Janataa24 NEWS DESK
Turuvekere: AC, ASP, ತಹಸಿಲ್ದಾರ್ ಬಂದು ಶಾಂತಿ ಸಭೆ ಮಾಡಿದರು ಕುಣಿಕೇನಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ.
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿಗೆ ಒಳಪಟ್ಟಿರುವ ಕುಣಿಕೇನಹಳ್ಳಿ ಎಂಬ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ವಿಷಯದಲ್ಲಿ ಅಸ್ಪೃಶ್ಯತೆ ಇದೆ ಎಂದು ಈ ಹಿಂದೆ ಚರ್ಚೆಯಾಗಿದ್ದು ಸುತ್ತಮುತ್ತಲಿನ ಏಳರಿಂದ ಎಂಟು ಗ್ರಾಮಗಳ ಸೇರಿದಂತೆ ಗ್ರಾಮ ದೇವತೆಗಳಾದ ರಂಗನಾಥ ಸ್ವಾಮಿ, ಕೆಂಪಮ್ಮದೇವಿ, ಚಿಕ್ಕಮ್ಮದೇವಿ ಯ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಪ್ರತಿ ವರ್ಷವೂ ನಡೆಯುತ್ತಿದ್ದು ಈ ಜಾತ್ರಾ ಮಹೋತ್ಸವದಲ್ಲಿ 2000ಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಸ್ಥಳ ಇದಾಗಿದ್ದು ದಲಿತರಿಗೆ ಸವರ್ಣೀಯರಿಂದ ಜಾತ್ರಾ ಮಹೋತ್ಸವ ವಿಚಾರದಲ್ಲಿ ಅಸ್ಪೃಶ್ಯತೆ ನಡೆಸುತ್ತಿದ್ದಾರೆ ಎಂಬ ಗೊಂದಲದ ವಿಷಯವಾಗಿ ಈ ವರ್ಷ ಈ ಜಾತ್ರಾ ಮಹೋತ್ಸವ ನಡಿಯುತ್ತೋ ಇಲ್ಲವೋ ಎಂಬುದೇ ಕೆಲವು ಗೊಂದಲಗಳಿಂದ ಒಂದು ಪ್ರಶ್ನೆಯಾಗಿ ಉಳಿದಿತ್ತು ಇದರ ಹಿನ್ನೆಲೆ ಆಗಸ್ಟ್ 14 ರಂದು ಇದಕ್ಕೆ ಸಂಬಂಧಪಟ್ಟಂತೆ
ಕುಣಿಕೇನಹಳ್ಳಿ ಗ್ರಾಮಕ್ಕೆ ತಿಪಟೂರು ಉಪವಿಭಾಗಾಧಿಕಾರಿ, ತುರುವೇಕೆರೆ ತಾಲೂಕು ದಂಡಾಧಿಕಾರಿ, ಅಡಿಷನಲ್ ಎಸ್ ಪಿ, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಹಾಗೂ ಸಿಬ್ಬಂದಿ ತಾಲೂಕು ಆಡಳಿತದ ವರ್ಗ ಉಪಸ್ಥಿತಿಯಲ್ಲಿ ದೇವಸ್ಥಾನದ ಆವರಣದಲ್ಲಿ ಶಾಂತಿ ಸಭೆ ನಡೆಸಿ ಎಲ್ಲಾ ಸಮುದಾಯದವರು ಒಟ್ಟುಗೂಡಿ ಜಾತ್ರೆಯನ್ನು ನಡೆಸಬೇಕೆಂಬ ತೀರ್ಮಾನದೊಂದಿಗೆ ಅಧಿಕಾರಿ ವರ್ಗ ಕೂಡ ಕೊನೆಯ ಸುತ್ತಿನ ಶಾಂತಿ ಸಭೆ ನಡೆಸಿ ಇದಕ್ಕೆ ಎಲ್ಲ ಗ್ರಾಮಸ್ಥರು ಸಹ ಒಪ್ಪಿಗೆ ಸೂಚಿಸಿ ಶಾಂತಿ ಸಭೆ ಯಶಸ್ವಿ ಕೂಡ ಆಗಿತ್ತು, ಈ ಶಾಂತಿ ಸಭೆ ಎರಡನೆಯ ಶಾಂತಿ ಸಭೆಯು ಕೂಡ ಹೌದು ಇದರ ವಿಚಾರವಾಗಿ ತಿಪಟೂರು ಉಪವಿಬಾಗಧಿಕಾರಿ
ಶ್ರೀಮತಿ ಸಪ್ತಶ್ರೀ ಮಾಧ್ಯಮದ ಮುಂದೆ ಮಾತನಾಡಿ ಪ್ರತಿ ವರ್ಷವೂ ನಡೆಯುವಂತೆ ಈ ವರ್ಷವೂ ಜಾತ್ರಾ ಮಹೋತ್ಸವ ನಡೆಯುವಾಗ ಎಲ್ಲರೂ ಕೂಡ ಸಮಾನತೆಯಿಂದ ಸರಿದೂಗಿಸಿಕೊಂಡು ಒಗ್ಗಟ್ಟಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಬೇಕು ಎಂದು ತಿಳಿ ಹೇಳಲಾಯಿತು ಆದರೂ ಕೆಲಸಮೆಯ ವಾದ ವಿವಾದಗಳ ಗೊಂದಲದಿಂದ ಕೂಡಿದ್ದ ಶಾಂತಿ ಸಭೆ ಸಭೆ ಕೊನೆಗೆ ಅಂತ್ಯವಾಗಿ ಎಲ್ಲರೂ ಒಗ್ಗಟ್ಟಾಗಿ ಜಾತ್ರಾ ಮಹೋತ್ಸವ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾತನ್ನು ಸಹ ಈ ಹಿಂದೆ ಹೇಳಿದ್ದರು.
ಆದರೆ ಅಂತೂ ಇಂತೂ ಕೊನೆಗೂ ಬಂತು ನೋಡಿ ದಸರಾ ಹಬ್ಬದ ವಿಶೇಷ ಪೂಜೆ ಗಾಗಿ ಕುಣಿಕೇನಹಳ್ಳಿ ಗ್ರಾಮದಲ್ಲಿರುವ ಎಲ್ಲಾ ದೇವತೆಗಳು ಗ್ರಾಮದಲ್ಲಿ ಪೂಜೆಗೆ ಸಜ್ಜಾಗಿ ಮೆರವಣಿಗೆಯೊಂದಿಗೆ ಒರಟು ಎಲ್ಲವೂ ಕೂಡ ಸುಸೂತ್ರವಾಗಿ ನಡೆದು ಕೊನೆಗೆ ಇನ್ನೇನು ದೇವಸ್ಥಾನದ ಒಳಗೆ ದೇವರನ್ನು ಕರೆದೊಯ್ಯುವ ಮುನ್ನ ಎಲ್ಲಾ ದೇವರಿಗೂ ನಮಸ್ಕರಿಸಿ ಕೊನೆ ಪೂಜೆಗಾಗಿ ಅಕ್ಕ ಪಕ್ಕದಲ್ಲಿರುವ ದೇವಸ್ಥಾನಕ್ಕೆ ತೆರಳುವ ವೇಳೆ ದಲಿತರಿಗಾಗಿ ಇರುವ ಚಿಕ್ಕಮ್ಮ ದೇವಸ್ಥಾನದ ಬಳಿ ಪೂಜೆಗೆ ಬರಲು ಕೆಂಪಮ್ಮ ದೇವಿ ಮತ್ತು ಕೆಂಚರಾಯ ದೇವರು ಪೂಜೆಗೆ ಬಾರದೆ ಅಸ್ಪೃಶ್ಯತೆ ಆಚರಣೆ ಮಾಡಿದೆ ಎಂಬ ಆರೋಪ ದಲಿತ ಮುಖಂಡರುಗಳಿಂದ ಕೇಳಿ ಬಂದಿದ್ದು,
ಇದೇ ಸಮಯದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ರಂಗನಾಥ ಸ್ವಾಮಿ ದೇವರನ್ನು ದಲಿತರು ಎತ್ತಿಕೊಳ್ಳಲು ಹೋದಾಗ ಅವರಿಗೆ ಮುಜರಾಯಿ ಇಲಾಖೆಗೆ ಸೇರಿದ ದೇವರನ್ನು ದಲಿತರಿಗೆ ಬಿಟ್ಟು ಮಿಕ್ಕ ಕೆಂಪಮ್ಮದೇವಿ ಕೆಂಚರಾಯಸ್ವಾಮಿ ದೇವರನ್ನು ಗುಡಿದುಂಬಿಸಿ ಹೊರಟರು ಇದರಲ್ಲಿ ಯಾರ ತಪ್ಪಿದೆ ಎಂಬುದೇ ಒಂದು ಪ್ರಶ್ನೆ, ಇದಲ್ಲದೆ ಪಾಪ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವರನ್ನು ಅಲ್ಲಿಯೇ ಬಿಟ್ಟ ಪರಿಣಾಮ ದಲಿತರೆಲ್ಲ ಸೇರಿ ಮುಜರಾಯಿ ಇಲಾಖೆಗೆ ಸೇರಿದ ರಂಗನಾಥ ಸ್ವಾಮಿ ದೇವರನ್ನು ದಲಿತರ ದೇವಸ್ಥಾನದ ಮುಂಭಾಗ ಇಟ್ಟು ದಲಿತರೆ ಇದನ್ನು ಕಾವಲು ಕಾಯುವಂತ ಪರಿಸ್ಥಿತಿ ಕಣ್ಮುಂದೆ ಎದ್ದು ಕಾಣುತ್ತಿತ್ತು,ಇದೇ ವೇಳೆ ಮಾಧ್ಯಮದೊಂದಿಗೆ ದಲಿತ ಮುಖಂಡ ಜಗದೀಶ್ ಹಾಗೂ ಹಲವು ಮಹಿಳೆಯರು ಮಾತನಾಡಿ ನಮ್ಮ ಗ್ರಾಮದಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ತಾಂಡವ ಮಾಡುತ್ತಿದ್ದು ಯಾವೊಬ್ಬ ಅಧಿಕಾರಿಯು ಬಂದು ಶಾಂತಿ ಸಭೆ ನಡೆಸಿದರು ಪ್ರಯೋಜನವಾಗದೆ ಸಮಾನತೆ ಎಂಬುದು ಇಲ್ಲಿ ನಡೆಯದೆ ಕೇವಲ ಅಸ್ಪೃಶ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಹಾಗಾಗಿ ಕೂಡಲೇ ತಾಲೂಕು ಆಡಳಿತ ಸ್ಥಳಕ್ಕೆ ಧಾವಿಸಿ ಮುಜರಾಯಿ ಇಲಾಖೆಗಳೊಂದಿಗೆ ಚರ್ಚಿಸಿ ಈ ಕ್ಷಣದಿಂದಲೇ ಕುಣಿಕೇನಹಳ್ಳಿ ಗ್ರಾಮದಲ್ಲಿರುವ ಈಗಾಗಲೇ ಮುಜರಾಯಿ ಇಲಾಖೆಗೆ ಸೇರಿರುವ ರಂಗನಾಥ ಸ್ವಾಮಿ ಜೊತೆಗೆ ನಮ್ಮ ಗ್ರಾಮದಲ್ಲಿರುವ ಎಲ್ಲಾ ದೇವರುಗಳನ್ನು ತಮ್ಮ ವಶಕ್ಕೆ ಪಡೆದು ಮುಂದಿನ ತೀರ್ಮಾನದವರೆಗೆ ಯಾವುದೇ ತರಹದ ಪೂಜಾ ಕಾರ್ಯವನ್ನು ನೆರವೇರಿಸದೆ ನಮಗೂ ಸಹ ಸಮಾನತೆಯನ್ನ ನೀಡಿ ಅಸ್ಪೃಶ್ಯತೆಯಿಂದ ದೂರ ಮಾಡಿ ಎಲ್ಲರಂತೆ ಬದುಕಲು ನಮ್ಮನ್ನು ಸಹ ಬಿಡಿ ಇಲ್ಲವಾದರೆ ಕುಣಿಕೇನಹಳ್ಳಿ ಗ್ರಾಮದಿಂದ ತಾಲೂಕು ಆಡಳಿತ ಕಚೇರಿಯವರಿಗೆ ಕಾಲ್ನಡಿಗೆಯಲ್ಲಿ ಅರಬೆತ್ತಲೆಯಾಗಿ ಪಾದಯಾತ್ರೆ ಮೂಲಕ ತಾಲೂಕು ಆಡಳಿತ ಕಚೇರಿ ಮುಂಭಾಗ ನಾವೆಲ್ಲರೂ ಧರಣಿ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿ ಈ ಕೂಡಲೇ ಎಲ್ಲಾ ದೇವಸ್ಥಾನಗಳನ್ನು ತಮ್ಮ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ಕೊನೆಗೂ ತಹಶೀಲ್ದಾರ್ ಸೂಚನೆಯಂತೆ ಇದೇ ಸಮಯಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಸ್ಪೃಶ್ಯತೆ ಆಚರಣೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಕೆಂಪಮ್ಮ ದೇವಿ ಉತ್ಸವ ಮೂರ್ತಿ ಇರುವ ಮತ್ತು ಕೆಂಚಾರಾಯ ದೇವರು ಇರುವ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಬೀಗ ಜಡಿದು ಅಲ್ಲೇ ಇದ್ದ ಮುಜರಾಯಿ ಇಲಾಖೆಗೆ ಸೇರಿದ ಉತ್ಸವ ಮೂರ್ತಿ ರಂಗನಾಥ ಸ್ವಾಮಿಯನ್ನು ದೇವಸ್ಥಾನಕ್ಕೆ ಗುಡಿದುಂಬಿಸಿ ಸಂಜೆ ಆಗಿರುವ ಕಾರಣದಿಂದ ಇದರ ವಿಚಾರವಾಗಿ ನಾಳೆ ನಿಮ್ಮ ಬಳಿ ಚರ್ಚಿಸಲಾಗುವುದು ಎಂದು ಕಂದಾಯ ಇಲಾಖೆ ಸಿಬ್ಬಂದಿಗಳು ಅಲ್ಲಿಂದ ತೆರಳಿದ್ದಾರೆ ಎಂಬ ಮಾತುಗಳು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ಒಟ್ಟಾರೆ ಕುಣಿಕೇನಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ ಎಂಬ ಕೂಗು ಹೇಳಿ ಬರುತ್ತಿದ್ದು ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎಸಿ, ಅಡಿಷನಲ್ ಎಸ್ ಪಿ, ತಹಶೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಷ್ಟೇ ಇಲಾಖೆಗಳು ಬಂದರೂ ಇದನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿದೆ, ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ಇರುವ ಎಲ್ಲಾ ದೇವರುಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿ ಎಲ್ಲರನ್ನೂ ಸಮಾನತೆಯಿಂದ ಅಸ್ಪೃಶ್ಯತೆ ಇಲ್ಲದೆ ಜಾತ್ರಾ ಮಹೋತ್ಸವವನ್ನು ನಡೆಸಲು ಮುಂದಾಗುತ್ತದೆಯೇ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಂಬುದನ್ನು ಕಾದು ನೋಡಬೇಕು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.