Sonu Gowda: ರೀಲ್ಸ್ ಸ್ಟಾರ್ ಸೋನು ಗೌಡ ಗೆ 14 ದಿನಗಳ ನ್ಯಾಯಾಂಗ ಬಂಧನ.

Janataa24 NEWS DESK

Sonu Gowda: ರೀಲ್ಸ್ ಸ್ಟಾರ್ ಸೋನು ಗೌಡ ಗೆ 14 ದಿನಗಳ ನ್ಯಾಯಾಂಗ ಬಂಧನ.

Sonu srinivas gowda arrested kannada news

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನ ದತ್ತು ಪಡೆದ ಆರೋಪ ಎದುರಿಸುತ್ತಿರುವ ಸೋನು ಶ್ರೀನಿವಾಸ ಗೌಡ ರವರು ಸಧ್ಯ ಪೊಲೀಸರ ವಶದಲ್ಲಿದ್ದು, ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ನಿನ್ನೆ (ಮಾ.24) ರಾಯಚೂರಿನ ಮಸ್ಕಿ(Maski) ತಾಲೂಕಿನ ಕಾಚಾಪುರಕ್ಕೆ ಸೋನು ಗೌಡ ರನ್ನು ಕರೆದುಕೊಂಡು ಬಂದ ಸ್ಥಳ ಮಹಜರು ಮಾಡಿದ್ದಾರೆ. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿ ಅವಸರದಲ್ಲಿ ಗ್ರಾಮದಿಂದ ಹೊರನಡೆದಿದ್ದರು. ಈ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೋನು ಗೌಡ ಇದ್ದ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು.

 

 

ಸ್ಥಳ ಮಹಜರು ಮಾಡಲು ಪೋಲಿಸರು ಭೇಟಿ ನೀಡಿದ ಬಳಿಕ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಜೊತೆ ಮಾತನಾಡಬೇಕು ಎಂದು ಗ್ರಾಮಸ್ಥರು ಗಲಾಟೆ ಮಾಡಿದ್ದರು. ಪೊಲೀಸ್ ಕಾರಿಗೆ ಮುತ್ತಿಗೆ ಹಾಕಿ ಸೋನು ಗೌಡರನ್ನು ನೋಡಲು ನೂಕುನುಗ್ಗಲಾಗಿತ್ತು. ಗ್ರಾಮಸ್ಥರು ಹಾಗೂ ಬಾಲಕಿ ಸಂಬಂಧಿಕರಿಂದ ಮಾಹಿತಿ ಪಡೆದ ಪೊಲೀಸರು ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಸ್ಥಳ ಮಹಜರು ಮುಗಿಸಿ ವಾಪಸ್ ನಿನ್ನೆ ಬೆಂಗಳೂರಿಗೆ ತೆರಳಿದ್ದರು.

 

ಪೊಲೀಸರು ಸ್ಥಳ ಮಹಾಜರು ಮಾಡುವ ವೇಳೆಯಲ್ಲಿ ಮಗುವಿನ ಚಿಕ್ಕಪ್ಪ ಸೋನುಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನ ನಾವು ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣದ ಸಹಾಯ ಮಾಡಿಲ್ಲ.

ನಮ್ಮ ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುವುದಾಗಿ ಮತ್ತು ಉತ್ತಮವಾದ ಭವಿಷ್ಯ ಸಿಗಲಿದೆ ಎಂದು ಮಗುವನ್ನು ಕರೆದುಕೊಂಡು ಹೋಗಿರುವುದಾಗಿರುತ್ತಾರೆ, ಇದೀಗ ಮಗುವನ್ನು ದತ್ತು ಪಡೆದಿರುತ್ತೇನೆ ಎಂದು ವಿಷಯವನ್ನು ತಿರುಚಲಾಗಿರುತ್ತದೆ ಎಂದು ಮಗುವಿನ ಚಿಕ್ಕಪ್ಪ ಆಕ್ರೋಶ ಹೊರ ಹಾಕಿದ್ದಾರೆ.

 

 

https://www.janataa24.com/badami-psi-seized-2-90-lakh-cash-that-was-being-carried-without/

 

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv 

 

Subscribe YouTube 

https://youtube.com/@janataa24?si=XsFcych2GMH0O6Gv

Leave a Reply

Your email address will not be published. Required fields are marked *