ನಿಲುಗಡೆ ಮಾರ್ಗಕ್ಕೆ ಸೂಚನಾ ಫಲಕವನ್ನು ಅಳವಡಿಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಗ್ರಾಮದ ಪ್ರಜ್ಞಾವಂತ ನಾಗರೀಕರು ಮಾತನಾಡಿಕೊಳ್ಳುತ್ತಿರುವುದಾಗಿ, ಸಾರಿಗೆ ಸಂಸ್ಥೆಗೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.