Janataa24 NEWS DESK
ಶಿಕ್ಷಣ ಸಚಿವರೆ ಇತ್ತ ಕಡೆ ಸ್ವಲ್ಪ ಗಮನ ಹರಿಸಿ, ಸರ್ಕಾರಿ ಶಾಲೆಯ ಸ್ಥಿತಿ ಏನಾಗಿದೆ ಎಂಬುದನ್ನ.
ಶಿಕ್ಷಣ ಪಡೆಯಲು ಮುಂದಾದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಬೇಡಿ ಹುಲಿಕಲ್ ಪ್ರೌಢಶಾಲೆ ಶಿಕ್ಷಕರೇ.
ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿ ಹುಲಿಕಲ್ ಗ್ರಾಮದಲ್ಲಿ ಸುಮಾರು 40 ವರ್ಷದಿಂದಲೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೂ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಯಲ್ಲಿ ಪ್ರಸಂಗ ಮಾಡಿದ ಅದೆಷ್ಟು ವಿದ್ಯಾರ್ಥಿಗಳು ಉನ್ನತ ಮಟ್ಟದ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ. ಆದರೆ ಇದೇ ಶಾಲೆಯಲ್ಲಿ ಇಂದು ಪ್ರೌಢಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಏಳರಿಂದ ಎಂಟು, ಇದಕ್ಕೆ ಕಾರಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಶಿಕ್ಷಕರು ಎಂಬ ದೂರುಗಳು ಕೆಲ ವಿದ್ಯಾರ್ಥಿಗಳಿಂದ ಮತ್ತು ಗ್ರಾಮಸ್ಥರಿಂದ ಕೇಳಿ ಬರುತ್ತಿದ್ದು, ಶಿಕ್ಷಣ ಕೊಡುವ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಇಲ್ಲಿ ನೀವುಗಳು ಕೇವಲ ಕಡಿಮೆ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಲ್ಲ ವಿದ್ಯಾರ್ಥಿಗಳು ಬೇರೆ ಶಾಲೆಯಲ್ಲಿ ಸೇರಿಕೊಳ್ಳಿ, ಈ ಶಾಲೆಯನ್ನು ಮುಚ್ಚಲಾಗುತ್ತದೆ ಎಂದು ಶಿಕ್ಷಕರೇ ತೀರ್ಮಾನ ಗೊಂಡಂತಿದೆ, ಆದರೆ ತುರುವೇಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ಕೈಗೊಳ್ಳದೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಬೆಂಬಲ ಕೊಟ್ಟು ಈ ರೀತಿ ಶಾಲೆಯನ್ನು ಮುಚ್ಚಲು ಏನಾದರೂ ತೀರ್ಮಾನ ಮಾಡಿದ್ದಾರೆ ಎಂಬ ಕುತೂಹಲಕರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಈಗ ಹುಲಿಕಲ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೇವಲ ಏಳರಿಂದ ಎಂಟು ವಿದ್ಯಾರ್ಥಿಗಳು ಆಗಿದ್ದು, ಇನ್ನು ಎಷ್ಟೋ ವಿದ್ಯಾರ್ಥಿಗಳನ್ನು ಈ ಶಿಕ್ಷಕರೇ ಈ ರೀತಿ ಹೇಳಿ ಕಳುಹಿಸಿರಬಹುದೇ ?. ಈ ಶಾಲೆಗೆ ಸುಮಾರು ಏಳರಿಂದ ಎಂಟು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು ಬರುವ ವಿದ್ಯಾರ್ಥಿಗಳಿಗೆಲ್ಲ ಇದೇ ರೀತಿ ಶಿಕ್ಷಕರೇ ಹೇಳಿದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಏನಾಗಬೇಕು, ಹಾಗಾದರೆ ಸರ್ಕಾರ ಶಿಕ್ಷಣಕ್ಕೆ ಎಷ್ಟರಮಟ್ಟಿಗೆ ಹೊತ್ತು ಕೊಡುತ್ತಿದೆ ಎಂಬುದು ಈ ಶಾಲೆಯ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://janataa24.com/turuvekere-the-taluk-administration-rented-sulakere/