JANATAA24 NEWS DESK
Tumkur: ಖಾತೆ ಬದಲಾವಣೆಗೆ 10 ಸಾವಿರ ಲಂಚ ಪಡೆದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಲೋಕಾಯುಕ್ತ ಬಲೆಗೆ.

ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ, ಮಾಚನಹಳ್ಳಿ ಗ್ರಾಮದ ವಾಸಿಯಾದ ಪಿರ್ಯಾದಿ ಶ್ರೀ ಯೋಗೀಶ್.ಬಿ ರವರ ತಾತ ಗಂಗ ಗುಡ್ಡಯ್ಯ ರವರ ಹೆಸರಿನಲ್ಲಿದ್ದ ತುಮಕೂರು ತಾಲ್ಲೂಕು ಮೈದಾಳ ಅಮಾನಿಕೆರೆ ಸರ್ವೆ ನಂಬರಿನ ಪಿತ್ರಾರ್ಜಿತವಾದ ಮೂವತ್ತೆಂಟೂವರೆ ಗುಂಟೆ ಜಮೀನನ್ನು ಪಿರ್ಯಾದಿ ತಂದೆಯಾದ ಬಸವರಾಜು ರವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಕ್ಯಾತ್ಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಯಾದ ಮಂಜುನಾಥ ರವರು ಮೊದಲೇ 10.000=00 ರೂಗಳನ್ನು ದೂರುದಾರರಿಂದ ಲಂಚವಾಗಿ ಪಡೆದು, ನಂತರ ಇನ್ನೂ 10,000=00 ರೂಗಳ ಹೆಚ್ಚಿನ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಪಿರ್ಯಾದಿ ಶ್ರೀ ಯೋಗೀಶ್.ಬಿ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ: 04/11/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು. ಪೊಲೀಸ್ ಉಪಾಧೀಕ್ಷಕರಾದ ಡಾ॥ ಸಂತೋಷ್.ಕೆ.ಎಂ ರವರು ಮೊ.ನಂ:09/2025 ಕಲಂ-7(b) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.
ಇದೇ ದಿನ ದಿನಾಂಕ:04/11/2025 ರಂದು ಟ್ರ್ಯಾಪ್ ಕಾರ್ಯಾಚರಣೆ ವೇಳೆ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿನ ಹಾಪ್ ಕಾಮ್ಸ್ ಬಳಿಯಿರುವ ಊರ್ಡಿಗೆರೆ ಹೋಬಳಿ ಕಂದಾಯ ನಿರೀಕ್ಷಕರ ಕಛೇರಿ ಬಳಿ ಮದ್ಯಾಹ್ನ 03.00 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀ ಯೋಗೀಶ್.ಬಿ ರವರಿಂದ 10.000=00 ರೂ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ರವರನ್ನು ತನಿಖಾಧಿಕಾರಿ ಡಾ| ಸಂತೋಷ್.ಕೆ.ಎಂ. ಪೊಲೀಸ್ ಉಪಾಧೀಕ್ಷಕರು ರವರ ನೇತೃತ್ವದ ತಂಡ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್.ಕೆ.ಎಂ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಬಿ.ಮೊಹಮ್ಮದ್ ಸಲೀಂ, ಶ್ರೀ ಕೆ.ಸುರೇಶ, ಶ್ರೀ ಶಿವರುದ್ರಪ್ಪ ಮೇಟಿ ಮತ್ತು ಶ್ರೀ ರಾಜು.ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಲಂಚ ಸ್ವೀಕರಿಸಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.