Tumkur: ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವಾದ್ಯಂತ ತಾರತಮ್ಯ

Janataa24 NEWS DESK

Tumkur: ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವಾದ್ಯಂತ ತಾರತಮ್ಯ: ಶ್ರೀಮತಿ ಆನಂದ ಮದನ್.




ತುರುವೇಕೆರೆ: ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವದಾದ್ಯಂತ ತಾರತಮ್ಯ ನಡೆಯುತ್ತಿದೆ ಎಂದು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ‌ ರಿ, ಅಧ್ಯಕ್ಷರಾದ ಶ್ರೀಮತಿ ಆನಂದ ಮದನ ಹೇಳಿದರು.

worldwide discrimination on womens equality9066342887636506461
Tumkur: ಮಹಿಳಾ ಸಮಾನತೆಯ ವಿಚಾರದಲ್ಲಿ ವಿಶ್ವಾದ್ಯಂತ ತಾರತಮ್ಯ: ಶ್ರೀಮತಿ ಆನಂದ ಮದನ್.



ತುರುವೇಕೆರೆ ತಾಲೂಕಿನ ಮಾಯಸಂದ್ರ(Mayasandhra) ಗ್ರಾಮದಲ್ಲಿ ಮಹಿಳಾ ವಿವಿಧೋದ್ದೇಶ  ಸಹಕಾರ ಸಂಘ ರಿ ವತಿಯಿಂದ ಗ್ರಾಮದ ಶ್ರೀರಾಜೀಮತಿ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪುರುಷನಷ್ಟೇ ಸಾಮರ್ಥ್ಯವನ್ನು ಮಹಿಳೆಯರು ಹೊಂದಿದ್ದರೂ, ಅವರನ್ನು ಕೀಳಾಗಿ ಕಾಣುವ ದುಷ್ಟ ಸಂಸ್ಕೃತಿ(Culture) ನಮ್ಮ ದೇಶದಲ್ಲಿ ಇತ್ತು ಮತ್ತು ಈಗಲೂ ಅದು ಸಂಪೂರ್ಣವಾಗಿ ಕೊನೆಗೊಂಡಿಲ್ಲ.



ಮನುಸ್ಮೃತಿಯ ದುಷ್ಟ ಆಚರಣೆಗಳಿಂದಾಗಿ ಮಹಿಳೆ(Women)ಯರು ಸಾವಿರಾರು ವರ್ಷಗಳಿಂದ ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಮಹಿಳೆಯನ್ನು ಕಟ್ಟಕಡೆಯ ಪ್ರಜೆಯಾಗಿ ಪರಿಗಣಿಸಲಾಗುತ್ತಿತ್ತು. ಆಕೆ ಕೇವಲ ಭೂಗದ ವಸ್ತು ಅಥವಾ ಪುರುಷರ ಸೇವೆಗೆಂದೇ ಇರುವ ನಿರ್ಜೀವ, ನಿರ್ಭಾವ ವಸ್ತು ಎಂದೇ ಮನುಸಂಸ್ಕೃತಿಯ ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಂಡಿತು.



ಇಂದಿಗೂ ಮಹಿಳೆ(Women) ತನ್ನ ಇಷ್ಟದಂತೆ ಸಮಾಜದಲ್ಲಿ ಬದುಕು ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ. ಮಹಿಳೆ ಯಾವ ಬಟ್ಟೆ ಧರಿಸಬೇಕು, ಎಲ್ಲಿ ಹೋಗಬೇಕು, ಯಾರ ಜೊತೆಗೆ ಮಾತನಾಡಬೇಕು, ಯಾರ ಜೊತೆಗೆ ಮದುವೆಯಾಗಬೇಕು, ಯಾವ ಶಿಕ್ಷಣ ಪಡೆಯಬೇಕು ಅನ್ನೋದನ್ನು ಪುರುಷ ಪ್ರಧಾನ ಸಮಾಜವೇ ನಿರ್ಧರಿಸುವ ಸ್ಥಿತಿ ಇಂದಿಗೂ ಮರೆಯಾಗಿಲ್ಲ.


ಹಿಂದಿನ ಕಾಲದ ಅನಿಷ್ಠ ಸಂಸ್ಕೃತಿಗಳು ಇನ್ನೂ ಕೂಡ ಮಹಿಳೆಯನ್ನು ಕಾಡುತ್ತಲೇ ಇದೆ. ಕಾಡು ಪ್ರಾಣಿಗಳ ಉಪಟಳದ ಮಧ್ಯೆಯೂ ಒಂದು ಹೆಣ್ಣಿನ ಜೀವಕ್ಕಿಂತ ಪುರುಷರ ಮಡಿ ಮೈಲಿಗೆಗೆ ಅನ್ನೋ ಮೌಢ್ಯತೆ ಹೆಚ್ಚು ಬೆಲೆ ಅನ್ನೋ ದುರಂತ ಬಹುಶಃ ಯಾವ ದೇಶದಲ್ಲಿಯೂ ಇರಲಾರದು.


ಭಾರತ ಡಿಜಿಟಲ್ ಯುಗದಲ್ಲಿದ್ದರೂ, ಇಂದಿಗೂ ಮೌಢ್ಯಾಚರಣೆಗಳಿಂದ ಹೊರ ಬಂದಿಲ್ಲ, ಮಹಿಳೆಯನ್ನು ಒಂದೆಡೆ ದೇವತೆಗೆ, ಭೂಮಿತಾಯಿಗೆ ಹೋಲಿಸುತ್ತಾ ಮತ್ತೊಂದೆಡೆ ಅವಮಾನ, ಶೋಷಣೆ ಮಾಡಲಾಗುತ್ತಿದೆ. ಸಾವಿತ್ರಿ ಬಾಯಿಫುಲೆ ಅವರಂತ ಶಿಕ್ಷಕಿ ಮಹಿಳೆಯರಿಗೆ ಶಿಕ್ಷಣ ಕೊಡಲು ಮುಂದಾಗದೇ ಇದ್ದಿದ್ದರೆ, ಇಂದಿಗೂ ಮಹಿಳೆಯರ ಸ್ಥಿತಿ ಸಮಾಜದಲ್ಲಿ ಅದೇ ರೀತಿಯಲ್ಲಿರುತ್ತಿತ್ತು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ವಿಶ್ವಜ್ಞಾನಿ ಸಂವಿಧಾನವನ್ನು ಬರೆಯದೇ ಇರುತ್ತಿದ್ದರೆ, ಮಹಿಳೆಯರ ಸ್ಥಿತಿಯನ್ನು ಇಂದು ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆ ಏನೂ ಅಲ್ಲ ಅನ್ನುವ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಕೂಡ ತನ್ನ ಹಕ್ಕನ್ನು ಪಡೆಯಲು ಸ್ವತಂತ್ರಳು ಎಂದು ಸಂವಿಧಾನದಲ್ಲಿ ಬರೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಹಿಳಾ ಸಮಾಜ ಇಂದು ನೆನೆಯಬೇಕಿದೆ‌ ಎಂದು ತಿಳಿಸಿದರು.

ಈ ವೇಳೆ ಸಂಘದ ಮಹಿಳೆಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು ನೆರವೇರಿತು.



ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ವಾಸು ಮತ್ತು ಸಂಘದ ಉಪಾಧ್ಯಕ್ಷರಾದ ಲೀಲಾವತಿ ಗಿಡ್ಡಯ್ಯ.ಕಾರ್ಯದರ್ಶಿ ಜ್ವಾಲಾ. ನಿರ್ದೇಶಕರುಗಳಾದ  ಸ್ವರ್ಣಾಂಬ. ಭುವನೇಶ್ವರಿ.ಜ್ವಾಲಾ. ಆಶಾಚಂದು. ಚೈತ್ರ.ಶೈಲಪ್ರಸಾದ್. ಸಹನಾಸತ್ಯಾನಂದ್. ಅಂಜಲಿಭಾನುಪ್ರಕಾಶ್. ಪೂರ್ಣಿಮಾಬಾಬು. ಮಮತಾ. ಹಾಗೂ ಸಂಘದ ಎಲ್ಲಾ ಸದಸ್ಯರುಗಳು .ಸಂಗೀತ. ಶೃತಿ.ಮಂಜುಶ್ರೀ. ಸೇರಿದಂತೆ ಮುಂತಾದ ಮಹಿಳೆಯರು, ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ

https://www.janataa24.com/swami-japananda-swami-is-saving-life-by-giving-water-to-the-dumb-creatures/



ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Leave a Reply

Your email address will not be published. Required fields are marked *