Turuvekere: ಬಸ್ ನಿಲ್ದಾಣವಿಲ್ಲದೆ ಬಿಸಿಲಿನ ಬೇಗೆಯಲ್ಲಿ ಮಹಿಳೆಯರ ಪರದಾಟ, ಕಣ್ಮುಚ್ಚಿ ಕುಳಿತ ಸಂಬಂಧ ಪಟ್ಟ ಇಲಾಖೆ.

Janataa24 NEWS DESK 

 

Turuvekere: ಬಸ್ ನಿಲ್ದಾಣವಿಲ್ಲದೆ ಬಿಸಿಲಿನ ಬೇಗೆಯಲ್ಲಿ ಮಹಿಳೆಯರ ಪರದಾಟ, ಕಣ್ಮುಚ್ಚಿ ಕುಳಿತ ಸಂಬಂಧ ಪಟ್ಟ ಇಲಾಖೆ.


ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಸರ್ಕಲ್ ನಲ್ಲಿ ನಾಲ್ಕು ಭಾಗದಲ್ಲೂ ಯಾವುದೇ ಬಸ್ ನಿಲ್ದಾಣವಿಲ್ಲದೆ ಮಹಿಳೆಯರು ಮಕ್ಕಳು ಈ ಉರಿಬಿಸಿಲಿನ ಬೇಗೆಯಲ್ಲಿ ಪರಿತಪಿಸುವಂತಾಗಿದೆ, ಈ ಸರ್ಕಲ್ಲು ಶಿವಮೊಗ್ಗ ,ಕಲ್ಬುರ್ಗಿ, ಬೆಂಗಳೂರು, ಮೈಸೂರು, ತುಮಕೂರು ಅಂತಹ ಜಿಲ್ಲೆಗಳಿಗೆ ಮಾರ್ಗ ಕಲ್ಪಿಸುವ 51ಎ ಹೆದ್ದಾರಿ ಇದಾಗಿದ್ದು, ಅದೆಷ್ಟೋ ವರ್ಷಗಳಿಂದಲೂ ಸರಿಯಾದ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಪಲಿತಪಿಸುವಂತೆ ಆಗಿದ್ದು, ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಸಾರ್ವಜನಿಕರು ವಿವಿಧ ಊರುಗಳಿಗೆ ತೆರಳಲು ಪ್ರಮುಖವಾದ ಹೆದ್ದಾರಿಯಾಗಿದ್ದು, ಅದೆಷ್ಟೋ ಬಾರಿಗೆ ತುರುವೇಕೆರೆ ಪಟ್ಟಣಕ್ಕೆ ಎಲ್ಲಾ ಇಲಾಖೆಯ ಸರ್ಕಾರದ ಮಂತ್ರಿಗಳು, ಶಾಸಕರು,ಸಹ ಸಂಚರಿಸಿದ್ದಾರೆ ಆದರೆ ಇಲ್ಲಿಯವರೆಗೂ ಅಭಿವೃದ್ಧಿಯ ಮಂತ್ರ ಪಠಿಸುವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಬಿಸಿಲಿನಲ್ಲಿ ಮಳೆಯಲ್ಲಿ ತಂಗು ದಾಣವಿಲ್ಲದೆ ಮಕ್ಕಳು, ಮಹಿಳೆಯರು, ಅಂಗವಿಕಲರು, ರೈತಾಪಿ ವರ್ಗದವರು ವಿವಿಧ ಊರುಗಳಿಗೆ ತೆರಳಲು ಪರಿಸಪಿಸುವಂತಹ ಪರಿಸ್ಥಿತಿಯಂತೂ ನಿರ್ಮಾಣವಾಗಿದೆ ಆದರೂ ಯಾವೊಬ್ಬ ಅಧಿಕಾರಿಗೆ ಜನಪ್ರತಿನಿಧಿಗಳಿಗೆ ಕಣ್ಣಿಗೆ ಬಿದ್ದಿಲ್ಲ, ಮಾತು ಬಾರದ ಪುಟ್ಟ ಮಕ್ಕಳು ಸಹ ಈ ರಸ್ತೆ ನೋಡಿದರೆ ಕಣ್ಣಿಗೂ ಕಾಣುತ್ತದೆ, ಆದರೆ ಯಾವುದೇ ಮಂತ್ರಿಗಳಿಗಾಗಲಿ ಯಾವುದೇ ಅಧಿಕಾರಿಗಳಿಗಾಗಲಿ, ಒಟ್ಟಾರೆ ಯಾವುದೇ ಜನ ಪ್ರತಿನಿಧಿಗಳಿಗಾಗಲಿ ಕಂಡರು ಕಾಣದ ರೀತಿಯಲ್ಲಿ ಸಂಚರಿಸುತ್ತಿದ್ದಾರೆಯೇ ಎಂಬ ಯಕ್ಷಪ್ರಶ್ನೆ ಸಹ ಕಾಡುತ್ತಿದೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸುವ ವೇಳೆ ಬಿಸಿಲು ಮಳೆ ಎನ್ನದೆ ಸಾರ್ವಜನಿಕರು ಬಸ್ ನಿಲ್ದಾಣವಿಲ್ಲದೆ ನಿಂತಿರುವುದು ಇಲ್ಲಿಯವರೆಗೂ ಈ ದೃಶ್ಯವನ್ನು ಕಂಡರೂ ಕಾಣದ ಹಾಗೆ ತೆರಳಿದ್ದಾರೆಯೇ ಅಥವಾ ಅಭಿವೃದ್ಧಿಯ ಅರಿವಿಲ್ಲವೇ, ಇದಲ್ಲದೆ ವರ್ಷಕ್ಕೆ ತಾಲೂಕಿನಾದ್ಯಂತ, ರಾಜ್ಯದ್ಯಂತ ಅದೆಷ್ಟು ಸಕಾರಿ ಕಾರ್ಯಕ್ರಮಗಳನ್ನು ನಡೆಸುವ ಜನಪ್ರತಿನಿಧಿಗಳು ಅಧಿಕಾರಿ ವರ್ಗ, ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಆದರೆ ಕೇವಲ ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರದಲ್ಲಿ ಅಥವಾ ಇಲಾಖೆಗಳಲ್ಲಿ ಹಣವಿಲ್ಲವೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *