Janataa24 NEWS DESK
Turuvekere: ಕೋರಂ ಇಲ್ಲದೆ ರದ್ದಾದ ಗ್ರಾಮ ಸಭೆ, 30-09-2024 ಕ್ಕೆ ನಿಗದಿ, ನೋಡಲ್ ಅಧಿಕಾರಿ ಸ್ಪಷ್ಟನೆ.


ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಇಂದು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನ ಗ್ರಾಮ ಸಭೆಯನ್ನು ಹೊಣಕೆರೆ ಗೊಲ್ಲರಹಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು, ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ನೊಡಲ್ ಅಧಿಕಾರಿ ಈ ಸಭೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೆ ಇದ್ದ ಕಾರಣ ಕೋರಂ ಕಡಿಮೆ ಇದೆ ಎಂದು ಗ್ರಾಮ ಸಭೆಯನ್ನು ರದ್ದು ಮಾಡಿ ಸೆಪ್ಟಂಬರ್ 30ನೇ ತಾರೀಕಿಗೆ ನಿಗದಿಪಡಿಸಿ ಸ್ಪಷ್ಟನೆ ನೀಡಿದರು. ಇದೇ ವೇಳೆ ಬೆರಳೆಣಿಕೆಯಷ್ಟೇ ಸಾರ್ವಜನಿಕರು ಆಗಮಿಸಿದ್ದು ಕೆಲ ಸಮಯ ಅಧಿಕಾರಿಗಳಿಗೂ ಗ್ರಾಮಸ್ಥರುಗಳಿಗೂ ವಾದ ವಿವಾದಗಳು ಉಂಟಾಗಿ ಗ್ರಾಮಸ್ಥರುಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡರು, ಇದೆ ವೇಳೆ ನೋಡಲ್ ಅಧಿಕಾರಿ ಮಾತನಾಡಿ ಕೋರಂ ಕಡಿಮೆ ಇರುವ ಕಾರಣ ಈ ಗ್ರಾಮ ಸಭೆ ರದ್ದು ಮಾಡಲಾಗಿದೆ ಇಲ್ಲಿ ಯಾವುದೇ ಚರ್ಚೆಗಳನ್ನು ಮಾಡಲು ಸಾಧ್ಯವಿಲ್ಲ ಮುಂದಿನ ಗ್ರಾಮ ಸಭೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿ ಅಲ್ಲಿಂದ ತೆರಳಿದರು,
ಒಟ್ಟಾರೆ ಇಂದು ಗ್ರಾಮ ಸಭೆ ಅಂತೂ ರದ್ದಾಗಿದ್ದು, ದಿನಾಂಕವು ಸಹ ನಿಗದಿಯಾಗಿ ಯಾವ ಗ್ರಾಮದಲ್ಲಿ ನಡೆಯಬೇಕೆಂಬುದು ಗ್ರಾಮ ಪಂಚಾಯಿತಿಯಲ್ಲಿ ಸರ್ವ ಸದಸ್ಯರ ಸಭೆ ನಡೆದ ಬಳಿಕವೇ ಗ್ರಾಮ ಸಭೆ ನಡೆಯುವ ಸ್ಥಳ ಗುರುತಿಸಲಾಗುವುದು ಎಂದು ತಿಳಿದುಬಂದಿದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.