Janataa24 NEWS DESK
Turuvekere: ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯರ 917ನೇ ಜಯಂತಿ ಆಚರಣೆ.


ತುರುವೇಕೆರೆ: ತಾಲೋಕು ಆಡಳಿತ ಹಾಗೂ ತಾಲೋಕು ಕುಳುವ ಸಮಾಜದ ಸಹಯೋಗದಲ್ಲಿ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯರವರ 917ನೇ ಜಯಂತ್ಯೋತ್ಸವದ ಅಂಗವಾಗಿ ತಾಲೂಕಿನ ಶಾಸಕ ಎಂ.ಟಿ ಕೃಷ್ಣಪ್ಪ ಮತ್ತು ನೂತನ ತಹಸೀಲ್ದಾರ್ ಎನ್ ಎ ಕುಂ ಇ ಮಹಮದ್ ರವರುಗಳು ಪಟ್ಟಣದ ತಾಲೋಕು ಕಛೇರಿ ಸಭಾಂಗಣದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು .
ನಂತರ ಮಾತನಾಡಿದ ತಹಸೀಲ್ದಾರ್ ಅವರು 16ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಚಂದಯ್ಯನವರು ವಿಜಯಪುರ ತಾಲೂಕಿನ ಶಿವಣಗಿ ಜನಿಸಿ ವೃತ್ತಿಯಲ್ಲಿ ನೂಲನ್ನು ತಯಾರಿಸಿ ಕೃಷಿಗೆ ಕುಟುಂಬಗಳಿಗೆ ಅಗತ್ಯವಿರುವ ಪರಿಕರಗಳನ್ನು ತಯಾರಿಸುವುದೇ ಅವರ ಮೂಲ ಕಸುಬು ಆಗಿತ್ತು ಚಂದಯ್ಯ ಶರಣರು ಕಾಯಕವನ್ನು ದೇವರಂತೆ ಕಂಡವರು, ಕಾಯಕ ಯಾವುದಾದರೇನು ತನು ಮನ ಪರಿಶುದ್ದವಾಗುವ ಕಾರ್ಯವನ್ನು ಮಾಡಬೇಕೆಂದಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ತಾಲೋಕು ಕುಳುವ ಸಮಾಜದ ವತಿಯಿಂದ ನೂತನ ತಹಸೀಲ್ದಾರ್ ಮತ್ತು ಸಮಾಜದ ಖಜಾಂಚಿ ಸಣ್ಣಪ್ಪ ರವರುಗಳನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸುನಿಲ್ ಕುಮಾರ್ ಕುಳುವ ಸಮಾಜದ ತಾಲೋಕು ಘಟಕದ ತಾಲೋಕು ಅಧ್ಯಕ್ಷ ಜಿ ಪಿ ಶ್ರೀನಿವಾಸ್,ಕಾರ್ಯದರ್ಶಿ ಮಧು, ಉಪಾಧ್ಯಕ್ಷೆ ರೇಣುಕಮ್ಮ ಸಮಾಜದ ಮುಖಂಡರುಗಳಾದ ನವೀನ ಸಾದರಹಳ್ಳಿ,ಕರಿಯಪ್ಪ ಹೆಚ್ ಹೆಚ್ ಅಶೋಕ್,ಚಿದಾನಂದ್, ಕರಿಯಪ್ಪ,ವಾಸು, ವೆಂಕಟೇಶ್ ಎಸ್ ಬಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/