Janataa24 NEWS DESK
Tumkur: ಮಸಾಲ ಜಯರಾಮ್ ತೋಟದ ಮನೆಯಲ್ಲಿ BSY ಹೈ-ಟೆನ್ಶನ್ ಸಭೆಗೆ, ಮಧುಸ್ವಾಮಿ ಹಾಜರ್
ತುರುವೇಕೆರೆ: ತುರುವೇಕೆರೆ ತಾಲೂಕಿನ ಮಾಜಿ ಶಾಸಕರಾದ ಮಸಾಲ ಜಯರಾಮ್ ಅವರ ತೋಟದ ಮನೆಗೆ ಇಂದು ಘಟಾನುಘಟಿ ಬಿಜೆಪಿ ನಾಯಕರುಗಳ ಆಗಮನ.

ಬಿ ಎಸ್ ಯಡಿಯೂರಪ್ಪ, ಗೋಪಾಲಪ್ಪ, ನೆ ಲ. ನರೇಂದ್ರಬಾಬು, ಮಾಧುಸ್ವಮಿ, ಇನ್ನು ಹಲವು ಬಿಜೆಪಿ ನಾಯಕರುಗಳ ಮಸಾಲ ಜಯರಾಮ್ ರವರ ತೋಟದ ಮನೆಗೆ ಆಗಮಿಸಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿರುವ ವಿ ಸೋಮಣ್ಣನ ಗೆಲುವಿಗಾಗಿ ಈ ದೊಡ್ಡ ಬಿಜೆಪಿ ನಾಯಕರುಗಳ ದಂಡು ತೋಟದ ಮನೆಯಲ್ಲಿ ಬೀಡು ಬಿಟ್ಟಿರುವ ಹಾಗಿದೆ.
ಇದರ ನಡುವೆ ಮಾಧುಸ್ವಾಮಿಯು ಸಹ ಈ ನಾಯಕರುಗಳ ಗುಂಪಲ್ಲಿ ಕಾಣಿಸಿಕೊಂಡಿರುವುದು ಎಲ್ಲೋ ಒಂದು ಕಡೆ ಮಾಧುಸ್ವಾಮಿ ಅವರ ರಾಜಕೀಯ ಮುನಿಸು ತಣ್ಣಗಾಗಿರಬಹುದೇ? ಒಟ್ಟಾರೆ ಈ ಚುನಾವಣೆಯಲ್ಲಿ ವಿ. ಸೋಮಣ್ಣ(V Somanna)ಪರ ಮಾಧುಸ್ವಾಮಿಯವರು ಬ್ಯಾಟ್ ಬೀಸಲಿದ್ದಾರಾ ಕಾದು ನೋಡಬೇಕಿದೆ.
ಬೈರತಿ ಬಸವರಾಜು ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ರವಿ ಹೆಬ್ಬಾಕ, ಜಿಲ್ಲಾ ಉಪಾಧ್ಯಕ್ಷರಾದ ಕೊಂಡಜ್ಜಿ ವಿಶ್ವನಾಥ್, ಕೆಂಪೇಗೌಡ ,ಇನ್ನು ಅನೇಕ ತಾಲೂಕು ಮತ್ತು ಜಿಲ್ಲೆಯಾದ್ಯಂತ ಹಲವು ನಾಯಕರುಗಳು ಮಸಾಲಾ ಜಯರಾಮ್ ರವರ ತೋಟದ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವರದಿ: ತುರುವೇಕೆರೆ ಮಂಜುನಾಥ್.
https://www.janataa24.com/ballari-ballari-lok-sabha-constituency-candidate/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv