JANATAA24 NEWS DESK
POCSO: ಯುವತಿ ಅಪಹರಣಕ್ಕೆ ಯತ್ನಿಸಿದ ರವಿ ಜಮುನಾ ಎಂಬ ಯೂಟ್ಯೂಬರ್ ಮೇಲೆ ಬಿತ್ತು ಪೋಸ್ಕೋ .

ತುಮಕೂರು ಜಿಲ್ಲೆ ಸಿರಾ ಮೂಲದ ಯೂಟ್ಯೂಬರ್ ರವಿ ಜಮುನಾ ಉರುಫ್ ರವಿಯನ್ನು, ಮಾಗಡಿ ತಾಲೂಕಿನ ತಟವಾಳು ಗೊಲ್ಲರಹಟ್ಟಿ ಗ್ರಾಮದ ಅಪ್ರಾಪ್ತ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ನಿಮಿತ್ತ ಶ್ರೀ ಮೊಬೈಲ್ ಅಂಗಡಿ ಮಾಲೀಕ ವೆಂಕಟೇಶ್ ಅವರು ಸ್ನೇಹಿತರು ಹಾಗೂ ಆಹ್ವಾನಿತರಿಗಾಗಿ ಬರ್ಜರಿ ಬಾಡೂಟ ಮತ್ತು ಮದ್ಯದ ವ್ಯವಸ್ಥೆ ಮಾಡಿದ್ದರು. ಈ ವೇಳೆ ಮದ್ಯ ಸೇವಿಸಿ ತಡರಾತ್ರಿ ಅಮಲಿನಲ್ಲಿದ್ದ ಯೂಟ್ಯೂಬರ್ ರವಿ, ಗೊಲ್ಲರಹಟ್ಟಿ ಗ್ರಾಮಕ್ಕೆ ಕಾರಿನಲ್ಲಿ ಪ್ರವೇಶಿಸಿ, ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ ಬಾಯಿ ಮುಚ್ಚಿ ಕಾರಿನೊಳಗೆ ಎಳೆದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಆದರೆ ಕುಡಿದ ಅಮಲಿನಲ್ಲಿ ದಾರಿ ತಪ್ಪಿದ ಆರೋಪಿ ಗ್ರಾಮದ ಸುತ್ತಮುತ್ತಲೇ ಸುತ್ತಾಡಿದ್ದು, ಕಾರಿನಿಂದ ಮೂತ್ರ ವಿಸರ್ಜನೆಗೆ ಇಳಿದ ವೇಳೆ ಯುವತಿ ತನ್ನ ಮನೆಯವರಿಗೆ ಮೊಬೈಲ್ ಮೂಲಕ ಕರೆ ಮಾಡಿ ರಕ್ಷಣೆ ಕೋರಿದ್ದಾಳೆ.
ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಹಾಗೂ ಯುವತಿಯ ಸಂಬಂಧಿಕರು ವಾಹನಗಳಲ್ಲಿ ಹುಡುಕಾಟ ನಡೆಸಿ, ಹುಲಿಯೂರುದುರ್ಗ–ಮಾಗಡಿ ಮುಖ್ಯರಸ್ತೆಯಲ್ಲಿ ರವಿಯ ಕಾರನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಗ್ರಾಮಸ್ಥರ ವಾಹನ ಕಂಡು ಆರೋಪಿ ಅತೀ ವೇಗವಾಗಿ ಕಾರು ಚಲಾಯಿಸಿ ಮಾಗಡಿ ಕಡೆ ಪರಾರಿಯಾಗಲು ಯತ್ನಿಸಿದ್ದಾನೆ.
ಆದರೆ ಸಿನಿಮೀಯ ರೀತಿಯಲ್ಲಿ ಯುವತಿಯ ಸಂಬಂಧಿಕರು ಸೋಮೇಶ್ವರ ಕಾಲೋನಿ ಬಳಿ ಕಾರನ್ನು ಸಂಪೂರ್ಣವಾಗಿ ತಡೆದು, ಯುವತಿಯನ್ನು ರಕ್ಷಿಸಿ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಅಪಹರಣ, ಲೈಂಗಿಕ ಕಿರುಕುಳ, ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮೊ.ಸಂ. 02/2026 ಅಡಿಯಲ್ಲಿ BNS 137(2), 75, 115(2), 109, 3(5) ಹಾಗೂ ಪೋಕ್ಸೋ ಕಾಯ್ದೆ ಸೆಕ್ಷನ್ 8, 12, 17 ಅಡಿಯಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಆರೋಪಿಯ ಜೊತೆಗೆ ತಡರಾತ್ರಿ ಮದ್ಯಪಾರ್ಟಿಯಲ್ಲಿ ಭಾಗಿಯಾಗಿದ್ದ ಮಂಡ್ಯ ಮೂಲದ ಕೆಂಪ ಎಂಬಾತನನ್ನೂ ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ನಂತರ ಕೆಂಪರಾಜುರವರನ್ನು ಬಿಡುಗಡೆ ಮಾಡಲಾಗಿರುತ್ತದೆ.
ಇನ್ನೂ ಪೊಲೀಸರ ತನಿಖೆಯಿಂದ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಿದೆ.
ಹೊಸ ವರ್ಷದ ಸಂಭ್ರಮದ ನಡುವೆ ನಡೆದ ಈ ಘಟನೆ, ಯುವತಿಯರ ಹಾಗೂ ಅಪ್ರಾಪ್ತರ ಸುರಕ್ಷತೆ ಕುರಿತು ಸಮಾಜ ಮತ್ತಷ್ಟು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವನ್ನು ಮತ್ತೆ ನೆನಪಿಸಿದೆ.ಪೊಲೀಸ್ ಇಲಾಖೆ ಹಾಗೂ ಸರ್ಕಾರ ಎಚ್ಚರ ಗೊಳ್ಳಬೇಕಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.