Janataa24 NEWS DESK
Tumkur: ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ ಎನ್ ಡಿ ಎ ಅಭ್ಯರ್ಥಿ ವಿ ಸೋಮಣ್ಣ.

ತುಮಕೂರು : ಕರ್ನಾಟಕದಲ್ಲಿ ಅಧಿಕಾರ ಗದ್ದುಗೆಯಲ್ಲಿ ಅಧಿಕ ಬಹುಮತಗಳ ಪಡೆದು ಆಡಳಿತ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಟ್ಟಿ ಹಾಕಲು ಎನ್ ಡಿ ಎ ಜೊತೆ ಜೆಡಿಎಸ್ ಮೈತ್ರಿಯಾಗಿ ಕರ್ನಾಟಕದ 28 ಲೋಕ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುತ್ತಿದೆ.ಟಿಕೆಟ್ ತಪ್ಪಿದ ಕೆಲ ಆಕಾಂಕ್ಷಿಗಳನ್ನಾ ಬಂಡಾಯವೇಳದೇ ಪಕ್ಷದ ಬಲೆಗೆ ಬೀಸಿ ಮಾತು ಕಥೆಗಳ ಮೂಲಕ ಶಮನಗೊಳಿಸಿದ್ದಾರೆ. ಅಭ್ಯರ್ಥಿಗಳು ಎಲ್ಲರನ್ನೂ ಮನವೊಲಿಸಿ ಅದ್ದೂರಿ ಬೃಹತ್ ರೋಡ್ ಶೋಗಳು ಶಕ್ತಿ ಪ್ರದರ್ಶನಗಳ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದಾರೆ.
ತುಮಕೂರು(Tumkur) ಲೋಕಸಭಾ ಕ್ಷೇತ್ರದ ಎನ್ ಡಿ ಎ(NDA) ಅಭ್ಯರ್ಥಿಯಾದ ವಿ ಸೋಮಣ್ಣನವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಅರ್ ಅಶೋಕ ಸಂಸದ ಬಸವರಾಜು (Basavaraju)ಅವರೊಂದಿಗೆ ಸಾವಿರಾರು ಮೈತ್ರಿ ಕಾರ್ಯಕರ್ತರೊಂದಿಗೆ ದೊಡ್ಡದಾಗಿ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮಚ್ಚಿ ಜನರ ಅಭೂತ ಪೂರ್ವ ಬೆಂಬಲ ಸಿಗುತ್ತಿದ್ದು ಈ ಬಾರಿ ಮತ್ತೊಮ್ಮೆ ಅವರನ್ನಾ ನಾವು ಪ್ರಧಾನಿ ಮಾಡಿ ಅವರ ಕೈ ಬಲಪಡಿಸಬೇಕು. ರಾಜ್ಯ ಕಾಂಗ್ರೆಸ್ ರೈತರಿಗೆ ಒಂದರ ಮೇಲೊಂದು ಮೋಸ ಮಾಡುತ್ತಿದೆ ನಾವು ನೇರವಾಗಿ ರೈತರಿಗೆ ಸೌಲಭ್ಯ ಕೊಡುತ್ತಿದ್ದೇವು ಆದರೇ ಸಿದ್ದರಾಮಯ್ಯ ಸರ್ಕಾರ ತಡೆಹಿಡಿದು ಇದೆ.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ನಾವು ಈ ಬಾರಿ ಎನ್ ಡಿ ಎ ಜೊತೆ ಮೈತ್ರಿಯಾಗಿ ಜಾತಿ ಧರ್ಮ ಬದಿಗಿಟ್ಟು ದೇಶದ ಅಭಿವೃದ್ದಿ ದೇಶದ ರಕ್ಷಣೆಯ ಕವಚವಾಗಿ ನಿಲ್ಲಬೇಕು ಆಗಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೈ ಜೋಡಿಸಿದ್ದೇವೆ. ಇಲ್ಲಿನ ಜನಸ್ತೋಮ ನೋಡಿದರೆ ಸೋಮಣ್ಣನವರ ಗೆಲುವು ಖಚಿತ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಕಾಲಿಟ್ಟ ಕ್ಷಣದಿಂದಲೇ ಬರಗಾಲ ಆವರಿಸಿದೆ.ಇದು ಅವರ ಕಾಲ್ಗುಣ ನಮ್ಮ ಸರ್ಕಾರ ಬಂದ ದಿನಗಳಲ್ಲೇ ಒಳ್ಳೆ ಮಳೆ ಬೆಳೆ ಆಗಿತ್ತು ಎಂದು ವಿಪಕ್ಷ ನಾಯಕ ಅಭಿಪ್ರಾಯ ಪಟ್ಟರು.
ಅಭ್ಥರ್ಥಿ ಸೋಮಣ್ಣ ಮಾತನಾಡಿ ದೇಶದ ಮಾಜಿ ಪ್ರಧಾನಿ ಮಾಜಿ ಮುಖ್ಯಮಂತ್ರಿಗಳು ಸಚಿವರು ಎಲ್ಲರೂ ಒಟ್ಟಿಗೆ ಪಕ್ಷ ಬೇದ ಮರೆತು ಮೈತ್ರಿ ಮಾಡಿಕೊಂಡು ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಶಪಥ ಮಾಡಿದ್ದಾರೆ. ದೇಶ ಸೂಕ್ತವಾಗಿ ನಡೆಸಲು ಒಬ್ಬ ಸಮರ್ಥ ನಾಯಕ ಬೇಕು ಆ ನಾಯಕ ನರೇಂದ್ರ ಮೋದಿ
ಆಗಾಗಿ ನೀವೆಲ್ಲ ಈ ಬಾರಿ ನನಗೆ ಮತನೀಡುವ ಮೂಲಕ ಭವಿಷ್ಯದ ಕನಸಿನ ಭಾರತ ಹೆಮ್ಮಯ ಪ್ರಧಾನಿ ನರೇಂದ್ರ ಮೋದಿಯವರನ್ನು ಮೊತ್ತೊಮ್ಮೆ ಪ್ರಧಾನಿ ಮಾಡಲು ಇದೇ ಏಪ್ರಿಲ್ 26ರಂದು ಬಿಜೆಪಿ ಗುರುತಿನ ಮುಂದೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ನಮ್ಮ ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಶಾಸಕ ಜ್ಯೋತಿಗಣೇಶ್ ಸಂಸದ ಬಸವರಾಜು ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾಜಿ ಸಚಿವ ಜನಾರ್ಧನ ರೆಡ್ಡಿ ಬಿಸಿ ನಾಗೇಶ್ (BC Nagesh)ಸುರೇಶ್ ಗೌಡ ಎಂಟಿ ಕೃಷ್ಣಪ್ಪ ಮಸಾಲ ಜಯರಾಮ್ ಸುಧಾಕರ್ ಲಾಲ್ ಅನಿಲ್ ಕುಮಾರ್ ಮತ್ತಿತ್ತರು ಉಪಸ್ಥಿತರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Vijayapura : ನಿನ್ನೆ ಕೊರೆಸಿದ್ದ ಕೊಳವೆಬಾವಿಗೆ ಇಂದು ಬಿದ್ದ ಎರಡು ವರ್ಷದ ಮಗು ಸಾವು