Janataa24 NEWS DESK
Tiptur: ವಿದ್ಯುತ್ ಸುರಕ್ಷತಾ ಸಪ್ತಾಹ | ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ವಿದ್ಯುತ್ ಇಲಾಖೆ.
ತಿಪಟೂರು: ನಗರದ ಮುಖ್ಯ ರಸ್ತೆಗಳಲ್ಲಿ ಇಂದು ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಅಂಗವಾಗಿ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು. ರಸ್ತೆ ಬದಿಯಲ್ಲಿ ಸುರಕ್ಷತಾ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು.
ವಿಶೇಷವಾಗಿ ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳಿಗೆ ತಂತಿಯನ್ನು ಕಟ್ಟಿ ಬಟ್ಟೆ ಒಣಗಿಸುವುದು, ಜಾನುವಾರುಗಳನ್ನು ಕಂಬಕ್ಕೆ ಕಟ್ಟುವುದು ಇವುಗಳಿಂದ ಹೆಚ್ಚಿನ ವೋಲ್ಟೇಜ್ ಕಾರಣದಿಂದ ಆಕಸ್ಮಿಕ ಅಪಾಯ ಸಂಭವಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಯಿತು.
ಮಳೆಗಾಲದಲ್ಲಿ ಭಾರೀ ಗಾಳಿ ಮಳೆಗೆ ಬಿದ್ದ ವಿದ್ಯುತ್ ಕಂಬಗಳು ಅಥವಾ ಕೆಳಗೆ ಬಿದ್ದಿರುವ ಎಲೆಕ್ಟ್ರಿಕ್ ತಂತಿಗಳನ್ನು ಮುಟ್ಟಬಾರದು, ಹಸಿ ಕೈಗಳಿಂದ ಸ್ವಿಚ್ ಬೋರ್ಡ್‌ಗಳನ್ನು ಆನ್/ಆಫ್ ಮಾಡಬಾರದು, ವಿದ್ಯುತ್ ಸಂಪರ್ಕ ಇರುವ ಭಾಗಗಳಿಗೆ ಮಕ್ಕಳನ್ನು ಹತ್ತಿರಕ್ಕೆ ಬಿಡಬಾರದು. ವಿದ್ಯುತ್ ನಿಂದ ನಮಗೆ ಅಪಾಯ ಇರುತ್ತದೆ ಇಂತಹ ಸಮಯದಲ್ಲಿ ಅದರಲ್ಲಿಯೂ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು. ಎಂದು ವಿದ್ಯುತ್ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ವಿದ್ಯುತ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಜನರಿಗೆ ವಿವರವಾಗಿ ಮಾಹಿತಿ ನೀಡಿದರು. ವಿದ್ಯುತ್ ಅಪಘಾತಗಳನ್ನು ತಪ್ಪಿಸಲು ಈ ರೀತಿಯ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು ಅತ್ಯಗತ್ಯವೆಂದು ಸ್ಥಳೀಯ ನಾಗರೀಕರು ಅಭಿಪ್ರಾಯಪಟ್ಟರು.
ವರದಿ:ಮಂಜುನಾಥ್ ಡಿ,ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.