JANATAA24 NEWS DESK
Tiptur: ದಲಿತ ವಿದ್ಯಾರ್ಥಿನಿಯ ಸಾವಿಗೆ ಬೆಲೆ ಇಲ್ಲವೇ-ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ.ಕೈಕಟ್ಟಿ ಕುಳಿತ ಪೊಲೀಸ್ ಇಲಾಖೆ.ಬಡ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸುವವರು ಯಾರು?
ಕರ್ನಾಟಕ ಭೀಮ್ ಸೇನೆ ಮೊರೆ ಹೋದ ಬಡ ಕುಟುಂಬ.

ತಿಪಟೂರು :ತಾಲೂಕು ತಾಲೂಕು ಹಾಲ್ಕುರಿಕೆ ಗ್ರಾಮದ ಶ್ರೀ ತರಳಬಾಳು ಜಗದ್ಗುರು ಸಂಸ್ಥಾನ ಮಠದಿಂದ ನಡೆಯುತ್ತಿರುವ ಪ್ರೌಢಶಾಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ 9ನೇ ತರಗತಿ ಸಿಂಚನ ಎಂಬಾಕೆ
ಶಿಕ್ಷಕಿ ಶಿಲ್ಪ ಹಾಗೂ ಶಿಕ್ಷಕ ಹನುಮಂತಪ್ಪ ಎಂಬವರು ಪ್ರೀತಿಯ ವಿಚಾರವಾಗಿ ಶಾಲೆಯ ಆವರಣದಲ್ಲಿ ಬೈದೆದ್ದರಿಂದ ಮನನೊಂದು ಬಾಲಕಿ ಸಿಂಚನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಮಾತನಾಡಿದ ತಂದೆ ಧನಂಜಯ ನಮ್ಮ ಹುಡುಗಿಯೂ ಯಾವುದೇ ಪ್ರೀತಿ ಪ್ರೇಮದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಶಾಲೆಯಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದೂ ಆದರೆ ಶಿಕ್ಷಕರು ಪ್ರೇಮ ಪತ್ರದ ವಿಚಾರವಾಗಿ ಶಾಲೆಯ ಆವರಣದಲ್ಲಿ ಬೈದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಪೊಲೀಸರು ನಮ್ಮ ಮಗಳ ಮೇಲೆ ಲವ್ ಲೆಟರ್ ಬರೆದ ವಿದ್ಯಾರ್ಥಿಯ ಮೇಲೆ ಕೇಸು ದಾಖಲಿಸಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ.
ನಾವು ನಮ್ಮ ಮಗಳ ಸಾವಿಗೆ ಶಿಕ್ಷಕರು ಕಾರಣ ಎಂದು ಕಂಪ್ಲೇಂಟ್ ನೀಡಿದ್ದರು ಪೊಲೀಸರು ಈ ಪ್ರಕರಣದಲ್ಲಿ ಶಿಕ್ಷಕರನ್ನು ಹೊರಗಿಟ್ಟು ಕೇವಲ ವಿದ್ಯಾರ್ಥಿಯ ಮೇಲೆ ಎಫ್ಐಆರ್ ದಾಖಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುವುದು ಪೊಲೀಸರ ಮೇಲೆ ಅನುಮಾನ ಮೂಡುವಂತೆ ಮಾಡುತ್ತಿದೆ.
ಶಿಕ್ಷಕರ ಬೈಗುಳದಿಂದ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಇದರ ವಿಚಾರವಾಗಿ ಮೃತ ಸಿಂಚನ ತನ್ನ ಅಕ್ಕನಿಗೆ ಸಾಯುವ ಮುನ್ನ ಸಂಪೂರ್ಣ ಮಾಹಿತಿಯನ್ನು ಕೂಡ ನೀಡಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ
&nbs
p;
ಈ ನಡುವೆ ಬಾಲಕಿಯ ಸಾವಿಗೂ ಶಾಲೆಯ ಒಬ್ಬ ಶಿಕ್ಷಕರು ಬರದೇ ಇರುವುದು ತಮ್ಮ ತಪ್ಪನ್ನು ಎಲ್ಲಿ ಪ್ರಶ್ನೆ ಮಾಡುತ್ತಾರೋ ಅನ್ನೋ ಭಯ ಕಾಡುತ್ತಿದೆ ಎಂದು ತಂದೆ ಧನಂಜಯ ಆರೋಪಿಸಿದರು.
ಈ ಕುರಿತು ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಮಾತನಾಡಿ ಈ ಕೂಡಲೇ ಬಾಲಕಿಯ ಸಾವಿಗೆ ಕಾರಣರಾದವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ತನಿಖೆ ಮಾಡಿ ಶಿಕ್ಷೆ ಕೊಡಿಸದೆ ಇದ್ದಲ್ಲೇ ತುಮಕೂರು ಜಿಲ್ಲಾ ಬಂದ್ ಮಾಡಲಾಗುವುದಾಗಿ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಗೆ ಎಚ್ಚರಿಸಿದರು.
ವರದಿ :ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.