Janataa24 NEWS DESK
Tumkur: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿ, ರೈತರಿಗೆ ಶಾಸಕ ಎಂ ಟಿ ಕೃಷ್ಣಪ್ಪ ಕರೆ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಶಾಸಕ ಎಂ ಟಿ ಕೃಷ್ಣಪ್ಪ ಅವರು ಸುದ್ದಿಗೋಷ್ಠಿ ನಡೆಸಿದರು. ಇದೆ ವೇಳೆ ಮಾತನಾಡಿದ ಎಂ ಟಿ ಕೃಷ್ಣಪ್ಪ, ಕೊಬ್ಬರಿ ಬೆಲೆ 15,000 ನಿಗದಿಪಡಿಸಿ ಎಂದು ಈಗಾಗಲೇ ರೈತರು ಪ್ರತಿಭಟನೆಯನ್ನು ಕೂಡ ಮಾಡಿದ್ದು.
ಈ ಕಾಂಗ್ರೆಸ್ ಸರ್ಕಾರ ಕೊಬ್ಬರಿಗೆ ಯಾವುದೇ ತರಹದ ಬೆಲೆಯನ್ನು ನಿಗದಿಪಡಿಸಲು ಮುಂದಾಗುತ್ತಿಲ್ಲ, ಈ ಸರ್ಕಾರಕ್ಕೆ ರೈತರೆಂದರೆ ಅಸಡ್ಡೆ, ಈಗಾಗಲೇ ಅಧಿವೇಶನದಲ್ಲಿ ನಾನು ಕೂಡ ಕೊಬ್ಬರಿ ಬೆಲೆಗೆ 15,000 ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದು,
ರೈತರ ಏಳಿಗೆಗಾಗಿ ಈ ಸರ್ಕಾರ ಏನೂ ಮಾಡುವುದಿಲ್ಲ, ರೈತರನ್ನು ಕಡೆಗಣಿಸುತ್ತಿರುವ ಈ ಸರ್ಕಾರ ಬಂಡ ಸರ್ಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಜಿಲ್ಲೆಯ ಸುತ್ತಮುತ್ತಲಿನ ತೆಂಗು ಬೆಳೆಗಾರರು ಮತ್ತು ರೈತರು ಈ ಕಾಂಗ್ರೆಸ್ ಸರ್ಕಾರಕ್ಕೆ ಯಾವ ರೀತಿ ಪಾಠ ಕಲಿಸಬೇಕು, ಈ ಕೆಟ್ಟ ಸರ್ಕಾರಕ್ಕೆ ಪಾಠ ಕಲಿಸಲು ಇದು ನಮ್ಮೆಲ್ಲರಿಗೂ ಒಳ್ಳೆಯ ಸಮಯ ಸರ್ಕಾರವನ್ನ ಕಿತ್ತು ಆಕಬೇಕು ಎಂದು ಮಾಧ್ಯಮದ ಮುಖೇನ ರೈತರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ವೆಂಕಟಪುರ ಯೋಗೀಶ್, ಬಿಗಿನೇಹಳ್ಳಿ ಪುಟ್ಟರಾಜು, ವಿಜಯಕುಮಾರ್, ಮುನಿಯೂರು ರಂಗಸ್ವಾಮಿ, ಮಂಗಿಕುಪ್ಪೆ ಬಸವರಾಜ್ ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/lokasabha-bjp-releases-first-list-of-lok-sabha-candidates/