JANATAA24 NEWS DESK
Siddaramaiah: ದೇವರಾಜ ಅರಸು ಅಂತಹ ಮಹಾನ್ ನಾಯಕನಿಗೂ ನನಗೂ ಹೋಲಿಕೆ ಸರಿಯಲ್ಲ– CM ಸಿದ್ಧರಾಮಯ್ಯ .

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ. ಅರಸುರವರು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿ. ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 9 ಬಾರಿ ಗೆಲುವು ಸಾಧಿಸಿದ್ದೇನೆ.
ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಅವಿರೋಧವಾಗಿಯೂ ಆಯ್ಕೆಯಾಗಿದ್ದರು.
ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಮುಂದೆ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು.
ಬಜೆಟ್ ತಯಾರಿಯನ್ನು ಸಂಕ್ರಾಂತಿಯ ನಂತರ ಪ್ರಾರಂಭಿಸಲಾಗುವುದು. ಸಂಪುಟ ಪುನರ್ರಚನೆಯ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಈವರೆಗೆ ಸುದೀರ್ಘ ಸಿಎಂ ಹೆಗ್ಗಳಿಗೆ ಭಾಜನರಾಗಿದ್ದ ದೇವರಾಜ ಅರಸು ಅವರ ರೆಕಾರ್ಡ್ ಬ್ರೇಕ್ ಆಗಿದೆ. ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಲೇ ಎಲ್ಲರಿಗಿಂತ ಮುಂದಿದ್ದು, ಅವರ ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
ಸಿದ್ದು ರಾಜ್ಯಭಾರ ದಾಖಲೆ!
ಅತೀ ಹೆಚ್ಚು ಅವಧಿ ರಾಜ್ಯದ ಮುಖ್ಯಮಂತ್ರಿ ದಾಖಲೆ ಬ್ರೇಕ್
ತಮ್ಮದೇ ತವರು ಜಿಲ್ಲೆಯ ಅರಸು ದಾಖಲೆ ಅಳಿಸ್ತಿರುವ ಸಿದ್ದು
20 ಮಾ.1972 – 12 ಜ. 1980ರ ವರೆಗೆ ಅರಸು ರಾಜ್ಯಭಾರ
ಒಟ್ಟು 7 ವರ್ಷ 239 ದಿನಗಳ ಕಾಲ ನಿರಂತರ ಅವಧಿಗೆ ಸಿಎಂ
ಎರಡು ಪ್ರತ್ಯೇಕ ಅವಧಿಯಲ್ಲಿ ಸಿದ್ದರಾಮಯ್ಯ ಮೈಲಿಗಲ್ಲು
13 ಮೇ 2013 – 17 ಮೇ 2018ರ ವರೆಗೆ 5 ವರ್ಷ ಆಡಳಿತ
ಐದು ವರ್ಷ ವಿರಾಮ ಪಡೆದು ಮತ್ತೆ ಅಧಿಕಾರಕ್ಕೇರಿದ್ದ ಸಿದ್ದು
20 ಮೇ 2023 ರಿಂದ ಸಿದ್ದರಾಮಯ್ಯ ಅವಧಿ ಮುಂದುವರಿಕೆ
ಎಸ್. ನಿಜಲಿಂಗಪ್ಪ 7 ವರ್ಷ 175 ದಿನಗಳ ಕಾಲ ಅಧಿಕಾರ
ರಾಮಕೃಷ್ಣ ಹೆಗಡೆ 4ನೇ ಸ್ಥಾನ, 5 ವರ್ಷ 216 ದಿನ ಆಡಳಿತ
ಯಡಿಯೂರಪ್ಪ 5ನೇ ಸ್ಥಾನ, 5 ವರ್ಷ 82 ದಿನ ಅವಧಿಗೆ ಸಿಎಂ.
ಭಾಗ್ಯಗಳ ಕೊಡುಗೆ ಕೊಟ್ಟ ಸಿದ್ದರಾಮಯ್ಯ
2013ರಲ್ಲಿ ಅನ್ನಭಾಗ್ಯ ಜೊತೆ ವಿವಿಧ ಯೋಜನೆ ಜಾರಿ!
ಶಾಲಾ ಮಕ್ಕಳಿಗಾಗಿ ಕ್ಷಿರಭಾಗ್ಯ ಯೋಜನೆಗೆ ಚಾಲನೆ!
ರೈತರಿಗೆ ನೆರವಾಗುವುದಕ್ಕಾಗಿ ಕೃಷಿ ಭಾಗ್ಯ ಯೋಜನೆ!
ವಿದ್ಯಾಸಿರಿ ಯೋಜನೆಯಲ್ಲಿ ವಾರ್ಷಿಕ 1500 ರೂಪಾಯಿ!
2023ರಲ್ಲಿ ಪಂಚ ಗ್ಯಾರಂಟಿಗಳನ್ನ ಜಾರಿಗೆ ತಂದ ಸಿದ್ದು!
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯಕ್ಕೆ ಬಂದ್ಮೇಲೆ ಪ್ರಮುಖವಾಗಿ ಅಹಿಂದ ಸಮುದಾಯವನ್ನ ಒಟ್ಟಾಗಿಸಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.