Tiptur: ಕೊಳಚೆ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯ– ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್.

JANATAA24 NEWS DESK 

 

 

 

Tiptur: ಕೊಳಚೆ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯ– ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್.

 

Tiptur: Demand for solution to sewage problem – JDS leader K.T. Shanthakumar.

Tiptur:ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೆ ಹೋರಾಟ.

 

ಹೋರಾಟದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಯ ದಲಿತ ಪರ ಸಂಘಟನೆಗಳು ಸಾತ್.

 

ತಿಪಟೂರು: ಈಚನೂರು ಕೆರೆಗೆ ಕಲುಷಿತ ನೀರು ಸೇರುತ್ತಿದೆ ಹಾಗೂ ತಿಪಟೂರು ಜನತೆಗೆ ಕುಡಿಯುವ ನೀರಿಗಾಗಿ ಹೋರಾಟ ನೆಡಲಾಯಿತು.

ಕೆಂಪಮ್ಮ ದೇವಸ್ಥಾನದಿಂದ ಹೊರಟ ಮೆರವಣಿಗೆ ದೊಡ್ಡಪೇಟೆ ರಸ್ತೆ ಮಾರ್ಗವಾಗಿ ನಗರ ಸಭೆ ವೃತ್ತದವರಗು ನಗರಸಭೆ ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಕೂಗುತ್ತಲೇ ಹೋರಾಟ ಮಾಡಲಾಯಿತು .

 

ಹೋರಾಟಗಾರರ ಮನವಿ ಸ್ವೀಕಾರ ಮಾಡಲಿಕ್ಕೆ ನಗರಸಭೆ ಆಯುಕ್ತರು ಬರದ ಕಾರಣ ಜೆಡಿಎಸ್ ಮುಖಂಡ ಶಾಂತಕುಮಾರ್ ರಸ್ತೆಯಲ್ಲಿ ಕುಳಿತು ಅಧಿಕಾರಿಗಳ ವಿರುದ್ಧ ಬಾರಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಲ್ಲಿನ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳು ರಸ್ತೆ ಮೇಲೆ ಕುಳಿತು ರಸ್ತೆಯನ್ನು ಬಂದ್ ಮಾಡಲು ಮುಂದಾದರು ಆಗ ಪೊಲೀಸ್ ಅಧಿಕಾರಿಗಳು ಮನವೊಲಿಸಲು ಪ್ರಯತ್ನ ಪಟ್ಟರು. ಸುಮಾರು ಎರಡು ಗಂಟೆಗಳ ತನಕ ರೋಡ್ ಚಾಮ್ ಆಗಿ ಸವಾರರಿಗೆ ತುಂಬಾ ಸಮಸ್ಯೆ ಎದುರಾಯಿತು. ನಂತರ ನಗರಸಭೆ ಆಯುಕ್ತ ವಿಶ್ವೇಶ್ವರ್ ಬದರಗಡೆ ಆಗಮಿಸಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕೆಲವು ಮಾತಿನ ಚಕಮಕಿ ನಡೆಯಿತು.

ನಂತರ ಜೆಡಿಎಸ್ ಮುಖಂಡ ಶಾಂತಕುಮಾರ್ ಹಾಗೂ ಹೋರಾಟಗಾರರಿಗೆ ನಗರಸಭೆ ಆಯುಕ್ತರು ಒಂದು ತಿಂಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಜೆಡಿಎಸ್ ಮುಖಂಡ ಶಾಂತಕುಮಾರ್ ಅವರಿಗೆ ತಿಳಿಸಿದರು. ನಂತರ ಹೋರಾಟವನ್ನು ನಿಲ್ಲಿಸಲಾಯಿತು.

ನಂತರ ಒಂದು ತಿಂಗಳಾದರೂ ನಗರಸಭೆ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಲು ಅಸಾಧ್ಯವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ ಶಾಂತಕುಮಾರ್ ತಿಳಿಸಿದರು.

ತಿಪಟೂರು ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ನಗರಸಭೆ ವಿಫಲವಾಗಿದೆ. ಕುಡಿಯುವ ನೀರಿಗೆ ಜನರು ಪರದಾಡ ಬೇಕಾದ ಪರಿಸ್ಥಿತಿ ಉಂಟು ಮಾಡಿರುವ ನಗರಸಭೆ ಹಾಗೂ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ನಗರಸಭೆ ವೃತ್ತದ ಬಳಿ ರಸ್ತೆಗಳಿದು ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್, ಶಾಸಕರ ಆಡಳಿತ ವೈಫಲ್ಯದ ಪರಿಣಾಮ ನಗರದ ಜನ ಕುಡಿಯುವ ನೀರಿಗೂ ಪರಿತಪಿಸಬೇಕಾಗಿದೆ. ಯುಜಿಡಿ ನೀರು ಈಚನೂರು ಕೆರೆ ಸೇರಿದ ಪರಿಣಾಮ ಕಲುಷಿತ ನೀರು ಸೇವಿಸಬೇಕಾಗಿದೆ ಎಂದರು.

 

ನಗರಸಭೆ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ನಗರವಾಸಿಗಳ ಸಮಸ್ಯೆ ಆಲಿಸದೆ ಆಡಳಿತ ನಡೆಸುತ್ತಿದೆ. ಪ್ರತಿವರ್ಷ ಸಾವಿರಾರು ರೂಪಾಯಿ ತೆರಿಗೆ ಪಡೆಯುವ ನಗರಸಭೆ ಕುಡಿಯುವ ನೀರು ಹಾಗೂ ಮೂಲ ಸೌಕರ್ಯ ಒದಗಿಸಲು ವಿಫಲವಾಗಿದೆ. ಇಷ್ಟೊಂದು ನೀರಿನ ಸಮಸ್ಯೆ ಉಂಟಾದರೆ ಮುಂದಿನ ತಿಂಗಳಿನಲ್ಲಿ ಜನ ಜಾನುವಾರು ಕುಡಿಯುವ ಕಲುಷಿತ ನೀರಿನಿಂದ ಜೀವಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂದರು.

 

ಈ ವರ್ಷದ ಬಜೆಟ್‌ನಲ್ಲಿ ಒಂದು ನಯಾಪೈಸೆಯನ್ನು ತಾಲ್ಲೂಕಿಗೆ ಶಾಸಕರು ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ತಿಪಟೂರಿನ ಬಹುತೇಕ ರಸ್ತೆ ಗುಂಡಿ ಬಿದ್ದು ಅಪಘಾತಕ್ಕೆ ಆಹ್ವಾನಿಸಿ ಯಮ ಸ್ವರೂಪಿಯಾಗಿವೆ. ಯೂಜಿಡಿ ಸಮಸ್ಯೆಗೆ ಪರಿಹಾರ ನೀಡಿ ಶಾಸಕರೇ. ನಗರಸಭೆ ಪೌರಾಯುಕ್ತರು ಸಾರ್ವಜನಿಕ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಂತಹ ಪೌರಾಯುಕ್ತರು ನಮಗೆ ಬೇಕಿಲ್ಲ ಕೂಡಲೇ ವರ್ಗಾವಣೆ ಮಾಡಿಸಿ ಇಲ್ಲದೆ ಹೋದರೆ ನಗರಸಭೆ ಮುಂಭಾಗ ಉಪವಾಸ ಸತ್ಯಾಗ್ರಹವನ್ನು ನಡೆಸುವ ಎಚ್ಚರಿಕೆ ನೀಡಿದರು.

 

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತಿಘಟ್ಟ ಶಿವಸ್ವಾಮಿ ಮಾತನಾಡಿ, ನಗರದ ಎಲ್ಲ ವಾರ್ಡಗಳಲ್ಲಿಯೂ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈಚನೂರು ಕೆರೆ ಕಲುಷಿತವಾಗಿದ್ದು ಈ ನೀರು ಕುಡಿದರೆ ಅಪಾಯಕಾರಿ ರೋಗಗಳು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಹಣ ಖರ್ಚು ಮಾಡಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಖಜಾನೆ ಖಾಲಿಯಾಗಿದೆ, ಯುಜಿಡಿ ಕೇವಲ ಹಣ ನುಂಗಲು ದಾರಿ ಮಾಡಿಕೊಂಡಿದ್ದಾರೆ. ಕೊಳಚೆ ನೀರಿನಿಂದ ತಿಪಟೂರು ಮರ್ಯಾದೆ ರಾಜ್ಯದಲ್ಲಿ ಹರಾಜು ಮಾಡಿದ್ದಾರೆ. ಹಾಗೂ ರಸ್ತೆ ಗೊಂಡಿ ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲ. ಜಿಲ್ಲಾಧಿಕಾರಿ ಗಳೇ ನಗರದ ಯೂಜಿಡಿ ಸಮಸ್ಯೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು .

 

ಪ್ರತಿಭಟನೆಯಲ್ಲಿ ಮುಖಂಡರಾದ ಸುದರ್ಶನ್, ಷಡಕ್ಷರಿ, ನಗರಾಧ್ಯಕ್ಷರಾಜು, ಎಸ್ .ಸಿ. ಘಟಕದ ಅಧ್ಯಕ್ಷ ಧನಂಜಯ್ , ನಟರಾಜ್, ರಾಜಶೇಖರ್, ಕರವೇ ಅಧ್ಯಕ್ಷ ಸತೀಶ್ ಮಾರನಗೆರೆ, ಜಕ್ಕನಹಳ್ಳಿ ಮೋಹನ್, ಕವಿತಾ ಮಹೇಶ್, ಅಲ್ಪಸಂಖ್ಯಾತರ ಘಟಕದ ಇಮ್ರಾನ್ ಕೆ, ಹಾಗೂ ಜೆಡಿಎಸ್ ಕಾರ್ಯಕರ್ತರು ವಿವಿಧ ದಲಿತಪರ ಸಂಘಟನೆಗಳು ಹೋರಾಟದಲ್ಲಿ ಹಾಜರಿದ್ದರು.

ಮಂಜುನಾಥ್ ಡಿ ತಿಪಟೂರು

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *