Turuvekere: ಅಕ್ಷರದವ್ವ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ, 28 ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕಿಗೆ ಅಭಿನಂದನೆ.

Janataa24 NEWS DESK 

 

Turuvekere: ಅಕ್ಷರದವ್ವ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ, 28 ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕಿಗೆ ಅಭಿನಂದನೆ.

Turuvekere: ಅಕ್ಷರದವ್ವ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ, 28 ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕಿಗೆ ಅಭಿನಂದನೆ.
ತುರುವೇಕೆರೆ: ಪಟ್ಟಣದಲ್ಲಿರುವ ಭೀಮೋತ್ಸವ ಸಮಿತಿ ಕಚೇರಿಯಲ್ಲಿ 194ನೇ ಸಾವಿತ್ರಿ ಬಾಪುಲೆ ಅವರ ಜನ್ಮದಿನೋತ್ಸವವನ್ನು ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಭೀಮೋತ್ಸವ ಆಚರಣೆ ಸಮಿತಿ, ಆದಿಜಾಂಭವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ, ಡಿಎಸ್ಎಸ್ ಅಂಬೇಡ್ಕರ್ ವಾದ ಇವರ ವತಿಯಿಂದ ಆಯೋಜನೆ ಮಾಡಲಾಗಿತ್ತು. ಡಿಎಸ್ಎಸ್ ಅಂಬೇಡ್ಕರ್ವಾದ ತಾಲೂಕು ಸಂಚಾಲಕರಾದ ಕೃಷ್ಣ ಮಾದರ್ ನೇತೃತ್ವದಲ್ಲಿ ಮೊದಲಿಗೆ ಜ್ಯೋತಿಬಾಪುಲೆ ಮತ್ತು ಸಾವಿತ್ರಿ ಬಾಪುಲೆ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಂದು ವರ್ಷ ಜೆಪಿ ಶಾಲೆ, ಎಂಟು ವರ್ಷ ದೀಪು ಕಾನ್ವೆಂಟ್, ಐದು ವರ್ಷ ಸೇಂಟ್ ಲಿಟಲ್ ಫ್ಲವರ್ ಕಾನ್ವೆಂಟ್, 14 ವರ್ಷ ತಾಲೂಕಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಹೀಗೆ ಸುದೀರ್ಘವಾಗಿ ಸತತ 28 ವರ್ಷಗಳ ಕಾಲ ಖಾಸಾಗಿ ಶಾಲೆಯಲ್ಲಿ ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ವಿದ್ಯಾವಂತ ಮಹಿಳಾ ವರ್ಗಕ್ಕೆ ಮಾದರಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಪುಟ್ಟಮ್ಮ ಶ್ರೀ ರುದ್ರಪ್ಪ ಇವರ ಸುಪುತ್ರಿ ಹಾಗೂ ಶ್ರೀ ವೆಂಕಟೇಶರವರ ಧರ್ಮಪತ್ನಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀಮತಿ ರೇಣುಕಮ್ಮ ಅವರಿಗೆ ಹೂಮಾಲೆ ಹಾಕಿ ಮೇಲ್ಕಂಡ ಪ್ರಗತಿಪರ ಸಂಘ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಅವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು, ಇದೆ ವೇಳೆ ದಲಿತ ಮುಖಂಡರಾದ ಸೋಮೇನಹಳ್ಳಿ ಜಗದೀಶ್ ಮಾತನಾಡಿ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಕುರಿತು, ಪ್ರಸಕ್ತ ಭಾರತೀಯ ಮಹಿಳೆ ನಾನ ಕಾರಣಗಳಿಂದ ಸಂಪೂರ್ಣ ಸಮಾನತೆ ಸಾಧಿಸಿಲ್ಲದಿರಬಹುದು ಆದರೆ ಶಿಕ್ಷಣಕ್ಕೆ ಗಟ್ಟಿಯಾದ ತಳಹದಿ ಹಾಕಿ ರೂಪುರೇಷೆಗಳನ್ನು ಸಿದ್ಧಪಡಿಸಿ ದೇಶದ ಮಹಿಳೆಯರು ಇಷ್ಟು ದೂರ ಮುನ್ನಡೆಯಲು ಶಕ್ತಿ ತುಂಬಿದ ಸಾವಿತ್ರಿಬಾಪುಲೆ ಯವರ ಸ್ಮರಣೀಯ ಹಾಗೂ ಕೊಡುಗೆಯಾಗಿದ್ದು ಇದರ ನಿಮಿತ್ತ ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿ ಆಚರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದರು.

 

ಡಿ ಎಸ್ಎಸ್ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೃಷ್ಣ ಮಾದರ್ ಮಾತನಾಡಿ ಸಾವಿತ್ರಿ ಬಾಪುಲೆ ಅವರು ಭಾಗವಹಿಸಿದ ಪ್ರತಿಯೊಂದು ಸಭೆಯಲ್ಲೂ ಎಲ್ಲಾ ಜಾತಿಯ ಮಹಿಳೆಯರನ್ನು ಒಟ್ಟಿಗೆ ಕೂರಲು ಪ್ರೇರೇಪಿಸುತ್ತಿದ್ದರು, ಇಂತಹ ದೀಮಂತಿಕೆಯುಳ್ಳ ಜ್ಯೋತಿಬಾಪುಲೆ ದಂಪತಿಗಳು ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವು ಶಾಲೆಗಳನ್ನು ಪ್ರಾರಂಭಿಸಿ ಅವರಿಗೆ ಶಿಕ್ಷಣವನ್ನು ನೀಡಿ ದೇಶಕ್ಕೆ ಮಾದರಿಯಾದರು, ಇವರಿಗೆ ಮಕ್ಕಳಿಲ್ಲದ ಕಾರಣ ಯಶವಂತ್ ರಾವ್ ಎಂಬ ಮಗುವನ್ನು ದತ್ತು ಪಡೆದು ಉನ್ನತ ಶಿಕ್ಷಣವನ್ನು ನೀಡಿ ಆ ಬಾಲಕನನ್ನು ವೈದ್ಯನನ್ನಾಗಿಸಿದರು ಎಂದು ಸ್ಮರಿಸುತ್ತಾ ಮುಂದುವರೆದು ಮಾತನಾಡಿದ ಅವರು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಲ ಅತಿಥಿ ಉಪನ್ಯಾಸಕರಿಗೆ ವರ್ಷವಿಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದರೂ ಸಹ ಅವರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಅವರನ್ನು ಬೀದಿಗೆ ತಂದಿರುವ ಕುರಿತು ಪ್ರಸ್ತಾಪಿಸಿ, ಶಿಕ್ಷಣ ನೀಡುವ ಶಿಕ್ಷಕರಿಗೆ ಈ ರೀತಿ ಆಗಿದೆ ಇದನ್ನು ಕೂಡಲೇ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗೆ ಮಾಧ್ಯಮದ ಮುಖೇನ ಎಚ್ಚರಿಕೆ ನೀಡಿದರು.

 

ಇದೇ ಸಂದರ್ಭದಲ್ಲಿ ದಲಿತ ಮುಖಂಡ ಹಾಗೂ ತುರುವೇಕೆರೆ ಪಟ್ಟಣದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಚಂದ್ರು ಮಾತನಾಡಿ ಇಂದಿನ ಭಾರತೀಯ ಮಹಿಳೆಯರು ಸ್ಫರಿಸಬೇಕಾದ ಎರಡು ದಿನಾಚರಣೆಗಳೆಂದರೆ ಅವು ಮಾರ್ಚ್ 8 ಮತ್ತು ಜನವರಿ 3 ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಹಕ್ಕು ಮತ್ತು ಸ್ತ್ರೀ ಅರಿವಿನ ಜಾಗೃತಿ ಹುಟ್ಟಿಸಿದ ಒಂದು ಚಳುವಳಿಯಾದರೆ ಇದರ ಜೊತೆಗೆ ಮಾರ್ಚ್ ಎಂಟು ವಿಶ್ವ ಮಹಿಳಾ ದಿನವಾಗಿ ಆಚರಿಸಲ್ಪಟ್ಟರೆ, ದೇಶದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ದಾರಿ ದೀಪ ತೋರಿಸಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3 ರಂದು ನಡೆಯುತ್ತದೆ, ರೈತ ಕುಟುಂಬದಲ್ಲಿ ಜನಿಸಿದ ಸಾವಿತ್ರಿಬಾಯಿ ಅವರು ಇಂದು ದೇಶಾದ್ಯಂತ ಪರಿಚಿತ ಹೆಸರಾಗಲು ಅವರ ಪತಿ ಧೀಮಂತ ಸಮಾಜ ಸುಧಾರಕ ಜ್ಯೋತಿರಾವ್ ಪುಲೆ ಅವರ ಕೊಡುಗೆ ವಿಶಿಷ್ಟವಾದದ್ದು ಶಿಕ್ಷೆಣದ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಬಹುದೆಂಬ ಅವರ ನಂಬಿಕೆ ಜ್ಯೋತಿಬಾಪುಲೆ ಅವರು ಅನಕ್ಷರಸ್ತೆಯಾಗಿದ್ದ ಪತ್ನಿಗೆ ಮನೆಯವರ ವಿರೋಧದ ನಡುವೆಯೂ ಅಕ್ಷರ ಅಭ್ಯಾಸ ಮಾಡಿಸುವುದರ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ, ಜೊತೆಗೆ ಜ್ಯೋತಿಬಾಪುಲೆ ಬೆಂಬಲದೊಂದಿಗೆ ಪುಣೆಯ ಶಿಕ್ಷಕ ತರಬೇತಿ ಸಂಸ್ಥೆ ಸೇರಿ, ಆನಂತರ ಸಾವಿತ್ರಿಬಾಯಿ ಅವರು ತಮ್ಮ ಮನೆಯಿಂದಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದರು ಬಳಿಕ ದಂಪತಿ ಗಳು 1848ರಲ್ಲಿ ಬಿಡೆವಾಡದಲ್ಲಿ ಭಾರತದ ಪ್ರಥಮ ಬಾಲಕಿಯರ ಶಾಲೆಯ ಸ್ಥಾಪಿಸಿ ಶಾಲೆಗೆ ಮಕ್ಕಳನ್ನು ಸೆಳೆಯುವ ವಿನೂತನ ಯೋಜನೆಯಾಗಿ ವಿದ್ಯಾರ್ಥಿ ವೇತನ ನೀಡಲು ಮುಂದಾದರು, ಹೆಣ್ಣು ಮಕ್ಕಳು ಮತ್ತು ಕೆಳ ಜಾತಿಯ ಮಕ್ಕಳಿಗೆ ಜ್ಞಾನ ನೀಡುವ ಇವರ ಶ್ರಮ ಸಾಂಪ್ರದಾಯಿಕ ಮನಸ್ಥಿತಿಯು ಜನರ ಕೆಂಗಣ್ಣಿಗೆ ಗುರಿಯಾಗಿ ಶಾಲೆಗೆ ತೆರಳುವಾಗ ಸಾವಿತ್ರಿಬಾಯಿ ಅವರ ಮೇಲೆ ಸಗಣಿ ಎಸೆದು ಅಪಹಾಸ್ಯ ಮಾಡುತ್ತಿದ್ದರು ಇದರಿಂದ ಮನಸ್ಥೈರ್ಯ ಕಳೆದುಕೊಳ್ಳದ ಸಾವಿತ್ರಿಬಾಯಿ ಗಂಡನ ಸಲಹೆಯಂತೆ ಶಾಲೆಯಲ್ಲಿ ಸೀರೆ ಬದಲಿಸಿಕೊಂಡು ಪಾಠ ಮಾಡುತ್ತಿದ್ದರು ಎಂದು ವಿವರವಾಗಿ ಅವರು ನಡೆದು ಬಂದ ದಾರಿಯನ್ನು ತಿಳಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ತಾಲೂಕಿನ ದಲಿತಪರ ಸಂಘಟನೆಗಳ ಮುಖಂಡರು, ಯುವಕರು, ಮಹಿಳಾ ಮುಖಂಡರು ಸಂಚಾಲಕರು, ವಿವಿಧಪುರ ಸಂಘಟನೆಗಳ ಮುಖಂಡರು ಹಿರಿಯರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *