JANATAA24 NEWS DESK
Tiptur: ವಿಶ್ವ ದಾಖಲೆ ಮಾಡಿದ 10ನೇ ತರಗತಿ ಕುಮಾರಿ ಲೇಖನ ಎ. ಆರ್.

ತಿಪಟೂರು: ತಾಲೂಕಿನ ನೊಣವಿನಕೆರೆ ಗ್ರಾಮದ ವಾಸಿಯಾದ ರಾಜಣ್ಣ ಎ.ಎನ್ ಮತ್ತು ಲತಾ ಎನ್. ಪಿ ಅವರ ಮಕ್ಕಳಾದ ಗೌತಮಿ ಎ.ಆರ್ ಮತ್ತು ಲೇಖನ ಎ.ಆರ್, ಇವರ ದ್ವಿತೀಯ ಪುತ್ರಿ ಎ.ಆರ್.ಲೇಖನಾ (10 ವರ್ಷ ) ಕಲ್ಪತರು ಸೆಂಟ್ರಲ್ ಸ್ಕೂಲ್ ತಿಪಟೂರು ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ತನ್ನ
ಅಸಾಮಾನ್ಯ ನೆನಪಿನ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ಮಾಡಿದ್ದಾರೆ.
ಲೇಖನಾ2024 ರಲ್ಲಿ ಭಗವಾನ್ ಶ್ರೀರಾಮನ 100 ಪೂರ್ವಜರ ಹೆಸರನ್ನು 2 ನಿಮಿಷ 51 ಸೆಕೆಂಡ್‌ಗಳಲ್ಲಿ ಪಠಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಹಾಗೇ 2025ನೇ ಸಾಲಿನಲ್ಲಿ 5 ನಿಮಿಷ 20 ಸೆಕೆಂಡ್ ಗಳಲ್ಲಿ ಭಾರತದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ವೇಗವಾಗಿ ಹೆಸರಿಸಿದ ಮಗು ಎಂಬ ದಾಖಲೆ ನಿರ್ಮಿಸಿದ್ದಾರೆ.
ಎರಡು ತಿಂಗಳಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ಎಲ್ಲವನ್ನು ಕಲಿತು ವಿಶ್ವ ದಾಖಲೆ ಮಾಡಿದ್ದಾರೆ.
1. ಶ್ರೀರಾಮನ 100 ಪೀಳಿಗೆಯ ವಂಶವೃಕ್ಷ,
2.ಮಹಾಭಾರತ ವಂಶವೃಕ್ಷ,
3.ಪಿರಿಯಾಡಿಕ್ ಟೇಬಲ್ 118 ಕೆಮಿಕಲ್ ನೇಮ್
ಆ್ಯಂಡ್ ಸಿಂಬಲ್ಸ್,
4. 120 ಕೆಮಿಕಲ್ ನೇಮ್ ಆ್ಯಂಡ್ ಫಾರ್ಮುಲ,
5. 100 ಪ್ರಸಿದ್ಧ ಪಿತಾಮಹರು,
6. 543 ಲೋಕಸಭಾ ಕ್ಷೇತ್ರಗಳ ಹೆಸರು,
7. ಈವರೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ವರ್ಷ,
ಸ್ಥಳ, ಅಧ್ಯಕ್ಷರ ಹೆಸರು,
8. 101 ಕೌರವರ ಹೆಸರು,
9. 224 ವಿಧಾನಸಭಾ ಕ್ಷೇತ್ರಗಳ ಹೆಸರುಗಳು
10. ಪುರಾತನ ಕಾಲದ 64 ವಿದ್ಯೆಗಳು,
11. 1ರಿಂದ 30ರವರೆಗೆ ಮಗ್ಗಿ,
12. ಕನ್ನಡ ಅಂಕಿ ಒಂದರಿಂದ ದಶ ಅನಂತದವರೆಗೆ,
13. ಅಂಬೇಡ್ಕರ್‌ಗೆ ಇರುವ 64 ಬಿರುದುಗಳು,
14. ಮಲೆ ಮಹದೇಶ್ವರ ಬೆಟ್ಟ ಸಾಲಿನಲ್ಲಿರುವ 77 ಮಲೆಗಳ ಹೆಸರು,
15. ಭಾರತದಲ್ಲಿನ ರಾಜ್ಯಗಳು ಮತ್ತು ಅದರ
ರಾಜಧಾನಿ ಹೆಸರು,
16. 50 ಮಹರ್ಷಿಗಳ ಹೆಸರು,
17. 50 ವಚನಕಾರರ ಹೆಸರು ಮತ್ತು ಅಂಕಿತನಾಮ,
18. 20 ವಚನಗಳು
19. ಕೆಲವು ಜಿಲ್ಲೆಗಳಿರುವ ವಿಶೇಷ ಹೆಸರುಗಳು
20. ಪ್ರಾಚೀನ ಕಾಲದ 64 ವಿದ್ಯೆಗಳು
21. 25 ಗೀತೆಗಳು ( ಜನಪದ ಗೀತೆ,ಭಾವಗೀತೆ, ಭಕ್ತಿ ಗೀತೆ ಕರೋಕೆ ಸಾಂಗ್ಸ್ )
22. 10 ನಾಟಕದ ತುಣುಕುಗಳು. ( 3 ರಿಂದ 7 ನಿಮಿಷದ ಸಂಭಾಷಣೆ )
ಇವುಗಳನ್ನು ಕಣ್ಣು ಮುಚ್ಚಿ ಪಠಿಸುವ ಮೂಲಕ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್,
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್,
ನೊಬೆಲ್ ವರ್ಲ್ಡ್ ರೆಕಾರ್ಡ್ಸ್,
ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್
ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್
ಹೈ – ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ
ವಿಶ್ವ ದಾಖಲೆ ಮಾಡಿದ್ದಾರೆ.
ಲೈವ್ ನ್ಯಾಷನಲ್ ಸ್ಪೆಷಲ್ ಟಾಲೆಂಟ್ ಶೋನ ವಿನ್ನರ್
ನ್ಯಾಷನಲ್ ಲೆವೆಲ್ ಕಾಂಪಿಟೇಶನ್ ವಿನ್ನರ್ ಆಗಿದ್ದಾರೆ.
ಸೋಮೆಕಟ್ಟೆ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನ ಮಠ ನೊಣವಿನಕೆರೆ ಇವರು ” ಜ್ಞಾನ ಭಂಡಾರ ರತ್ನ ” ಎಂಬ ಬಿರುದು ನೀಡಿದ್ದಾರೆ.
Tiptur: ಕನ್ನಡ ರಾಜ್ಯೋತ್ಸವದ ಮಹತ್ವ ತಿಳಿಸಿದ ಕುಮಾರಿ ಲೇಖನ ಎಂ.ಆರ್
ಕೇರಾ ಮತ್ತು ಪ್ರಿಂಟ್ ಮೀಡಿಯಾ ವರದಿಗಾರರ ಸಂಘದ ವತಿಯಿಂದ ತಿಪಟೂರು ನಗರದ ಗ್ರಾಂಡ್ ಹೋಟೆಲ್ ನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕುಮಾರಿ ಲೇಖನವರನ್ನ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಇದೇ ಸಂದರ್ಭದಲ್ಲಿ ಲೇಖನ ಎಂ.ಎನ್ ರವರು ಮಾತನಾಡಿ
ಕರ್ನಾಟಕವು ಆರಂಭದಲ್ಲಿ ಮೈಸೂರು ಪ್ರಾಂತ್ಯವಾಗಿತ್ತು. 1950ರಲ್ಲಿ ಭಾರತ ಗಣರಾಜ್ಯವಾದ ಮೇಲೆ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರೂಪುಗೊಂಡವು. ಆ ಸಮಯದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯವು ಮೈಸೂರು ರಾಜ್ಯವಾಗಿ ಉದಯವಾಯಿತು. ಮೈಸೂರು ರಾಜ್ಯವು 1956ರ ನವೆಂಬರ್ 1ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಹೀಗೆ ನಾಲ್ಕು ವಿಭಾಗವಾಗಿದ್ದ ಅಂದಿನ ಪ್ರಾಂತ್ಯಗಳು ನವೆಂಬರ್ 1 ರಂದು ಅಧಿಕೃತವಾಗಿ ಒಂದಾದವು. ಕನ್ನಡ ಭಾಷೆ ಮಾತನಾಡುವ ಎಲ್ಲಾ ಜನರಿರುವ ಪ್ರಾಂತ್ಯವನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನಾಗಿ ಮಾಡಿದ ದಿನವಿದು.
ಕನ್ನಡದ ಕುಲಪುರೋಹಿತ ಎಂದೇ ಕರೆಸಿಕೊಳ್ಳುವ ಆಲೂರು ವೆಂಕಟರಾವ್ ಅವರು 1905ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯನ್ನು ಆರಂಭಿಸುತ್ತಾರೆ. ಆದರೆ 1950ರಲ್ಲಿ ಭಾರತವು ಗಣರಾಜ್ಯವಾದ ಮೇಲಷ್ಟೇ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ಪರಿವರ್ತನೆಗೊಂಡವು. ರಾಜರ ಆಳ್ವಿಕೆಯ ಕಾಲದಲ್ಲಿ ದಕ್ಷಿಣ ಭಾರತದಲ್ಲಿದ್ದ ಹಲವು ಸಂಸ್ಥಾನಗಳು ಭಾಷೆಯ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಸಂದರ್ಭದಲ್ಲಿ ಕನ್ನಡ ಮಾತನಾಡುವ ಪಾಂತ್ರ್ಯವು ಮೈಸೂರು ರಾಜ್ಯವಾಗಿ ಉದಯವಾಯಿತು
1956 ನವೆಂಬರ್ 1ರಂದು ಕನ್ನಡ ಭಾಷಿಗರಿಗಾಗಿ ಒಂದು ರಾಜ್ಯ ಉದಯವಾದ ಹಿನ್ನೆಲೆ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕನ್ನಡ ಚಳವಳಿ ಹೋರಾಟಗಾರ ಎಂ. ರಾಮಮೂರ್ತಿ ಅವರು ಮೊದಲ ಬಾರಿಗೆ ಕೆಂಪು–ಹಳದಿ ಬಣ್ಣದ ಕನ್ನಡ ಬಾವುಟ ತಯಾರಿಸಿ ಬಳಸಿದ್ದರು. ಅದು ಕರ್ನಾಟಕದ ಬಾವುಟವಾಗಿ ಇಂದಿಗೂ ರಾಷ್ಟ್ರ, ರಾಜ್ಯಗಳಲ್ಲಿ ರಾಜಾಜಿಸುತ್ತಿದೆ.
ಹೀಗೆ ಕೆಲವು ವರ್ಷಗಳ ಕಾಲ ಮೈಸೂರು ರಾಜ್ಯವಾಗಿದ್ದು, 1973, ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ ಕರ್ನಾಟಕದ ಎಂದು ನಾಮಕರಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಕನ್ನಡ ನಾಡು ಅಥವಾ ಕರ್ನಾಟಕ ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಗಣ್ಯರು, ಮುಖಂಡರುಗಳು ಹಾಗೂ ಸಂಘಟನೆಗಳು ಮುಖಂಡರುಗಳು, ಮಹಿಳೆಯರು, ಪದಾಧಿಕಾರಿಗಳು, ವಿಶೇಷವಾಗಿ ಅಸಾಮಾನ್ಯ ಜ್ಞಾನ ಹೊಂದಿರುವ 10ನೇ ತರಗತಿ ಪುಟ್ಟ ಬಾಲಕಿ ಲೇಖನವರನ್ನು ನೋಡಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿ ಆ ಹುಡುಗಿಯ ಜೊತೆ ಫೋಟೋ ತೆಗೆದುಕೊಂಡರು. ಹಾಗೂ ಅವರ ತಂದೆ ತಾಯಿಯವರೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.