Janataa24 NEWS DESK
Turuvekere: ರಸ್ತೆ ಬದಿಯ ಕಲ್ಲು ಕಂಬಕ್ಕೆ ಕಾರು ಡಿಕ್ಕಿ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು.

ತುರುವೇಕೆರೆ: ತುರುವೇಕೆರೆ ತಾಲೂಕಿನ ತಂಡಗ ಗ್ರಾಮದ ,ಲಿಂಗರಾಜು (38ವರ್ಷ) ಮತ್ತು ಅಕ್ಷಯ್ (30ವರ್ಷ) ಇವರು ಗುರುವಾರ ರಾತ್ರಿ ಕಿಬ್ಬನಹಳ್ಳಿ ಕ್ರಾಸ್ ಕಡೆಯಿಂದ ತುರುವೇಕೆರೆ ಕಡೆಗೆ( i 20) KA- 51 ,MJ -1922 ,ನಂಬರಿನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ,
ತುರುವೇಕೆರೆಗೆ ಸಮೀಪ ಇರುವ ತಾವರೆಕೆರೆ ಎಂಬ ಗ್ರಾಮದ ಬಳಿ ಗುರುವಾರ ರಾತ್ರಿ ಸಮಯ 1.10 ಗಂಟೆ ಸಮಯದಲ್ಲಿ ರಸ್ತೆಯ ಪಕ್ಕದಲ್ಲೇ ಇದ್ದ ಕಲ್ಲು ಕಂಬವೊಂದಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಲಿಂಗರಾಜು ಎಂಬ ವ್ಯಕ್ತಿ ಸ್ಥಳದಲ್ಲಿ ಅಸುನಿಗಿದ್ದಾನೆ(Died), ಇನ್ನು ಅದೇ ಕಾರಿನಲ್ಲಿ ಜೊತೆಯಲ್ಲಿದ್ದ ಅಕ್ಷಯ್(30ವರ್ಷ) ಎಂಬ ವ್ಯಕ್ತಿಯನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ(District Hospital) ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ,
ಇನ್ನು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/turuvekere-leopard-sighting-in-kerevaragerahalli/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv