Janataa24 NEWS DESK
Turuvekere: ಜಾತಿ ನಮೀಕ್ಷೆಯಲ್ಲಿ ಅಧಿಕಾರಿಗಳಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ–ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ತಹಸಿಲ್ದಾರ್ ಗೆ ಮನವಿ.
ತುರುವೇಕೆರೆ: ತಾಲೂಕಿನಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು ಜಾತಿ ಕಾಲಂ ನಲ್ಲಿ ತಪ್ಪಾಗಿ ಸ್ವಯಂ ಪ್ರೇರಿತವಾಗಿ ಸಿಬ್ಬಂದಿಗಳು ಆದಿ ಕರ್ನಾಟಕ ಎಂದು ನಮೂದು ಮಾಡುತ್ತಿರುವುದು ಕಂಡುಬಂದಿದ್ದು ತಾಲೂಕಿನ ಗ್ರಾಮಗಳಾದ ಸೂಳೆಕೆರೆ, ಎ ಹೊಸಳ್ಳಿ, ಚೌಡೇನಹಳ್ಳಿ, ನಾಯಕನ ಘಟ್ಟ, ಮಲ್ಲಘಟ್ಟ, ಸಂಪಿಗೆ, ಇನ್ನು ಹಲವು ಗ್ರಾಮಗಳಲ್ಲಿ ಸೇರಿದಂತೆ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗಳು ಮಾದಿಗ(Madiga) ಎಂಬುದನ್ನು ಬಿಟ್ಟು ಆದಿ ಕರ್ನಾಟಕ ಎಂದು ನಮೂದು ಮಾಡುತ್ತಿದ್ದಾರೆ.
ಸದರಿ ಗ್ರಾಮಗಳಲ್ಲಿ ಮಾದಿಗ ಸಮುದಾಯದ ಜನಾಂಗದವರಿದ್ದು ಸಮೀಕ್ಷೆ ಸಿಬ್ಬಂದಿಗಳು ತಪ್ಪಾಗಿ ನಮೂದಿಸುತ್ತಿದ್ದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಹಾಗಾಗಿ ತಾಲೂಕಿನ ದಂಡಾಧಿಕಾರಿಯವರು ಇದನ್ನು ಪರಿಶೀಲಿಸಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮರು ಸಮೀಕ್ಷೆ ಕೈಗೊಳ್ಳಬೇಕು ಎಂದು ಆದೇಶಿಸಬೇಕು ಎಂದು ಪ್ರೊ. ಬಿ ಕೃಷ್ಣಪ್ಪ(prof.B Ktishnappa)ಸ್ಥಾಪಿತ 47 /74 /75 ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್ ರವರ ನೇತೃತ್ವದಲ್ಲಿ ತುರುವೇಕೆರೆ ತಾಲೂಕು ದಲಿತ ಸಂಘರ್ಷ ಸಮಿತಿ ತುರುವೇಕೆರೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.