Janataa24 NEWS DESK
ಮಾರ್ಚ್ 3 ರಿಂದ 6 ನೇ ತಾರೀಕಿನವರೆಗೂ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಹಶೀಲ್ದಾರ್ ವೈ ಎಂ ರೇಣು ಕುಮಾರ್ ಸುದ್ದಿಗೋಷ್ಠಿ.

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ವೈ ಎಂ ರೇಣು ಕುಮಾರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು.ಇದೇ ವೇಳೆ ಮಾತನಾಡಿದ ಅವರು ಮಾರ್ಚ್ 3ನೇ ತಾರೀಖಿನಿಂದ ಆರನೇ ತಾರೀಖಿನವರೆಗೆ
0 ಇಂದ 5 ವರ್ಷದ ಪುಟ್ಟ ಮಕ್ಕಳಿಗೆ ಪೋಲಿಯೋ(PulsePolio) ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದರ ಸಿದ್ಧತೆಯನ್ನು ಈಗಾಗಲೇ ತಾಲೂಕು ಆರೋಗ್ಯ ಇಲಾಖೆ ಬಹಳ ಸನ್ನದ್ಧರಾಗಿ, ಮೊದಲು ಬೂತ್ ಮಟ್ಟದಲ್ಲಿ , 3ನೇ ತಾರೀಕಿನಂದು ನಗರದಲ್ಲಿ ನಂತರ 4 ನಂತರ 4, 5, 6ನೇ ತಾರೀಕಿನವರೆಗೆ ಪ್ರತಿ ಮನೆ ಮನೆಗೆ ತೆರಳಿ ಪಲ್ಸ್ ಪೋಲಿಯೋ ಹನಿಯನ್ನ ಪುಟ್ಟ ಮಕ್ಕಳಿಗೆ ಹಾಕಲಾಗುವುದು ಎಂದರು.
ಮುಂದುವರೆದು ಮಾತನಾಡಿದ ತಹಸಿಲ್ದಾರ್ ವೈ ಎಂ ರೇಣು ಕುಮಾರ್ , ನಮ್ಮ ತುರುವೇಕೆರೆ ತಾಲೂಕಿನಲ್ಲಿ ಒಟ್ಟಾರೆ 90 ಬೂತ್ ಗಳನ್ನ ತೆರೆಯಲಾಗಿದ್ದು, ನಗರದಲ್ಲಿ ಎಂಟು ಬೂತ್ ಗಳು ಮತ್ತು ಗ್ರಾಮೀಣ ಭಾಗದಲ್ಲಿ 82 ಬೂತ್ಗಳನ್ನ ತೆರೆಯಲಾಗಿದೆ ,ತಾಲೂಕಿನಲ್ಲಿರುವ ರೈಲ್ವೆ ಸ್ಟೇಷನ್ ಮತ್ತು ಬಸ್ ನಿಲ್ದಾಣಗಳಲ್ಲೂ ಕೂಡ ಬೂತ್ ಗಳನ್ನ ತೆರೆಯಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸುಮಾರು 20 ಸಿಬ್ಬಂದಿಗಳನ್ನು ಮೇಲ್ವಿಚಾರಕರಾಗಿ ನೇಮಿಸಲಾಗಿದೆ.
ತಾಲೂಕಿನಲ್ಲಿ ಒಟ್ಟಾರೆ 9427 ಮಕ್ಕಳು 0 ಯಿಂದ 5 ವರ್ಷದ ಮಕ್ಕಳಿದ್ದಾರೆ ಎಂದು ಸಮೀಕ್ಷೆ ಮಾಡಲಾಗಿದೆ.
ನಮ್ಮ ಭಾರತ ಸರ್ಕಾರ ಅಂಗ ವಿಕಲತೆಯನ್ನು ತಡೆಗಟ್ಟುವ ಸಲುವಾಗಿ ಈ ಪಲ್ಸ್ ಪೋಲಿಯೋ(PulsePolio) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ದಯಮಾಡಿ ನಮ್ಮ ತಾಲೂಕಿನ ಸಮಸ್ತ ನಾಗರಿಕ ಬಂಧುಗಳು ತಮ್ಮ ತಮ್ಮ ಪುಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಯನ್ನ ಹಾಕಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೆ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ
https://www.janataa24.com/nrega-employment-guarantee-scheme-is-a-non-guaranteed-scheme/