Janataa24 NEWS DESK
Turuvekere: ಜಾತಿ ನಿಂದನೆ ಪ್ರಕರಣ; DSS ಬಣಗಳ ನಡುವೆ ಕೋಲ್ಡ್ ವಾರ್.
ತುರುವೇಕೆರೆ: ಪಟ್ಟಣ ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವ ಕುಮಾರ್ ನೇತೃತ್ವದಲ್ಲಿ ಪತ್ರಿಕಾ ಮಾಧ್ಯಮ ಗೋಷ್ಠಿ ನಡೆಸಲಾಯಿತು.
ಇದೆ ವೇಳೆ ದಂಡಿನ ಶಿವರ ಕುಮಾರ್ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಂಜುಳಾ ಎಂಬುವರು
ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸಂಘದ ಸಂಘಟಿಕರ ಮತ್ತು ಕೆಲ ಮಹಿಳೆಯರ ವಿರುದ್ಧ ಜಾತಿನಿಂದನೇ ಪ್ರಕರಣವನ್ನು ದಾಖಲು ಮಾಡಿದ್ದು ಈ ಪ್ರಕರಣವನ್ನು, ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ, ಯಾವುದೇ ಕಾರಣಕ್ಕೂ ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಿಂದುಳಿದವರಿಂದ ಹಿಡಿದು ಎಲ್ಲಾ ಸಮುದಾಯದವರಿಗೂ ಸಾಲ ನೀಡಿ ಬಹಳ ಉಪಯೋಗವಾಗಿದೆ
ಯಾವುದೇ ಕಾರಣಕ್ಕೂ ಈ ಸಂಘದ ಸಂಘಟಿಕರು ಯಾವುದೇ ಜಾತಿ ನಿಂದನೆ ಮಾಡಿಲ್ಲ, ಆದರೆ ದೂರುದಾರರೊಂದಿಗೆ ಬಂದಿದ್ದ ಕೆಲ ಡಿಎಸ್ಎಸ್ ಸಂಘಟನೆ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಂಜುಳಾ ಎಂಬುವರಿಗೆ ಹೇಳಿಕೊಟ್ಟು ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ
ಇಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ನಾವೇ ದೊಡ್ಡ ಪ್ರತಿಭಟನೆ ಮಾಡುತ್ತೇವೆ ಇದಲ್ಲದೆ ಕೆಲವರು ಬೇರೆ ಬೇರೆ ತಾಲೂಕಿನಿಂದ ಬಂದು ನಮ್ಮ ತಾಲೂಕಿನಲ್ಲಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ ನಮ್ಮ ತಾಲೂಕಿನಲ್ಲಿ ಹಲವು ವರ್ಷಗಳಿಂದಲೂ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಸುಮ್ಮನೆ ಇವರ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಸಂಘಟನೆಯ ಹೆಸರು ಹೇಳಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ತಿಮ್ಮೇಶ್, ಗುರುದತ್, ಹೆಗ್ಗೆರೆ ರಾಮು, ಬೋರಪ್ಪ, ಮುನಿಯೂರು ರಂಗಸ್ವಾಮಿ, ಅಲ್ಪಸಂಖ್ಯಾತ ತಾಲೂಕು ಅಧ್ಯಕ್ಷರಾದ ಅಬ್ಜಲ್, ಹೊನ್ನೇನಹಳ್ಳಿ ಕೃಷ್ಣಪ್ಪ, ಇನ್ನು ಅನೇಕ ದಲಿತ ಮುಖಂಡರು ವಿವಿಧ ಸಮುದಾಯದ ಮುಖಂಡರು, ಧರ್ಮಸ್ಥಳ ಸಂಘದಿಂದ ಸಾಲ ಪಡೆದ ಮಹಿಳೆಯರು, ಇನ್ನು ಅನೇಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.